ಇತ್ತೀಚಿನ ಸುದ್ದಿರಾಜ್ಯ

ದೇವಾಲಯಗಳ ಜೀಣೋದ್ಧಾರದಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ: ಡಾ.ಸಿ.ಸೋಮಶೇಖರ್

ಹೊಸಕೋಟೆ: ತೊರ‍್ನಹಳ್ಳಿ ಸಮೀಪದ ಮುಗಬಾಳ ಗ್ರಾಮದ ಶ್ರೀ ವೀರಭದ್ರಸ್ವಾಮಿ ಸೇವಾ ಪ್ರತಿಷ್ಟಾನ ವತಿಯಿಂದ ಪುರಾತನ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ಪಕ್ಕದಲ್ಲಿ ಪುರಾತನ ಅಶ್ವಥಕಟ್ಟೆ ನವೀಕರಣ ಪರಿವಾರ ನಾಗದೇವರುಗಳ ಪ್ರತಿಷ್ಟಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಬೆಳ್ಳಾವಿ ಸಂಸ್ಥಾನ ಮಠದ ಶ್ರೀಮಹಾಂತ ಶಿವಾಚಾರ್ಯ ಸ್ವಾಮಿಗಳು ಹಾಗೂ ನಾಗಲಾಪುರ ಸಂಸ್ಥಾನ ಮಠದ ಶ್ರೀತೇಜೆಶಲಿಂಗಸ್ವಾಮಿಗಳು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ದೇವಾಲಯದ ಗೌರವಾಧ್ಯಕ್ಷರು ನೇತೃತ್ವದಲ್ಲಿ ನಡೆಯಿತು.

ಪೂಜಾ ಕಾರ್ಯಕ್ರಮ ಅಂಗವಾಗಿ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ, ಗಂಗೆ ಪೂಜೆ, ಗಣಪತಿ ಪೂಜೆ, ಕಳಶ ಸ್ಥಾಪನೆ, ಹೋಮ, ಹವನ, ವೇದ ಮಂತ್ರ ಪಾರಾಯಣ, ವಿಶೇಷ ಆಭರಣ ಹಾಗೂ ಹೂವಿನ ಅಲಂಕಾರ, ಮಹಾಮಂಗಳಾರಿ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭದಲ್ಲಿ ಡಾ.ಸಿ.ಸೋಮಶೇಖರ್ ಮಾತನಾಡಿ ಮುಗಬಾಳದ ವೀರಭದ್ರಸ್ವಾಮಿ ದೇವಾಲಯ ಈ ಹಿಂದೆ ಜೀರ್ಣೋದ್ಧಾರ ಮಾಡಿ ಅದೇ ರೀತಿಯಲ್ಲಿ ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ದಾರ ಮಾಡಲಾಗಿದೆ. ಅದೇ ರೀತಿಯಲ್ಲಿ ನಾಗದೇವತೆಗಳ ಪ್ರತಿಷ್ಟಾಪನೆ ಮಾಡಲು ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ನಮ್ಮ ಪೂರ್ವಿಕರು, ರಾಜಮಹಾರಾಜರು ನಮ್ಮ ಸಮಾಜದಲ್ಲಿ ಸಹಸ್ರಾರು ದೇವಾಲಯಗಳನ್ನು ಕಟ್ಟಿ ನಮ್ಮಿಂದ ಮರೆಯಾಗಿದ್ದಾರೆ. ಆದರೆ ಅವರು ಕಟ್ಟಿರುವ ದೇವಾಲಯಗಳು ಇಂದಿಗೂ ಅವರ ಹೆಸರನ್ನು ಹೇಳುತ್ತಿವೆ. ಆದರೆ ಅವರು ಕಟ್ಟಿರುವ ದೇವಾಲಯಗಳು ಸಾಕಷ್ಟು ಶಿಥಿಲಗೊಂಡಿರುವ ಕಾರಣ ಪುನರ್ ಪ್ರತಿಷ್ಠಾಪನೆ ಮಾಡುವ ಕೆಲಸ ಆಗಬೇಕು. ದೇವಾಲಯಗಳ ಜೀಣೋದ್ಧಾರದಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ ಎಂದರು. ತಿರುಮಲ ತಿರುಪತಿಗೆ ಹೋಗಲು ಅತಿಥಿ ಗೃಹವನ್ನು ದೇವಾಲಯದ ಪಕ್ಕದಲ್ಲಿ ನಿರ್ಮಾಣ ಮಾಡಲು ದಾನಿಗಳು ಸಹಕಾರ ನೀಡಬೇಕೆಂದರು.

ಈ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು ಹಾಗೂ ದಾನಿಗಳನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ.ಸಿ.ಸೋಮಶೇಖರ್ ಸರ್ವಮಂಗಳ ದಂಪತಿಗಳು ಸುವರ್ಣ ತುಲಾಬಾರ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಳ್ಳಾವಿ ಸಂಸ್ಥಾನ ಮಠದ ಶ್ರೀಮಹಾಂತ ಶಿವಾಚಾರ್ಯ ಸ್ವಾಮಿಗಳು ಹಾಗೂ ನಾಗಲಾಪುರ ಸಂಸ್ಥಾನ ಮಠದ ಶ್ರೀತೇಜೆಶಲಿಂಗಸ್ವಾಮಿಗಳು ಆರ್ಶಿವಚನ ನೀಡಿದರು.

ಅಧ್ಯಕ್ಷ ಮಂಜುನಾಥ್ ಶ್ರಾಫ್, ಕಾರ್ಯದರ್ಶಿ ವೀರಸ್ವಾಮಿಗೌಡ, ಖಜಾಂಚಿ ಜ್ಞಾನಮೂರ್ತಿ, ಸದಸ್ಯರಾದ ಎ.ಎಸ್.ವಿ.ಎನ್.ಎಸ್ ಸಂಘದ ಅಧ್ಯಕ್ಷ ಎಸ್.ಪ್ರಕಾಶ್, ಕಾರ್ಯದರ್ಶಿ ಎಂ.ಎಸ್.ಕೃಷ್ಣಮೂರ್ತಿ, ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಹರಿಕಥೆ ದಾಸರಾದ ಜ್ಞಾನಮೂರ್ತಿ, ಅರ್ಚಕರಾದ ನಟರಾಜ ಶಾಸ್ತೀ, ಸಿದ್ದಲಿಂಗದೇವರು, ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button