ಇತ್ತೀಚಿನ ಸುದ್ದಿರಾಜಕೀಯರಾಜ್ಯ

ರಾಜ್ಯದ ಕೋಳಿ ಸಾಕಾಣಿಕೆಗಾರರ ಸಮಗ್ರ ಅಭಿವೃದ್ದಿಗೆ ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ನೂತನ ಅಧ್ಯಕ್ಷ ಚಂದ್ರಶೇಖರ್

ರಾಜ್ಯದ ಕೋಳಿ ಸಾಕಾಣಿಕೆಗಾರರ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ನೂತನ ಅಧ್ಯಕ್ಷ ಚಂದ್ರಶೇಖರ್ (ಮೂಡ್ಯ ಚಂದ್ರು) ಭರವಸೆ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರರು ಸಾಕಷ್ಟು ಸಂಖ್ಯೆಯಲ್ಲಿದ್ದು ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಳಿ ಸಾಕಾಣಿಕೆಗಾರರಿಗೆ ಹಲವಾರು ರೀತಿಯಲ್ಲಿ ಕಾನೂನಿನ ತೊಡಕುಗಳಿದ್ದು, ಇದರಿಂದ ಕೋಳಿಸಾಕಾಣಿಕೆಗಾರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇವುಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡಿ ಕೋಳಿ ಸಾಕಾಣಿಕೆಗಾರರಿಗೆ ನ್ಯಾಯ ದೊರಕಿಸಿಕೊಟ್ಟು ಯಾವುದೆ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ವ್ಯಾಪ್ತಿ ಪ್ರವಾಸಗೊಂಡು ಸಭೆ, ಸಮಾರಂಭಗಳನ್ನು ಹಮ್ಮಿಕೊಂಡು ಕೋಳಿ ಸಾಕಾಣಿಕೆಗಾರರ ಕುಂದು ಕೊರತೆಗಳನ್ನು ಆಲಿಸಿ ರಾಜ್ಯ ಮತ್ತು ಕೇಂದ್ರ ಸಕರ್ಾರದ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಹೋರಾಟ ಮಾಡಲಾಗುವುದು ಎಂದರು.
ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ನೂತನ ಉಪಾಧ್ಯಕ್ಷ ತ್ರಿನಾಥ್ ರೆಡ್ಡಿ, ನಿರ್ದೇಶಕರಾದ ದೇವರಾಜು ಮಲ್ಲಾಪುರ, ಕೇಶವರೆಡ್ಡಿ, ಎಸ್.ಸಿದ್ದೇಗೌಡ ಕೆ.ಅರ್.ನಗರ ಇತರರು ಇದ್ದರು.
ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ನೂತನ ಅಧ್ಯಕ್ಷ ಚಂದ್ರಶೇಖರ್ (ಮೂಡ್ಯ ಚಂದ್ರು) ಹಾಗೂ ಉಪಾಧ್ಯಕ್ಷ ತ್ರಿನಾಥ್ ರೆಡ್ಡಿ ಅಭಿನಂದಿಸಲಾಯಿತು. ದೇವರಾಜು ಮಲ್ಲಾಪುರ, ಕೇಶವರೆಡ್ಡಿ, ಎಸ್. ಸಿದ್ದೇಗೌಡ ಕೆ.ಅರ್.ನಗರ ಇದ್ದರು.

Related Articles

Leave a Reply

Your email address will not be published. Required fields are marked *

Back to top button