Uncategorized

ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ನಾಡಗೌಡ ಹೇಳಿಕೆ

ಪಟ್ಟಣ ಕ್ಷಿಪ್ರವಾಗಿ ಬೆಳೆಯುತ್ತಿರುವದರಿಂದ ಜನರಿಗೆ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಪ್ರಾತಿನಿಧ್ಯ ಕೊಟ್ಟು ಕೆಲಸ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು. ಶನಿವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡ ಪ್ರಗತಿಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪುರಸಭೆಯ ಕರ ವಸೂಲಿ ವ್ಯವಸ್ಥೆಯು ಉತ್ತಮವಾಗಿದೆ ಆದರೆ ಕೆಲವು ವಾಣಿಜ್ಯ ಮಳಿಗೆಗಳ ಬಾಡಿಗೆ ಸಂಗ್ರಹಿಸುವಲ್ಲಿ ವಿಳಂಬವಾಗಿದೆ ಅದನ್ನು ತೀರ್ವಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಉತಾರೆ ವಿತರಣೆಯ ಸಮಸ್ಯೆಯನ್ನು ಸೂಕ್ತವಾಗಿ ಪರಿಹರಿಸಲು ಸೂಚನೆ ನೀಡಿದ್ದು ಎಲ್ಲಾ ದಾಖಲೆ ಪತ್ರಗಳು ಸರಿಯಾಗಿದ್ದಲ್ಲಿ ಶೀಘ್ರವಾಗಿ ವಿತರಣೆಗೆ ಮಾಡಲು ತಿಳಿಸಿದ್ದೇನೆ. ಪಟ್ಟಣದಲ್ಲಿ ಹಿಂದೆ ನಡೆದ ಕೆಲವು ಕಾಮಗಾರಿಗಳು ಕಳಪೆ ಮಟ್ಟದ್ದಾಗಿರುವುದರ ಜೊತೆಗೆ ಕೆಲವು ಸ್ಥಗಿತಗೊಂಡಿವೆ ಆದರೂ ಗೊತ್ತಿಗದಾರರು 3.17 ಲಕ್ಷ ಬಿಲ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ ಇಂಥವರ ವಿರುದ್ಧ ಕಠಿಣ ಕಾನೂನು ಜರುಗಿಸುವಂತಾಗಲು ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದ ಅವರು ಬೀದಿ ದೀಪದ ಸಮರ್ಪಕ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿಷ್ಕಾಳಜಿ ತೋರಬಾರದೆಂದು ಆದೇಶಿಸಿದ್ದೇನೆ. ಪುರಸಭೆ ವ್ಯಾಪ್ತಿಯ ಕೆಲವು ಉದ್ಯಾನವನಗಳನ್ನು ಅತಿಕ್ರಮಣದ ಮಾಹಿತಿ ಇದೆ ಇದರ ಕುರಿತು ವರದಿ ಪಡೆದು ಕ್ರಮ ವಹಿಸಲಾಗುವುದು. ಕೆರೆ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಸರ್ಕಾರದಿಂದ ಹೆಚ್ಚು ಅನುದಾನವನ್ನು ಪಡೆದುಕೊಂಡು ಹಾಗೂ ಎಸ್ ಎಫ್ ಸಿ ಅನುದಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದ ಅವರು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿರುವೆ. ನಿಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಕಾರ್ಯಗಳನ್ನು ಮಾಡಲಾಗುವುದು ಎಂದರು. ಸಭೆಯಲ್ಲಿ ಯೋಜನಾ ನಿರ್ದೇಶಕ ಬಿ.ಎ.ಸೌದಾಘರ. ಪುರಸಭೆ ಮುಖ್ಯಾಧಿಕಾರಿ ಮೋಹನ ಜಾದವ. ಪಿಎಸ್ಐ ರಾಮನಗೌಡ ಸಂಕನಾಳ.ಸದಸ್ಯರಾದ ಯಾಸೀನ ಮಮದಾಪೂರ. ಅಕ್ಕಮಹಾದೇವಿ ಕಟ್ಟಿಮನಿ.ಡಿ.ವಿ. ಪಾಟೀಲ.ಮಲ್ಲಿಕಾರ್ಜುನ ಪಟ್ಟಣಶೆಟ್ಟಿ. ಅಣ್ಣಪ್ಪ ಜಗತಾಪ. ಪರಶುರಾಮ ತಂಗಡಗಿ. ಮುಸ್ತಫಾ ಚೌಧರಿ. ಮುದುಕಪ್ಪ ಬಡಿಗೇರ. ನಿಂಗಪ್ಪ ಕುಂಟೋಜಿ.ಇಸ್ಮಾಯೀಲಬಿ ಮಕಾನದಾರ.ಸಾಜೀದಾಬೇಗಂ.ಎಂ. ಬೇಪಾರಿ.ಶಾಂತಾಬಾಯಿ ಹೊಟ್ಟಿ. ಜುಬೇದಾ ಹುಸೇನಸಾಬ ಜಮಾದಾರ. ಫಾತಿಮಾಬಿ ಖಾಜಾಬಸರಿ. ಪುರಸಭೆ ಸಿಬ್ಬಂದಿಗಳಾದ ಸಿದ್ದಲಿಂಗಯ್ಯ ಚೊಂಡಿಪಾಟೀಲ.ಶ್ರೀಪಾದ ಜೋಶಿ. ಶಿವಾನಂದ ಜುಮನಾಳ.ಸಂದೀಪ ವಠಾರ. ಸುರೇಶ ಅಮರಣ್ಣವರ. ಡಿ.ಬಿ.ಜಾನ್ವೇಕರ.ಸಿದ್ದಪ್ಪ ಕೊಳ್ಳಿ ಮತ್ತಿತರರು ಇದ್ದರು.

ವರದಿ : ಸುನೀಲ ಎಲ್ ತಳವಾರ

Related Articles

Leave a Reply

Your email address will not be published. Required fields are marked *

Back to top button