ಶಿವಾಜಿಯ ರಾಷ್ಟ್ರಪ್ರೇಮ ಅವರ ತತ್ತ್ವಾದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಿ:
ಶಿವಾಜಿಯ ರಾಷ್ಟ್ರಪ್ರೇಮ ಅವರ ತತ್ತ್ವಾದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಿ: ನೇತಾ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧ ಸಭಾಭವನದಲ್ಲಿ ಸೋಮವಾರ ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ೩೯೭ರ ಜಯಂತ್ಯೋತ್ಸವ ಕಾರ್ಯಕ್ರಮದ ಮರೆವಣಿಗೆಗೆ ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಗಣ್ಯರಾದ ಎಂ ಬಿ ನಾವದಗಿಯವರು ಸಂಗಮೇಶ ಬಿರಾದಾರ(ಜಟಿಸಿ) ಧ್ವಜಾರೋಹಣ ನೆರವೇರಿಸಿ ಮೆರವಣಿಗೆ ಚಾಲನೆ ನೀಡಿದರು.
ಮುದ್ದೇಬಿಹಾಳ: ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ ಈ ನಿಟ್ಟಿನಲ್ಲಿ ಇಂದಿನ ಯುವಕರು ತಮ್ಮ ಶಿಕ್ಷಣದ ಜೊತೆಗೆ ಅವರ ರಾಷ್ಟ್ರಪ್ರೇಮ ಅವರ ತತ್ತ್ವಾದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುಬೇಕು ಎಂದು ಮರಾಠಾ ಸಮಾಜದ ತಾಲೂಕಾ ಉಪಾಧ್ಯಕ್ಷ ನೇತಾಜಿ ನಲವಡೆ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧ ಸಭಾಭವನದಲ್ಲಿ ಸೋಮವಾರ ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ೩೯೭ರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ೧೬ನೇ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಹೊಂದಿದ್ದರು, ತಾಯಿ ಜೀಜಾಬಾಯಿ ಅವರು ಶಿವಾಜಿ ಮಹಾರಾಜರಿಗೆ ಚಿಕ್ಕಂದಿನಲ್ಲೆರಾಮಾಯಣ, ಮಹಾಭಾರತದ ಕಥೆಗಳು, ದೇಶಕಟ್ಟುವಲ್ಲಿಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಅವರಲ್ಲಿಆದರ್ಶಗಳನ್ನು ತುಂಬುತ್ತಿದ್ದರು. ಮಾತ್ರವಲ್ಲದೇ ಶಿವಾಜಿಗೆ ಯುದ್ಧ ಕಲೆ ಕಲಿಸಿದ್ದಳು ಎಂತಹ ಕಷ್ಟಗಳು ಬಂದರೂ ಅದನ್ನು ತಾಳ್ಮೇಯಿಂದ ಎದುರಿಸುವ ಅವರು ಹೊಂದಿದ್ದರು, ಅವರೊಬ್ಬ ಅಪ್ರತಿಮ ಹೋರಾಟ, ವಿಭಿನ್ನ ಯುದ್ಧಕಲೆ ಸಂಘಟನಾ ಚಾತುರ್ಯ ಆದರ್ಶ ದೇಶಪ್ರೇಮದ ಮೂಲಕ ಇಂದಿಗೂ ಎಲ್ಲರೂ ಗೌರವಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಕಾರಣ ಇಂದಿನ ತಾಯಂದಿರರು ಜೀಜಾಬಾಯಿಯವರಂತೆ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಹೇಳಿಕೊಡಬೇಕು ಎಂದರು.
ಈ ವೇಳೆ ಉಪನ್ಯಾಸಕ ರಾಜನಾರಾಯಣ ನಲವಡೆಯವರು ಪ್ರಾಸ್ಥಾವಿಕವಾಗಿ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ ಮತ್ತು ಸಾಹಸದ ಸಂಕೇತವಾಗಿದ್ದರು. ಅವರು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತರಲ್ಲ, ಅವರು ವಿಶ್ವಚೇತನರು ಎಂದು ಕರೆಯುತ್ತಾರೆ. ಛತ್ರಪತಿ ಶಿವಾಜಿಯು ಅತ್ಯಂತ ಧೈರ್ಯಶಾಲಿ ವೀರ ಪರಾಕ್ರಮಿ ಸಾಮ್ರಾಟನಾಗಿ ಭಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವಾಜಿ ಅವರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು. ಇನ್ನು ಕೆಲವರು ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುತ್ತಾರೆ. ದಕ್ಕಿಣ ಭಾರತದಲ್ಲಿ ಇಂದಿಗೂ ಕೂಡ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಶಿವಾಜಿಯ ನ್ಯಾಯಯುತ ಆಡಳಿತವಾಗಿದೆ. ಭಾರತ ಭೂಮಿ ಅನಾದಿಕಾಲದಿಂದಲೂ ಅನೇಕ ಬಲಿಷ್ಠ, ಧೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ. ತಮ್ಮ ತಾಯಿನಾಡು, ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು ಎಂದರು.
ಇದಕ್ಕೂ ಮೊದಲು ಪಟ್ಟಣದ ಕಿಲ್ಲಾದಲ್ಲಿರುವ ಶ್ರೀ ಹನುಮಾನ ಮಂದಿರದಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಭಾವಚಿತ್ರ ಹೊತ್ತು ಮುತೈದೆಯರಿಂದ ಕುಂಬ ಕಳಶದೊಂದಿಗೆ ಬ್ರಹತ್ ಮೆರವಣಿಗೆ ನಡೆಸಲಾಯಿತು ಈ ವೇಳೆ ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಗಣ್ಯರಾದ ಎಂ ಬಿ ನಾವದಗಿಯವರು ಸಂಗಮೇಶ ಬಿರಾದಾರ(ಜಟಿಸಿ) ಧ್ವಜಾರೋಹಣ ನೆರವೇರಿಸಿ ಮೆರವಣಿಗೆ ಚಾಲನೆ ನೀಡಿದರು,
ಬಿಜೆಪಿ ನಾಯಕಿ ಕಾಶಿಬಾಯಿ ಶಿವಯೋಗೇಪ್ಪ ರಾಂಪೂರ,ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಭಾರತಿ ನಲವಡೆ, ಶೋಭಾ ಘಾಟಗೆ, ವೀಣಾ ಜಾಧವ, ಭರತ್ ಭೋಸಲೆ, ರವಿ ಭೋಸಲೆ, ಯಶವಂತ ಕಲಾಲ,ನೇತಾಜಿ ನಲವಡೆ, ಮಾರುತಿ ನಲವಡೆ, ರಾಘವೇಂದ್ರ ಘಾಟಗೆ, ಸತೀಶ ಕುಲಕರ್ಣಿ, ಚಂದ್ರಶೇಖರ ಕಲಾಲ, ಕಿರಣ ದೂದಾನೆ, ಹಣಮಂತ ನಲವಡೆ, ಅನೀಲ ಜಾಧವ, ರಾಜು ಜಾಧವ, ಉದಯ ರಾಯಚೂರ, ರಾಘವೇಂದ್ರ ನಲವಡೆ, ಶಿವಾಜಿ ಬಿಜಾಪೂರ, ಸಚೀನ ಸಾಳುಂಕೆ, ಸಂತೋಷ ಚವ್ಹಾಣ, ವಿಶ್ವನಾಥ ಶಿಂಧೆ, ತಾನಾಜಿ ಜಗತಾಪ, ತಾನಾಜಿ ಘೋರ್ಪಡೆ, ಅಜೇಯ ಭೋಸಲೆ,