ಇತ್ತೀಚಿನ ಸುದ್ದಿಕ್ರೈಂ
ಸಿಪಿ ಯೋಗೇಶ್ವರ್ ಭಾವ ಮಹಾದೇವಯ್ಯ ಕೊಲೆ ಪ್ರಕರಣ; ಓರ್ವ ಮಹಿಳೆಯ ಕೈವಾಡ ಇರುವ ಶಂಕೆ…!
ರಾಮನಗರ, : ಸಿ.ಪಿ ಯೋಗೇಶ್ವರ್ ಭಾವ ಮಹಾದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ಯಮಿ ಮಹಾದೇವಯ್ಯ ಕೊಲೆಗೆ ಬೆಂಗಳೂರಿನ ದೀಪಾಂಜಲಿ ನಗರದ ಓರ್ವ ಮಹಿಳೆಯ ಲಿಂಕ್ ಇರುವ ಬಗ್ಗೆ ಅನುಮಾನ ಬಂದಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಮಹಾದೇವಯ್ಯ ಹಾಗೂ ಆ ಮಹಿಳೆ ಹಲವು ಬಾರಿ ಭೇಟಿಯಾಗಿದ್ದು, ಆಗಾಗ ಚನ್ನಪಟ್ಟಣದ ಫಾರ್ಮ್ ಹೌಸ್ಗೆ ಬರುತ್ತಿದ್ದರ ಮಾಹಿತಿ ದೊರೆತಿದೆ.
ಅಕ್ರಮ ಸಂಬಂಧದ ಆಯಾಮದಲ್ಲಿ ತೀವ್ರಗೊಂಡ ಪೊಲೀಸರ ತನಿಖೆ
ಮೃತ ಮಹಾದೇವಯ್ಯ, ಚನ್ನಪಟ್ಟಣ ಬಸ್ ನಿಲ್ದಾಣದಿಂದ ತೋಟದಲ್ಲಿ ಕೆಲಸ ಮಾಡುವವರನ್ನು ಕರೆದುಕೊಂಡು ಬರುತ್ತಿದ್ದರಂತೆ. ಈ ಹಿನ್ನಲೆ ಆ ಮಹಿಳೆ ಜೊತೆ ಅಕ್ರಮ ಸಂಬಂಧ ಏನಾದ್ರೂ ಇದೆಯಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಲೆಯಲ್ಲಿ ಆ ಮಹಿಳೆ ಪಾತ್ರವಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆ ಮನೆಗೆ ಹೋಗಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.