ಇತ್ತೀಚಿನ ಸುದ್ದಿರಾಜ್ಯ

ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸುವ ಮೂಲಕ ರೈತ ಸಂಕುಲಕ್ಕೆ ನ್ಯಾಯಕೊಡಿಸಲು ಸಂಗ್ರಾಮಕ್ಕೆ ಅಡಿಗಲ್ಲು ಹಾಕಿದ್ದರು.

ಕರ್ನಾಟಕ ರಾಜ್ಯ ರೈತ ಸಂಘವನ್ನು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿಸುವ ಮೂಲಕ ರೈತ ಸಂಕುಲಕ್ಕೆ ನ್ಯಾಯಕೊಡಿಸಲು ಭಾರತದಲ್ಲಿ 2 ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಗಲ್ಲು ಹಾಕಿದ್ದರು ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ನಗ್ನ ಥಿಯೇಟರ್ ತಂಡದ ಕಲಾವಿದರು ನಡೆಸಿಕೊಟ್ಟ ಮತ್ತು ಪ್ರೊ.ನಂಜುಂಡಸ್ವಾಮಿ ಜೀವನಾಧರಿತ ಡೈರೆಕ್ಟ್ ಆಕ್ಷನ್ ಎಂಬ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆನ್ನು ಬಾಗಿದವರ ಧ್ವನಿಯಾಗಿ, ಅನ್ನದಾತರ ನೆರವಿಗೆ ನಿಲ್ಲುವ ಸಲುವಾಗಿ ರೈತ ಸಂಘವನ್ನು ಸ್ಥಾಪನೆ ಮಾಡಿ ಇಡೀ ಬದುಕನ್ನು ಹೋರಾಟಕ್ಕಾಗಿ ಮುಡುಪಿಟ್ಟವರು ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟದಲ್ಲಿ ವಿಚಾರ, ಸಿದ್ದಾಂತ, ಇತಿಹಾಸ ತಿರುಚುವ ಸಂಸ್ಕೃತಿ ನಾಗಲೋಟದಲ್ಲಿ ಬೆಳೆಯತ್ತಿದೆ. ತಲೆಮಾರುಗಳು ಬದಲಾಗುತ್ತಿವೆ ಆದರೆ, ನಂಜುಂಡಸ್ವಾಮಿ ಅವರ ವಿಚಾರಧಾರೆ ನಿಂತ ನೀರಾಗಿದೆ, ಅದನ್ನು ಪ್ರತಿ ಹಳ್ಳಿ ಹಳ್ಳಿಗೂ ತಲುಪಿಸುವ ಕೆಲಸವನ್ನು ರೈತ ಸಂಘದವರು ಮಾಡಬೇಕು ಎಂದು ಕರೆ ನೀಡಿದರು.
ರೈತರು ಚಳವಳಿಗಳು ಒಡಕಾಗಿರುವುದು ನಿಜ, ಆದರೆ ದುರ್ಬಲವಾಗಿಲ್ಲ. ವ್ಯಕ್ತಿ ಪೂಜೆ ಮಾಡುವುದನ್ನು ಬಿಟ್ಟು ಸಿದ್ದಾಂತ ಅರ್ಥ ಮಾಡಿಕೊಂಡರೆ ಪ್ರತಿಯೊಬ್ಬರು ಒಂದಾಗಬಹುದು ಎಂದು ಹೇಳಿದರು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಂಡ ಭಾರತ ಜಾತಿ, ಮತ, ಧರ್ಮ ಎಂಬ ದಳ್ಳುರಿಯಲ್ಲಿ ಬೆಯುತ್ತಿದೆ. ಭಾರತದ ಮೂಲ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಇದು ಭವಿಷ್ಯದಲ್ಲಿ ನಮ್ಮಗೆಲ್ಲರಿಗೂ ದೊಡ್ಡ ಒಡೆತ ಬೀಳಲಿದೆ. ಅದಕ್ಕೆ ಪರಿಹಾರ ಪ್ರೊ.ನಂಜುಂಡಸ್ವಾಮಿ ಅವರ ಚಿಂತೆನಗಳು ಎಂದರು.
ನಾಟಕ ನಿರ್ದೇಶಕ ನರೇಂದ್ರಬಾಬು, ಹಿರಿಯ ರೈತ ಮುಖಂಡರಾದ ಬಾಗಲಕೊಟೆ ಸುಭಾಷ್, ಪಿ.ಕೆ.ನಾಗಣ್ಣ, ನ.ಲಿ.ಕೃಷ್ಣ ಇದ್ದರು.

ಪೋಟೋ

ಮದ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ನಗ್ನ ಥಿಯೇಟರ್ ತಂಡದ ಕಲಾವಿದರು ನಡೆಸಿಕೊಟ್ಟ ಮತ್ತು ಪ್ರೊ.ನಂಜುಂಡಸ್ವಾಮಿ ಅವರ ಜೀವನಾಧರಿತ ಡೈರೆಕ್ಟ್ ಆಕ್ಷನ್ ಎಂಬ ನಾಟಕಕ್ಕೆ ಪ್ರೋ ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button