Businessಇತ್ತೀಚಿನ ಸುದ್ದಿರಾಜ್ಯ

ಧಿಡೀರನೆ ಕುಸಿದ ಈರುಳ್ಳಿ ಬೆಲೆ: ಕೆಜಿಗೆ 3-4 ರೂ. ಮಾರಾಟ, ಕಂಗಾಲ ಆದ ರೈತ

ಭೀಕರ ಬರಗಾಲದ ನಡುವೆಯೂ ರೈತರು ಈರುಳ್ಳಿ ಬೆಳದಿದ್ದರು. ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬೆಲೆ ಕುಸಿತವಾಗಿದೆ. ಹೀಗಾಗಿ ರೈತರು ಈರುಳ್ಳಿ ಮಾರದೆ ದರ ಹೆಚ್ಚಳಕ್ಕಾಗಿ ಎರಡು ದಿನಗಳಿಂದ ಕಾಯ್ದು ಕುಳಿತಿರಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ.

ಕೆಲ ತಿಂಗಳ ಹಿಂದೆ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಇದೀಗ ಈರಳ್ಳಿ ಬೆಲೆ ದಿಢೀರ್​ ಅಂತ ಕುಸಿದಿದ್ದು ರೈತನಿಗೆ ದಿಕ್ಕೇ ತೋಚದಂತಾಗಿದೆ.

ಭೀಕರ ಬರಗಾಲದ ನಡುವೆಯೂ ರೈತರು ಈರುಳ್ಳಿ ಬೆಳದಿದ್ದರು. ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬೆಲೆ ಕುಸಿತವಾಗಿದೆ. ಹೀಗಾಗಿ ರೈತರು ಈರುಳ್ಳಿ ಮಾರದೆ ದರ ಹೆಚ್ಚಳಕ್ಕಾಗಿ ಎರಡು ದಿನಗಳಿಂದ ಕಾಯ್ದು ಕುಳಿತಿರಿದ್ದಾರೆ.

ದಾವಣಗೆರೆ ಜಿಲ್ಲೆ ರೈತರು ಸಾಕಷ್ಟು ಈರುಳ್ಳಿ ಬೆಳೆದಿದ್ದು, ಮಾರಲು ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾರೆ. ಮಾರುಕಟ್ಟೆಗೆ ಒಂದೇ ದಿನ ಆರು ಸಾವಿರ ಚೀಲ ಈರುಳ್ಳಿ ಬಂದಿದೆ.

ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ. ಇದರಿಂದ ರೈತರು ಆತಂಕಗೊಂಡಿದ್ದು, ಲಾರಿ ಬಾಡಿಗೆಯಾದರು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ದರ ಹೆಚ್ಚಾಗಬಹುದೆಂದು ರೈತರು ಕಳೆದ 2-3 ದಿನಗಳಿಂದ ಕಾಯ್ದು ಕುಳಿತಿದ್ದಾರೆ.ಟಾಪ್ ಈರುಳ್ಳಿ ದರ ಪ್ರತಿ ಕ್ವಿಂಟಾಲ್​ಗೆ 1500 ರೂಪಾಯಿ ಇದೆ. ಅತ್ಯುತ್ತಮ ದತ್ತ ಈರುಳ್ಳಿ ಬೆಲೆ 1200 ರಿಂದ 1400 ರೂ. ಇದೆ. ಉತ್ತನ ದಪ್ಪ 1000 ರಿಂದ 1100 ರೂ. ಇದೆ.ಮಧ್ಯಮ‌ ಗಾತ್ರದ ಈರುಳ್ಳಿ 700 ರಿಂದ 800, ಸಣ್ಣ ಗಾತ್ರದ ಈರುಳ್ಳಿ 300 ರಿಂದ 400 ರೂಪಾಯಿ ಇದೆ.

ಸರ್ಕಾರ ರಪ್ತು ನಿಲ್ಲಿಸಿದ್ದರಿಂದ ಈರುಳ್ಳಿ ಬೆಲೆ ಕುಸಿದಿದೆ. ಇದರಿಂದ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.ನಿರೀಕ್ಷೆಯಂತೆ ಖರೀದಿ ಆಗದ ಹಿನ್ನೆಲೆಯಲ್ಲಿ ಬಂದಷ್ಟು ಬರಲಿ ಅಂತ ರೈತರು ಈರುಳ್ಳಿ ಮಾರಿ ಊರುಗಳತ್ತ ಹೋಗುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button