ನಕಲಿ ದಾಖಲೆ ನೀಡಿ ಸಾಲ ಪಡೆಯುವ ಖದೀಮರು: ಲೋನ್ ನೀಡಿದ 3 ಬ್ಯಾಂಕ್ ಮ್ಯಾನೇಜರ್ಗಳ ಬಂಧನ
ಸರಿಯಾಗಿ ಪರಿಶೀಲಿಸದೆ ನಕಲಿ ಭೂ ದಾಖಲೆಗಳನ್ನು ಹೊಂದಿದ್ದವರಿಗೆ ಸಾಲ ನೀಡಿದ್ದ ಮೂವರು ಬ್ಯಾಂಕ್ ಮ್ಯಾನೆಜರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ಸೇಲ್ಸ್ ಮ್ಯಾನೇಜರ್ ರಾಕೇಶ್, ಸೆಂಟ್ ಮಾರ್ಕ್ಸ್ ರಸ್ತೆಯ ಎಸ್ಬಿಐ ಬ್ಯಾಂಕ್ನ ಎಜಿಎಂ ಮುರುಳಿಧರ್, ಬೆಂಗಳೂರು ಜಿಲ್ಲಾ ಕೋ ಅಪರೇಟಿವ್ ಬ್ಯಾಂಕ್ನ ಮಲ್ಲಿಕಾರ್ಜುನ ಬಂಧಿತ ಆರೋಪಿಗಳು.
ಬ್ಯಾಂಕ್ ಮ್ಯಾನೇಜರ್ ಬಂಧನಕ್ಕೆ ಕಾರಣ ಏನು..?
ಜಮೀನು ಮಾರಲು ಮಾಲಿಕರು ಬ್ರೋಕರ್ಗಳಿಗೆ ದಾಖಲೆಗಳನ್ನು ನೀಡುತ್ತಾರೆ. ಈ ದಾಖಲೆಗಳ ಮೂಲಕ ನಿಮ್ಮ ಹೆಸರಿನಲ್ಲಿ ಬ್ಯಾಂಕ್ಗಳಲ್ಲಿ ಅಕೌಂಟ್ ಸೃಷ್ಟಿಸಿ, ಸಾಲ ಪಡೆಯುತ್ತಾರೆ. ಈ ರೀತಿ ನಕಲಿ ಹಲವು ಸಲ ದಾಖಲೆ ನೀಡಿದ್ದಾರೆ. ಆದರೆ ಸಾಲ ನೀಡುವಾಗ ದಾಖಲೆಗಳನ್ನ ಸರಿಯಾದ ಪರಿಶೀಲನೆ ಮಾಡಿಲ್ಲ. ಲೋನ್ ಅಪ್ರೂವ್ ಆದ ಸ್ವತ್ತಿನಲ್ಲಿ ಲೋನ್ ಅಪ್ರೂವ್ ಆಗಿರುವ ಇಸಿ ಪಡೆದುಕೊಳ್ಳಬೇಕು ಆದರೆ ಇಲ್ಲಿ ಪಡೆದುಕೊಂಡಿಲ್ಲ. ಸುಮಾರು ನಾಲ್ಕೂವರೆ ಕೋಟಿ ರೂ. ಸಾಲ ಇದೇ ರೀತಿ ಅಪ್ರೂವ್ ಮಾಡಿದ್ದರು
ಸದ್ಯ ಸಿಸಿಬಿ ಪೊಲೀಸರು ಮೂವರು ಬ್ಯಾಂಕ್ ಮ್ಯಾನೇಜರ್ಗಳನ್ನು ಬಂಧಸಿದ್ದಾರೆ. ಈ ಹಿಂದೆ ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಐದು ಆರೋಪಿಗಳನ್ನು ಸಿಸಿಬಿ ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಮತ್ತೆ ಮೂವರು ಬ್ಯಾಂಕ್ ಮ್ಯಾನೇಜರ್ಗಳನ್ನು ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇವರನ್ನು ಬಂಧಿಸಿ ತನಿಖೆ ಮುಂದುವರೆಸಿದಾಗ ಬ್ಯಾಂಕ್ ಮ್ಯಾನೇಜರ್ಗಳ ಕಳ್ಳಾಟ ಬಯಲಾಗಿದೆ.