ಇತ್ತೀಚಿನ ಸುದ್ದಿರಾಜಕೀಯರಾಜ್ಯ

ನಿಮ್ಮೆಲ್ಲರ ಸಹಕಾರ ನನಗೆ ಬೇಕು- ಶಾಸಕ ರಾಜುಗೌಡ

ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ. ಸಮೀಪದ ಗುಂಡಕನಾಳ ಗ್ರಾಮದಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇಲ್ಲ ನಾನು ವಿರೋಧ ಪಕ್ಷದ ಶಾಸಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅನುದಾನದ ತುಂಬಾ ಕೊರತೆ ಇದೆ ಇದರ ಮಧ್ಯೆಯೂ ನಾನು ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು. ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ರೂ.495 ಲಕ್ಷ ಮೊತ್ತದ ಗುಂಡಕ ನಾಳ -ಬ.ಸಾಲವಾಡಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಗ್ರಾಮಸ್ಥರು ಹಮ್ಮಿಕೊಂಡ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಕಾರ್ಯಗಳ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿರುವ ನಮ್ಮ ವಿರೋಧಿಗಳಿಗೆ ಇಂದು ನಡೆಯುತ್ತಿರುವ ಈ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವೇ ಉತ್ತರವಾಗಿದೆ. ನಮ್ಮ ಕಾರ್ಯಕರ್ತರು ಅಧೈರ್ಯರಾಗಬಾರದು ನಾನು ಸದಾ ನಿಮ್ಮ ಜೊತೆಯಲ್ಲಿ ಇದ್ದೇನೆ ಈ ಭಾಗದಲ್ಲಿ ನೀವು ನನಗೆ ಅತ್ಯಧಿಕ ಮತಗಳನ್ನು ನೀಡಿ ಆಶೀರ್ವಾದ ಮಾಡಿದ್ದೀರಿ ನಮ್ಮ ಎಲ್ಲ ಭಾವನೆಗಳಿಗೆ ನಾನು ಸ್ಪಂದಿಸುವ ಕೆಲಸ ಮಾಡುತ್ತೇನೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಸ್ವಲ್ಪ ತೊಂದರೆಯಾಗಿರುವುದು ನಿಜ ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ನಾವೆಲ್ಲರೂ ಕೂಡಿ ಅಭಿವೃದ್ಧಿಯ ಕಾರ್ಯಗಳನ್ನು ಮಾಡೋಣ ಎಂದರು. ಜಿ ಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ. ತಾಲೂಕ ಕಾರ್ಯಧ್ಯಕ್ಷ ಮಡುಸೌಕಾರ.ಬಿರಾದಾರ ಮಾತನಾಡಿದರು. ಗುಂಡಕನಾಳದ ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಎಂಎಂ ಪೊಲೀಸ್ ಪಾಟೀಲ. ರಾಜುಗೌಡ ಕೋಳೂರು. ಗೌಡಪ್ಪ ಗೌಡ ತುಂಬಗಿ. ಅಶೋಕ ಅಸ್ಕಿ .ವಿಶ್ವನಾಥ್ ನಾಡಗೌಡ .ಶಂಕರ್ ಗೌಡ ದೇಸಾಯಿ. ನಿಂಗಣ್ಣ ಕಲಬುರ್ಗಿ. ವೀರೇಶ್ ಕಾರಗನೂರ. ಬಲವಂತರಾಯ ನಡಹಳ್ಳಿ. ಪಂಚಾಕ್ಷಯ್ಯ ಮುತ್ಯ .ನಿಂಗಣ್ಣ ಹವಾಲ್ದಾರ .ಗುರನಗೌಡ ಪಾಟೀಲ. ಶಾಂತು ಬರದೇನಾಳ ಇದ್ದರು..

ವರದಿ ಸುನೀಲ್ ಎಲ್ ತಳವಾರ ಮುಂಜಾನೆ ವಾರ್ತೆ ತಾಳಿಕೋಟಿ

Related Articles

Leave a Reply

Your email address will not be published. Required fields are marked *

Back to top button