ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಜೆಎನ್.1 ವೈರಸ್ ಆರ್ಭಟ; 199 ಜನರಲ್ಲಿ JN.1 ದೃಢ
ಬೆಂಗಳೂರು, ಜ.02: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಜೆಎನ್.1 ವೈರಸ್ ಆರ್ಭಟ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 199 ಜನರಲ್ಲಿ ಜೆಎನ್.1 ದೃಢ ಪಟ್ಟಿದೆ. ಜಿನೋಮಿಕ್ ಸ್ವೀಕೆನ್ಸ್ ವರದಿಯಲ್ಲಿ 199 ಮಂದಿಗೆ ಜೆಎನ್.1 ಸೋಂಕು ತಗುಲಿರೋದು ದೃಢಪಟ್ಟಿದೆ. ಇದುವರೆಗೆ ಜಿನೋಮ್ ಸೀಕ್ವೆನ್ಸ್ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್ 1 ತಗುಲಿರೋದು ದೃಢಪಟ್ಟಿತ್ತು. ನಿನ್ನೆ ಮತ್ತೆ 202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್1 ದೃಢಪಟ್ಟಿದೆ. ಇಲ್ಲಿಯವರೆಗೆ 199 ಜನರಿಗೆ ಜೆ.ಎನ್ 1 ವೈರಸ್ ಸೋಂಕು ತಗುಲಿದೆ. 28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಯಲ್ಲಿ ಇತರೆ ರೂಪಾಂತರಿ ಸೋಂಕು ಪತ್ತೆಯಾಗಿದೆ.
ಕಳೆದು ಮೂರು ವರ್ಷಗಳಿಂದ ಕೊರೊನಾ ವಿಶ್ವವನ್ನ ಬಿಟ್ಟು ಅಲುಗಾಡುತ್ತಿಲ್ಲ. ಕೊವಿಡ್ ವೈರಸ್ ಇಂದು ಕಡಿಮೆ ಆಗುತ್ತೆ, ನಾಳೆ ಕಡಿಮೆ ಆಗುತ್ತೆ ಅಂತಾ ಜನರು ಕಾದು ಕುಳಿತಿದ್ದಾರೆ. ಆದ್ರೆ ಒಂದು ಮುಗಿದರೆ ಮತ್ತೊಂದು ಅನ್ನೋ ಹಾಗೇ ಪ್ರತಿ 6 ತಿಂಗಳಿಗೊಮ್ಮೆ ಹೊಸ ಹೊಸ ರೂಪದಲ್ಲಿ ಕೊರೊನಾ ಮತ್ತೆ ಬಂದು ಜನರ ಜೀವ ಹಿಂಡುತಿದೆ. ಈ ವರ್ಷ ಆರಂಭದಲ್ಲಿಯೇ JN.1 ಹೊಸ ರೂಪದಲ್ಲಿ ತಲೆ ಎತ್ತಿರುವ ವೈರಸ್ ಅಟ್ಟಹಾಸಕ್ಕೆ ಪ್ಲಾನ್ ಮಾಡಿದೆ ಆದ್ರೆ ಆರಂಭದಲ್ಲಿ ನಿಯಂತ್ರಣಕ್ಕೆ ಸರ್ಕಾರ ನಾನಾ ತಂತ್ರಗಳ ಪ್ರಯೋಗಿಸಲು ಮುಂದಾಗಿದೆ.
ಕೋವಿಡ್‌ನ ರೂಪಾಂತರಿ ಪತ್ತೆಗೆ ಗಂಟಲ ದ್ರವದ ಮಾದರಿಗಳನ್ನಷ್ಟೇ ಜಿನೋಮ್ ಸೀಕ್ವೆನ್ಸಿಂಗ್ ಡಿಎನ್‌ಎ ಜೋಡಣೆಯ ಕ್ರಮದ ಮೂಲಕ ಪತ್ತೆ ಪರೀಕ್ಷೆ ನಡೆಸಲಾಗುತ್ತಿತ್ತು. ಆದ್ರೆ ಈಗ ಒಳಚರಂಡಿಯ ಕೊಳಚೆ ನೀರನ್ನೂ ಪರೀಕ್ಷೆಗೊಳಪಡಿಸಿ, ರೂಪಾಂತರಿ ತಳಿಗಳ ಪತ್ತೆ ಕಾರ್ಯವನ್ನ ಸರ್ಕಾರ ಕೈಗೊಂಡಿದೆ.. ರಾಜ್ಯದಲ್ಲಿ ಜೆ ಎನ್ 1 ರೂಪಾಂತರಿ ಹಿನ್ನಲೆ ನಗರದಲ್ಲಿ ಈ ತಳಿ ಹರಡುವುದರ ಪ್ರಮಾಣ ಹಾಗೂ ತಡೆಯುವ ಸಲುವಾಗಿ ಸರ್ಕಾರ ಹಾಗೂ ಬಿಬಿಎಂಪಿ ನಾನಾ ತಂತ್ರಗಳನ್ನು ಮೊರೆ ಹೋಗಿದೆ. ಈ ಭಾಗವಾಗಿ ಹಲವು ಮನೆಗಳಿಂದ ಒಳಚರಂಡಿ ಕೊಳವೆ ಮಾರ್ಗದ ಮೂಲಕ ಹರಿದು ಬಂದು ಒಂದೆಡೆ ಸೇರುವ ಕೊಳಚೆ ನೀರಿನ ಮಾದರಿಯನ್ನು ಸಂಗ್ರಹ ಮಾಡಿ, ಪರೀಕ್ಷೆಗೆ ರವಾನಿಸಲಾಗುತ್ತಿದೆ. ಈ ವರದಿ ಬಳಿಕ ಬೆಂಗಳೂರಿನಲ್ಲಿ ಹೊಸ ತಳಿ ಹರಡಿರುವ ಪ್ರಮಾಣ ಸ್ಪಷ್ಟವಾಗಲಿದೆ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಳ ಹಿನ್ನೆಲೆ ಸಚಿವ ಶರಣಪ್ರಕಾಶ್ ಪಾಟೀಲ್ ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಮುಂಜಾಗೃತ ಕ್ರಮವಾಗಿ ಏನೆಲ್ಲಾ ಎಚ್ಚರಿಕೆ ವಹಿಸಬೇಕು. ತಮ್ಮ ವ್ಯಾಪ್ತಿಗೆ ಬರುವ ಮೆಡಿಕಲ್ ಕಾಲೇಜುಗಳಲ್ಲಿ ಹೇಗೆ ಸಿದ್ಧತೆಯಾಗಿದೆ, ಬೆಡ್ ವ್ಯವಸ್ಥೆ, ಮೆಡಿಸನ್ ಸಿದ್ಧತೆ ಕುರಿತು ಸಭೆ ನಡೆಸಲಿದ್ದಾರೆ.