ಇತ್ತೀಚಿನ ಸುದ್ದಿರಾಜ್ಯ

ಸಾಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಶಕ್ತಿ ಕಟ್ಟಡ ಕಾರ್ಮಿಕ ಸಂಘ ಸ್ಥಾಪನೆ.

ಸಾಗರ ತಾಲ್ಲೂಕು ಪಡವಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿoಗದಹಳ್ಳಿ, ಹಾಲಿನ ಡೈರಿ ಸಭಾಂಗಣದಲ್ಲಿ ಜನಶಕ್ತಿ ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕಿನ ಪ್ರತಿ ಪಂಚಾಯತಿಯ ಮಟ್ಟದಲ್ಲಿ ಕಾರ್ಮಿಕರ ಸಂಘಟನೆ ಮಾಡಲು ಚಾಲನೆ ನೀಡಲಾಯಿತು.
ಈ ಚಾಲನೆಯನ್ನು ವಿಶೇಷವಾಗಿ ಹಿರಿಯ ಕಾರ್ಮಿಕರಾದ ಮಂಜುನಾಥ್ ಆಚಾರ್ ರವರಿಗೆ ಸನ್ಮಾನಿಸುವ ಮೂಲಕ ಉದ್ಘಾಟನೆಯನ್ನು ಆಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷರಾದ ಕುಪೇಂದ್ರ ಆಯನೂರು ಉದ್ಘಾಟಿಸಿದರು.
ನಂತರ ಮಾತನಾಡಿದ ಕುಪೇಂದ್ರ ರವರು. ರಕ್ತವನ್ನು
ಬೆವರು ತರ ಹರಿಸಿ ದುಡಿಯುವವನೆ ಕಾರ್ಮಿಕ ಸಂಘಟನೆಯ ಮೂಲ ಉದ್ದೇಶ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ನೇರವಾಗಿ ತಲುಪಿಸುವುದು. ಕಾಲ ಕಾಲಕ್ಕೆ ಮಾಹಿತಿಗಳನ್ನು ಒದಗಿಸುವುದು ಆಗಿದೆ ಎಂದರು. ಕಾರ್ಮಿಕ ಅಂದ ತಕ್ಷಣ ಅವರಿಗೆ ಸೌಲಭ್ಯ ಸಿಗುವುದಿಲ್ಲ ಅದಕ್ಕೆ ಅವರಿಗೆ ಕಾರ್ಮಿಕ ಕಾರ್ಡ್ ಅವಶ್ಯ ಅದನ್ನ ಮಾಡಿಸಬೇಕು ಎಂದು ಅದರ ಬಗ್ಗೆ ತಾಲೂಕಿನ ಅಧ್ಯಕ್ಷರು ಜವಾಬ್ದಾರಿ ತೆಗೆದುಕೊಂಡು ದಲ್ಲಾಳಿಗಳಿಗೆ ಎಚ್ಚರಿಕೆ ನೀಡಿ ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎoದರು. ಕಾರ್ಮಿಕ ಸಮುದಾಯ ಮುಗ್ದ ಸಮುದಾಯ ಅವರಿಗೆ ಅನ್ಯಾಯ ಆಗೋದಕ್ಕೆ ನಮ್ಮ ಸಂಘಟನೆ ಯಾವತ್ತು ಬಿಡುವುದಿಲ್ಲ ಎಂದು ಹೇಳಿ ಸರಕಾರದಿಂದ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದರ ಮೂಲಕ, ವಿದ್ಯಾರ್ಥಿವೇತನವು ಕಡಿಮೆ ಆಗಿದ್ದು, ಮುಂಬರುವ ದಿನಗಳಲ್ಲಿ fake ಕಾರ್ಡ್ಗಳನ್ನು ಅಮಾನತು ಮಾಡುವದರ ಮೂಲಕ ವಿದ್ಯಾರ್ಥಿ ವೇತನವನ್ನು ಹೆಜ್ಜೆಗೆ ಮಾಡಲು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾದ ಪ್ರಕಾಶರವರು ಮಾತನಾಡಿ ಶಿವಮೊಗ್ಗ ಜಿಲ್ಲೆಯಲ್ಲಿ ಸಂಪಟನೆಗಳು ಬೆಳೆಯಬೇಕು. ಸಾಗರ ತಾಲ್ಲೂಕು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧ್ಯಕ್ಷರಾದ ರಮೇಶ್ ಬಂದಾಗದ್ದೆ ರವರ ನೇತೃತ್ವದಲ್ಲಿ ಸಂಘಟನೆಗಳು ಬೆಳೆಸಬೇಕು ಎಂದು ಹೇಳುತ್ತಾ ಕಾರ್ಮಿಕಂಗೆ ಕೆಲವು ಹಿತನುಡಿಗಳನ್ನು ಹೇಳಿದರು.

ತಾಲ್ಲೂಕು ಅದ್ಯಕ್ಷರಾದ ರಮೇಶ್ ಬಂದಾಗದ್ದೆ ಮಾತನಾಡುತ್ತ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಂಘಟನೆಯನ್ನು ಮಾಡುವ ಉದ್ದೇಶ, ನಿಜವಾದ, ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನುvನಮ್ಮ ಸಂಘಟನೆಯ ಮೂಲಕ ನೇರವಾಗಿ ತಲುಪಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದಲ್ಲಿ ಪಡವಗೋಡು ಗ್ರಾಮ ಪಂಚಾಯತಿಯು ವ್ಯಾಪ್ತಿಯ ನೂರಾರು ಕಾರ್ಮಿಕರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ. ಕುಪೇಂದ್ರ ಆಯನೂರು. ಪ್ರಕಾಶ್. ಸೋಮಶೇಖರ್. ಅಶೋಕ ಪಡವಗೋಡು. ಗಣಪತಿ ತಾಳಗುಪ್ಪ. ಮಂಜು ಪಡವಗೋಡು. ಗಣಪತಿ ವಡ್ನಾಳ. ರವಿಕುಮಾರ್ ಬೆಳೆಯೂರು ಇನ್ನು ಮುoತಾದವರು ಹಾಜರಿದ್ದರು.
ಸ್ವಾಗತ ವನ್ನು ರಮೇಶ್ ಬಂದಗದ್ದೆ ಮಾಡಿದರೆ ನಿರೂಪಣೆಯನ್ನು ಅಶೋಕ್ ಪಡವಗೋಡು ಮಾಡಿದರು….

Related Articles

Leave a Reply

Your email address will not be published. Required fields are marked *

Back to top button