ಇತ್ತೀಚಿನ ಸುದ್ದಿ

ರಾಮಚರಿತೆ ಸಾರುತ್ತಿರುವ ಬಾಗಲಕೋಟೆಯ ಸೀತೆಮನೆ ಗ್ರಾಮ;

ಬಾಗಲಕೋಟೆ,  ವಿಚಾರದಲ್ಲಿ ಉತ್ತರ ಪ್ರದೇಶ ಹಾಗೂ ಕರ್ನಾಟಕಕ್ಕೂ ಸಂಬಂಧ ಇದೆ. ರಾಮಭಕ್ತ ಹನುಮಂತ ಜನಿಸಿದ್ದು ಕರ್ನಾಟಕದ ಅಂಜನಾದ್ರಿಯಲ್ಲಿ ಎಂದು ನಂಬಲಾಗಿದೆ. ಅದೇ ರೀತಿ, ರಾಮಚರಿತೆ ಸಾರುವ ರಾಜ್ಯದ ಮತ್ತೊಂದು ಪ್ರದೇಶವೇ ಸೀತೆಮನೆ ಗ್ರಾಮ ಬಾಗಲಕೋಟೆತಾಲೂಕಿನಲ್ಲಿರುವ ಈ ಗ್ರಾಮಕ್ಕೆ ಮೊದಲು ಸೀತಾಮಣಿ ಎಂದು ಹೆಸರಿತ್ತು. 

ಬಾಗಲಕೋಟೆ ತಾಲೂಕಿನ ಸೀತೆಮನೆ ಗ್ರಾಮದಲ್ಲಿ ಸೀತೆಗೆ ಮಹರ್ಷಿ ವಾಲ್ಮೀಕಿ ಆಸರೆ ನೀಡಿದ್ದರು. ವಶಿಷ್ಟ ರಾಮಾಯಣದಲ್ಲಿ ಸೀತೆ ಇಲ್ಲಿ ಬಂದು ವಾಸವಿದ್ದಳೆಂಬ ಉಲ್ಲೇಖವಿದೆ. ಇಲ್ಲೇ ಲವ-ಕುಶರಿಗೆ ಸೀತಾ ಮಾತೆ ಜನ್ಮ ನೀಡಿದ್ದು. ಸೀತೆಗೆ ಹೆರಿಗೆಯಾದ ಕೊಠಡಿಗೆ ಸೀತೆ ಪ್ರಸೂತಿ ಗೃಹ ಹೆಸರಡಿಸಲಾಗಿದೆ.

ಅಷ್ಟೇ ಅಲ್ಲದೆ, ವಾಲ್ಮೀಕಿ‌ ಮಹರ್ಷಿ ಕುಟೀರದ ಜೊತೆಗೆ ಲವಕುಶರು ಸ್ನಾನ ಮಾಡಿಸಿದ್ದರ ಪ್ರತೀಕವಾಗಿ ಲವಕುಶ ಹೆಸರಿನ ಹೊಂಡಗಳಿವೆ. ಸೀತಾಮಾತೆ ಒಬ್ಬಳೇ ಇರುವ ದೇಶದ ಏಕೈಕ ದೇವಸ್ಥಾನವೂ ಇಲ್ಲೇ ಇದೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ತಾಳಿಯ ಕರಿಮಣಿಯನ್ನು ಈ ಜಾಗದಲ್ಲಿ ಸೀತೆ ಎಸೆದಿದ್ದಳಂತೆ. ಇದೇ ಕಾರಣಕ್ಕೆ ಗ್ರಾಮಕ್ಕೆ ಸೀತೆಮಣಿ ಎಂದು ಹೆಸರು ಬಂತು.

ನಂತರ ಕಾಲ ಕಾಲಕ್ಕೆ ಬದಲಾಗಿ ಸೀತೆಮನೆ ಎಂದು ಗ್ರಾಮದ ಹೆಸರು ಬದಲಾಯಿತು. ಸೀತೆಮನೆಯಲ್ಲಿ ಸೀತೆ ಸ್ನಾನ ಮಾಡುತ್ತಿದ್ದ ಹೊಂಡ ಇದ್ದು, ವರ್ಷವಿಡೀ ನೀರಿನಿಂದ ತುಂಬಿರುತ್ತದೆ. ಎಷ್ಟೇ ವರ್ಷ ಬರ ಬಿದ್ದರೂ ಸೀತಾ ಹೊಂಡ ಬತ್ತುವುದಿಲ್ಲ.

ಸೀತೆ ದೇವಸ್ಥಾನದಲ್ಲಿ ವಿಶೇಷ ಪೂಜೆ,

ಸೀತೆ ದೇವಸ್ಥಾನದಲ್ಲಿರುವ ಸೀತೆಯ ವಿಗ್ರಹದ ಕೊರಳಿನಲ್ಲಿ ಶಿವಲಿಂಗವಿದೆ. ಇಂದು ಸೀತೆ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತರು ಪೂಜೆ ನೆರವೇರಿಸಿದ್ದಾರೆ. ಮಕ್ಕಳಾಗದವರು ತೊಟ್ಟಿಲು ಕಟ್ಟಿ ಹರಕೆ ಇಡುತ್ತಾರೆ. ಲವಕುಶರಂತ ಮಕ್ಕಳ‌ ಕೊಡವ್ವ ತಾಯಿ ಎಂದು ಭಕ್ತರು ಬೇಡಿಕೊಳ್ಳುತ್ತಾರೆ.

Related Articles

Leave a Reply

Your email address will not be published. Required fields are marked *

Back to top button