ಇತ್ತೀಚಿನ ಸುದ್ದಿರಾಜ್ಯ
ಭಾರಿ ಗಾತ್ರದ ಹೆಬ್ಬಾವುವನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಭಾರಿ ಗಾತ್ರದ ಹೆಬ್ಬಾವುವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿದು ಸಾರ್ವಜನಿಕರು ಸಂಚರಿಸದ ಸ್ಥಳಕ್ಕೆ ಸ್ಥಳಾಂತರಿಸಿದರು.
ತಾಲ್ಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದಲ್ಲಿ ಆನೆ, ಹುಲಿ, ಚಿರತೆ, ಕರಡಿ ಹೀಗೆ ಹಲವಾರು ವನ್ಯ ಜೀವಿಗಳ ತಾಣವಾಗಿದ್ದು, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಿಳಿಗಿರಿರಂಗನಾಥನ ದರ್ಶನಕ್ಕೆ ಬರುತ್ತಿರುತ್ತಾರೆ. ಆಗಾಗ್ಗೆ ಕಾಡಾನೆಗಳು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿರುತ್ತದೆ. ಇದರ ನಡುವೆ ಇದೀಗ ಹೆಬ್ಬಾವಿನ ಸರದಿಯಾಗಿದೆ.
ದಟ್ಟ ಅರಣ್ಯವಾಗಿರುವ ಬಿಳಿಗಿರಿರಂಗನಾಥ ಬೆಟ್ಟದ ಮರದ ಕೆಳಗೆ ಭಾರಿ ಗಾತ್ರದ ಹೆಬ್ಬಾವು ಇರುವುದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಾಗರೂಕತೆಯಿಂದ ಹೆಬ್ಬಾವುವನ್ನು ಹಿಡಿದು ಸಾರ್ವಜನಿಕರು ಸಂಚರಿಸದ ಸ್ಥಳಕ್ಕೆ ಕೊಂಡೊಯ್ದರು.