ಇತ್ತೀಚಿನ ಸುದ್ದಿದೇಶ

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮನ್ನಣೆ: ಮೋದಿ-ಶಾ ಪ್ರಯತ್ನಗಳಿಗೆ ವಿಶ್ವಸಂಸ್ಥೆಯ ಪ್ರಶಂಸೆ

ಕಾಶ್ಮೀರದಲ್ಲಿನ ಮಕ್ಕಳ ರಕ್ಷಣಾ ಕ್ರಮಗಳಲ್ಲಿ ಗಮನಾರ್ಹ ಪ್ರಗತಿಯ ಕಾರಣ ಭಾರತವು ಸಶಸ್ತ್ರ ಸಂಘರ್ಷ ಮಕ್ಕಳಿರುವ ದೇಶಗಳ ಪಟ್ಟಿಯಿಂದ ಹೊರಗೆ ಬಂದಿದೆ.

ಕಳೆದ 9 ವರ್ಷಗಳಲ್ಲಿ, ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಹೊಸ ಆಯಾಮನ್ನು ನೀಡಲು ಮೋದಿ ಮತ್ತು ಶಾ ಜೋಡಿ ಅವಿರತವಾಗಿ ಶ್ರಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಯಶಸ್ವಿ ಕಾರ್ಯತಂತ್ರಗಳ ಪರಿಣಾಮವಾಗಿ 12 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯ ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ವರದಿ’ಯಿಂದ ಭಾರತ ಹೊರಗೆ ಬಂದಿದೆ. ಭಾರತ ಸರ್ಕಾರವು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳಿಗೆ ಉತ್ತಮ ರಕ್ಷಣೆಯನ್ನು ನೀಡಲು ಕೈಗೊಂಡ ಮಹತ್ತರ ಕ್ರಮಗಳನ್ನು ವಿಶ್ವಸಂಸ್ಥೆ ಗುರುತಿಸಿದ್ದು ಗಮನಾರ್ಹ.

ಈ ಹಿಂದೆ ಭಾರತದ ಹೆಸರನ್ನು, ಬುರ್ಕಿನಾ ಫಾಸೊ, ಕ್ಯಾಮರೂನ್, ಲೇಕ್ ಚಾಡ್ ಬೇಸಿನ್, ನೈಜೀರಿಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಂತಹ ದೇಶಗಳ ಜೊತೆಗೆ “ಅಪಮಾನಿತ ಪಟ್ಟಿಯಲ್ಲಿ” ಪಟ್ಟಿ ಮಾಡಲಾಗಿತ್ತು. ಆದರೆ, ಮೋದಿ-ಶಾ ಜೋಡಿ ಅಸಾಧ್ಯವೆನಿಸಿದ್ದ ಕಾರ್ಯವನ್ನು ಸಾಧಿಸಿದೆ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಅವರು ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ವರದಿ’ಯ ಇತ್ತೀಚಿನ ಆವೃತ್ತಿಯಿಂದ ಭಾರತದ ಹೆಸರನ್ನು ತೆಗೆದುಹಾಕಿದ್ದಾರೆ. ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಈ ವರದಿಯಲ್ಲಿ ಈ ಹಿಂದೆ, ಜಮ್ಮು ಮತ್ತು ಕಾಶ್ಮೀರವನ್ನು “ಸಂಘರ್ಷ ವಲಯ” ಎಂದು ಉಲ್ಲೇಖಿಸಲಾಗಿತ್ತು. ವಾರ್ಷಿಕ ವರದಿಯ ಇತ್ತೀಚಿನ ಆವೃತ್ತಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಈ ವರದಿ ಮಕ್ಕಳ ಮೇಲಿನ ಸಶಸ್ತ್ರ ಸಂಘರ್ಷಗಳ ಪರಿಣಾಮ ಮತ್ತು ವಿವಿಧ ದೇಶಗಳಲ್ಲಿ ಅವರ ಹಕ್ಕುಗಳ ಉಲ್ಲಂಘನೆಯನ್ನು ಎತ್ತಿ ತೋರಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಸಶಸ್ತ್ರ ಸಂಘರ್ಷದ ಕಾರಣ, ವಿಶ್ವಸಂಸ್ಥೆಯು ಈ ಹಿಂದೆ ಭಾರತವನ್ನು “ಅವಮಾನಿತ ದೇಶಗಳ” ಪಟ್ಟಿಯಲ್ಲಿ ಸೇರಿಸಿತ್ತು. ಆದಾಗ್ಯೂ, ಆರ್ಟಿಕಲ್ 370 ಮತ್ತು 35ಎ ರದ್ದತಿಯ ಪರಿಣಾಮವಾಗಿ, ಈಗ ಪ್ರಗತಿಯ ಹಾದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರವು ಇನ್ನು ಮುಂದೆ ಯುಎನ್‌ನ ಸಶಸ್ತ್ರ ಸಂಘರ್ಷದಲ್ಲಿರುವ ಮಕ್ಕಳನ್ನು ಹೊಂದಿರುವ ದೇಶಗಳ ಪಟ್ಟಿಯ ಭಾಗವಾಗಿರುವುದಿಲ್ಲ.

ಕಳೆದ 9 ವರ್ಷಗಳಲ್ಲಿ, ಮೋದಿ-ಶಾ ಜೋಡಿಯು ಒಂದರ ನಂತರ ಒಂದರಂತೆ ನಿಪುಣ ಕಾರ್ಯನೀತಿಗಳನ್ನು ಕಾರ್ಯಗತಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಗೆ ತರುವ ಅವರ ಪ್ರಯತ್ನಗಳು ಫಲ ನೀಡುತ್ತಿವೆ. ದಣಿವರಿಯದ ನಾಯಕ ಅಮಿತ್ ಶಾ ಅವರು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದಾಗ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದಾಗ, ಎಲ್ಲಾ ವಿರೋಧ ಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಿದ್ದರು. 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ರಕ್ತಪಾತವಾಗುತ್ತದೆ ಎಂದು ಪ್ರತಿಪಕ್ಷಗಳು ಹುಯಿಲೆಬ್ಬಿಸ್ಸಿದ್ದವು. ಆದಾಗ್ಯೂ, ಭಾರತದ ರಾಜಕೀಯದಲ್ಲಿ ಷಾ ಅವರ ಚಾಣಾಕ್ಷ ನೀತಿಗಳ ಫಲವಾಗಿ ಯಾರೂ ಒಂದೇ ಒಂದು ಆಕ್ಷೇಪಣೆಯನ್ನು ವ್ಯಕ್ತಪಡಿಸಲು ಕೂಡ ಧೈರ್ಯ ಮಾಡಲಿಲ್ಲ.

370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015 ರ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲ ನ್ಯಾಯ ಮಂಡಳಿಯಂತಹ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸಶಸ್ತ್ರ ಮತ್ತು ಭದ್ರತಾ ಪಡೆಗಳಿಗೆ ತರಬೇತಿ ನೀಡುವುದು, ಮಕ್ಕಳ ಮೇಲೆ ಬಲಪ್ರಯೋಗವನ್ನು ನಿಷೇಧಿಸುವುದು ಮತ್ತು ಪೆಲೆಟ್ ಗನ್‌ಗಳ ಬಳಕೆಯನ್ನು ನಿಲ್ಲಿಸುವುದು ಸೇರಿದಂತೆ ವಿಶ್ವಸಂಸ್ಥೆಯು ಸೂಚಿಸಿದ ಹಲವು ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಬೇರೆ ಯಾವುದೇ ಪರ್ಯಾಯಗಳಿಲ್ಲದಿದ್ದಾಗ ಮಕ್ಕಳನ್ನು ಕಡಿಮೆ ಅವಧಿಗೆ ಬಂಧಿಸಲು ನಿರ್ಧರಿಸಲಾಗಿದೆ.

370 ಮತ್ತು 35ಎ ವಿಧಿಗಳನ್ನು ತೆಗೆದುಹಾಕುವ ಮೂಲಕ ಭಾರತಕ್ಕೆ ವಿಶ್ವದಲ್ಲಿ ಒಂದು ವಿಶಿಷ್ಟವಾದ ಮಜಲನ್ನು ದೊರಕಿಸಿ ಕೊಡುವಲ್ಲಿ ಅಮಿತ್ ಶಾ ಅವರ ನಿಪುಣ ನೀತಿಗಳ ಫಲಿತಾಂಶಗಳು ಸ್ಪಷ್ಟವಾಗಿ ಎದ್ದು ಕಾಣುತ್ತಿವೆ. ವಿಶ್ವಸಂಸ್ಥೆಯ ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ವರದಿ’ಯ ಅವಮಾನಕರ ಪಟ್ಟಿಯಿಂದ ಭಾರತವನ್ನು ತೆಗೆದು ಹಾಕಿರುವುದು ಮಹತ್ವದ ಸಾಧನೆಯಾಗಿದೆ. ಭಾರತ ಈಗ ಹೊಸ ಯುಗವನ್ನು ಪ್ರವೇಶಿಸಿದೆ.

Related Articles

Leave a Reply

Your email address will not be published. Required fields are marked *

Back to top button