ಇತ್ತೀಚಿನ ಸುದ್ದಿರಾಜ್ಯ

ತಾಳಿಕೋಟಿ ತಾಲೂಕಿನಲ್ಲಿ ಫೆ.19 ರಿಂದ 22 ರವರೆಗೆ ಸಂವಿಧಾನ ಜಾಗೃತಿ ಜಾಥಾ

ತಾಳಿಕೋಟಿ ತಾಲೂಕಿನಲ್ಲಿ ಫೆ.19 ರಿಂದ 22 ರವರೆಗೆ ಸಂವಿಧಾನ ಜಾಗೃತಿ ಜಾಥಾ

ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ.ಫೆ.19 ರಿಂದ 22 ರವರೆಗೆ ತಾಲೂಕಿನಾದ್ಯಾಂತ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರ ರಥವು ಸಂಚರಿಸಲಿದೆ. ಜನಸಾಮಾನ್ಯರಲ್ಲಿ ಸಂವಿಧಾನದ ಆಶಯಗಳ ತಿಳುವಳಿಕೆ ಮೂಡಿಸುವುದು ಇದರ ಉದ್ದೇಶವಾಗಿದೆ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಇಲಾಖೆಯೊಂದಿಗೆ ಎಲ್ಲರ ಸಹಕಾರವು ಅಗತ್ಯವಾಗಿದೆ ಎಂದು ತಹಸಿಲ್ದಾರ ಕೀರ್ತಿ ಚಾಲಕ್ ಹೇಳಿದರು. ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ಜಾಥಾ ಹಿನ್ನೆಲೆ ಕಾರ್ಯಕ್ರಮದ ರೂಪ ರೇಷೆಗಳನ್ನು ಸಿದ್ಧಪಡಿಸಲು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾಥಾದ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಪಾಲಿಸುವಂತೆ ಅಧಿಕಾರಿಗಳಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದರು. ಈ ಜಾಥಾದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಕಡ್ಡಾಯವಾಗಿ ಭಾಗವಹಿಸಬೇಕು ಪ್ರಭಲ ಕಾರಣಗಳಿಲ್ಲದೆ ಅನುಪಸ್ಥಿತಿ ಆದರೆ ಅಂತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು.ಜಾಥಾಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು. ಸಂವಿಧಾನದ ಆಶಯಗಳನ್ನು ಗ್ರಾಮ ಮಟ್ಟದಲ್ಲಿ ತಲುಪಿಸುವುದು ಈಜಾಥಾದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಇದು ಈಡೇರಿವಂತಾಗಲು ತಾಲೂಕಿನ ಎಲ್ಲ ಪಿಡಿಒ ಗಳಿಗೆ ಸೂಚನೆಯನ್ನು ನೀಡಲಾಗಿದೆ ಇದರ ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಿದ್ದಾರೆ ಎಂದರು. ದಲಿತ ಯುವ ಮುಖಂಡರಾದ ಜೈ ಭೀಮ್ ಮುತ್ತಗಿ. ಬಸವರಾಜ ಕಟ್ಟಿಮನಿ. ಸಿದ್ದು ಬಾರಿಗಿಡದ (ಭಂಟನೂರ). ದೇವು ಹಾದಿಮನಿ ನಾಗೇಶ್ ಕಟ್ಟಿಮನಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಆರ್. ಎಲ್. ಕೊಪ್ಪದ .ಪ್ರಭುಗೌಡ ಮದರಕಲ್ಲ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿ ಸಂವಿಧಾನದ ಮೂಲ ಆಶಯ ತಿಳಿಯುವಂತಾಗಲು ಉಪನ್ಯಾಸ ಕಾರ್ಯಕ್ರಮಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ಜಾಥಾ ಕಾರ್ಯಕ್ರಮದ ವಿವರಣೆಗಳನ್ನು ಸಭೆಗೆ ತಿಳಿಸಿದರು. ತಾಪಂ ಇಒ ಬಿ.ಆರ್. ಬಿರಾದಾರ.ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ. ಶಿರಸ್ತೇದಾರ ಜೆ.ಆರ್.ಜೈನಾಪೂರ. ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ.ಡಿ.ಬಿ.ರಾಠೋಡ. ಪಿಎಸ್ಐ ಎಂ.ಡಿ.ಘೋರಿ. ಮುಖಂಡರಾದ ನಿವೃತ್ತ ಎಸ್ಪಿ ಎಸ್. ಬಿ. ಕಟ್ಟಿಮನಿ. ಮುತ್ತಪ್ಪ ಚಮಲಾಪೂರ. ಮಾಳಪ್ಪ ಬಿಳೇಬಾವಿ ಮಲ್ಲಪ್ಪ ಚಲಾಕರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ. ಮಸೂಮ ಸಾಬ್ ಕೆಂಬಾವಿ. ಎಂ ಎಂ ಮದರ್ಕಲ್. ರಾಜು ಹಂಚಾಟೆ. ವಿಠ್ಠಲ ಮೋಹಿತೆ ಪುರಸಭೆ ಸದಸ್ಯರಾದ ಎಂಕೆ ಪಟ್ಟಣಶೆಟ್ಟಿ ಅಣ್ಣಾರಾವ್ ಜಗತಾಪ. ಪರಶುರಾಮ ತಂಗಡಗಿ. ಗುರುಪ್ರಸಾದ ಬಿಜಿ ಗೊಟಖಂಡಕಿ. ಕಾಶಿನಾಥ ಕಾರಗನೂರ. ಮಹೇಶ್ ಚಲವಾದಿ ಶರಣು ತಳವಾರ ಬಸ್ಸು ಮಾದರ. ಗೋಪಾಲ್ ಕಟ್ಟಿಮನಿ. ಶಂಕರ ಪಡಸಾಲಿ ಹನುಮಂತ ಎಂಟಮಾನ. ಮಹದೇವಪ್ಪ ಲಿಂಗದಳ್ಳಿ ತಾಲೂಕ ಮಟ್ಟದ ಅಧಿಕಾರಿಗಳು ಸಂಘ-ಸಂಸ್ಥೆಗಳ ಮುಖ್ಯಸ್ಥರು ದಲಿತ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು. ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.

ವರದಿ ಸುನೀಲ್ ಎಲ್ ತಳವಾರ ಮುಂಜಾನೆ ವಾರ್ತೆ ತಾಳಿಕೋಟಿ

Related Articles

Leave a Reply

Your email address will not be published. Required fields are marked *

Back to top button