404 ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ಗಳ ನೇಮಕಕ್ಕೆ ಹೈಕೋರ್ಟ್ ಅನುಮತಿ
ಬೆಂಗಳೂರು, ಫೆಬ್ರವರಿ 7: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಗೆ 404 ಸಹಾಯಕ ಇಂಜಿನಿಯರ್ಗಳ ನೇಮಕಕ್ಕೆ ಷರತ್ತಿನ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಲಾಗಿದೆ. ನೇಮಕಾತಿ ಹೈಕೋರ್ಟ್ನ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕು. ಹೈಕೋರ್ಟ್ನ ತೀರ್ಪಿಗನುಗುಣವಾಗಿ ಸೇವಾ ಜೇಷ್ಠತೆ ಕಾಯ್ದುಕೊಳ್ಳಬೇಕು ಎಂದು ಸಿಜೆ ಪಿ.ಎಸ್.ದಿನೇಶ್ ಕುಮಾರ್, ನ್ಯಾ.ಟಿ.ಜಿ.ಶಿವಶಂಕರೇಗೌಡರಿದ್ದ ಪೀಠ ಆದೇಶ ನೀಡಿದೆ. ಆಯ್ಕೆ ಪರೀಕ್ಷೆ ಪ್ರಕ್ರಿಯೆಯಲ್ಲಿ ಲೋಪವೆಂದು ಕೆಲ ಅಭ್ಯರ್ಥಿಗಳಿಂದ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಆನ್ಲೈನ್ ಅಪ್ಲಿಕೇಶನ್ ಸಂದರ್ಭದಲ್ಲಿ ಅಭ್ಯರ್ಥಿಗಳ ಫೋಟೋ ಸಿಗ್ನೇಚರ್ ಟೆಕ್ನಿಕಲ್ ಸಮಸ್ಯೆ ಇತ್ತು. ಹೀಗಾಗಿ ನೇಮಕಾತಿ ಪ್ರಕ್ರಿಯೆ ಕೋರ್ಟ್ನಲ್ಲಿ ಇತ್ತು. ಈಗಾಗಲೇ ಟೆಕ್ನಿಕಲ್ ಸಮಸ್ಯೆಗಳನ್ನ ಸರಿಪಡಿಸಿ ಡಿಸೆಂಬರ್ ಅಂತ್ಯದೊಳಗಡೆ ಲಿಸ್ಟ್ ಬಿಡುವಂತೆ ಕೋರ್ಟ್ ಆದೇಶ ಮಾಡಿತ್ತು.
ಉಗ್ರ ಹೋರಾಟದ ಎಚ್ಚರಿಕೆ
ಕೋರ್ಟ್ ಆದೇಶ ಇದ್ದರೂ ಯಾವುದೇ ಪ್ರಕ್ರಿಯೆ ನೀಡಿದ ಕೆಪಿಟಿಸಿಎಲ್ ವಿರುದ್ಧ ನೊಂದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು. ಡಿಸೆಂಬರ್ ಅಂತ್ಯದೊಳಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ 2024ರ ಫೆಬ್ರವರಿ 15 ರಂದು ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದು, ಒಂದು ವೇಳೆ ಹೇಳಿದ ಹಾಗೆ ಕೆಪಿಟಿಸಿಎಲ್ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಕಷ್ಟಪಟ್ಟು ಓದಿದ್ದ ವಿದ್ಯಾರ್ಥಿಗಳು ಮರುಪರೀಕ್ಷೆಗೆ ಒತ್ತಾಯಿಸಿದ್ದರು.