“ಗ್ಲೋ” ಆಭರಣ ಮಳಿಗೆ ಆರಂಭ: ಕಾಂತಾರ ಚೆಲುವೆ ಸಪ್ತಮಿಗೌಡ
ಬೆಂಗಳೂರು, ಫೆ, 18 : ಕೀರ್ತಿಲಾಲ್ ಗ್ಲೋ ನಿಂದ ಎಚ್.ಎಸ್.ಆರ್. ಬಡಾವಣೆಯ ಎರಡನೇ ಸೆಕ್ಟರ್ ನಲ್ಲಿ ಮನಮೋಹಕ ಆಭರಣ ಮಳಿಗೆಯನ್ನು ತೆರೆಯಲಾಗಿದೆ. ಇಂದಿನ ಮಹಿಳೆಯರಿಗೆ ಹೊಸ ಹೊಳಪು ನೀಡುವ, ಆಧುನಿಕ, ಆರಾಮದಾಯಕ, ಟ್ರಂಡಿ ಆಭರಣಗಳ ಸಂಗ್ರಹದ ನಿಧಿಯನ್ನು ಈ ಮಳಿಗೆ ಹೊಂದಿದೆ.
ಗ್ಲೋ ಬ್ರ್ಯಾಂಡ್ ನ ನಾವೀನ್ಯತೆ ಮತ್ತು ಅತ್ಯುತ್ತಮ ಗುಣಮಟ್ಟದ ಪ್ರತೀಕವಾಗಿ ಬೆಂಗಳೂರಿನ ಮೊದಲ “ಗ್ಲೋ” ಆಭರಣ ಮಳಿಗೆಯನ್ನು ಸ್ಯಾಂಡಲ್ ವುಡ್ ನಟಿ, ಕಾಂತಾರ ಚಲುವೆ ಸಪ್ತಮಿ ಗೌಡ ಉದ್ಘಾಟಿಸಿದರು. ಸಿಂಪಲ್ ವಡವೆಗಳಿಗೆ ಕಾಂತಾರ ನಟಿ ಮನಸೋತರು. ಕೀರ್ತಿಲಾಲ್ ಗ್ಲೋ ಆಭರಣ ಸಮೂಹದ ವ್ಯಾಪಾರ ಕಾರ್ಯತಂತ್ರ ವಿಭಾಗದ ನಿರ್ದೇಶಕ ಸೂರಜ್ ಶಾಂತಕುಮಾರ್, ವಿನ್ಯಾಸ ವಿಭಾಗದ ನಿರ್ದೇಶಕಿ ಸೀಮಾ ಮೆಹ್ತಾ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಪ್ತಮಿ ಗೌಡ, ಪ್ರತಿಯೊಂದು ಮಹಿಳೆಯೂ ಕೂಡ ವಿಶೇಷವೇ. ತನ್ನದೇ ಆದ ರುಚಿ, ಅಭಿರುಚಿ ಹೊಂದಿರುತ್ತಾರೆ. ಈ ಎಲ್ಲಾ ಆಯಾಮಗಳನ್ನು ಪರಿಗಣಿಸಿ ಆಭರಣಗಳನ್ನು ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಶೈಲಿಯ ಆಭರಣಗಳ ಜೊತೆಗೆ ಯುವ ಮತ್ತು ಕರ್ತವ್ಯ ನಿರತ ಮಹಿಳೆಯರಿಗೆ ಒಪ್ಪುವ ಹಗುರ, ವಜ್ರದ ಆಭರಣಗಳ ವಿನ್ಯಾಸಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಕೀರ್ತಿಲಾಲ್ ಸಮೂಹಕ್ಕೆ 85 ವರ್ಷಗಳ ಅನುಭವವಿದ್ದು, ಆಭರಣ ವಲಯದ ಭವ್ಯ ಪರಂಪರೆ ಇದೇ ರೀತಿ ಮುಂದುವರೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಳೆದ ಕೆಲ ವರ್ಷಗಳಿಂದ ದಿನ ನಿತ್ಯ ಬಳಸಬಹುದಾದ ಕಲಾತ್ಮಕ, ಕಡಿಮೆ ತೂಕದ ಮತ್ತು ದುಬಾರಿಯಲ್ಲದ ಆಭರಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರಿಗಂತೂ ಈ ಮಾದರಿಯ ಆಭರಣಗಳು ದಿನನಿತ್ಯ ಬೇಕೆ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಾಜದ ಎಲ್ಲಾ ಸ್ಥರದ ಮಹಿಳೆಯರ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು
ಕೀರ್ತಿಲಾಲ್ ಆಭರಣ ಸಮೂಹ ವಿಶ್ವದರ್ಜೆಯ ಗ್ಲೋ ಎಂಬ ಕಲೆಕ್ಷನ್ ಅನ್ನು
ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಪ್ರೀಮಿಯಂ ವಜ್ರದ ಆಭರಣಗಳನ್ನು ರಚಿಸುವಲ್ಲಿ ಎಂಟು ದಶಕಗಳ ಇತಿಹಾಸ ಮತ್ತು ಅನುಭವ ಹೊಂದಿರುವ ಕೀರ್ತಿಲಾಲ್ ಸಂಸ್ಥೆ ತನ್ನ ವಿಭಿನ್ನ ಡಿಸೈನ್ ಮೂಲಕ ಆಭರಣ ಪ್ರಿಯರನ್ನು ಬೆರಗುಗೊಳಿಸುತ್ತಿದೆ.
ಗುಣಮಟ್ಟದ ವಜ್ರದ ಆಭರಣ ವಲಯದಲ್ಲಿ 85 ವರ್ಷಗಳ ಪರಂಪರೆ ಇದ್ದು, ಕರಕುಶಲತೆ ಮತ್ತು ವಿನ್ಯಾಸಕ್ಕೆ ಕೀರ್ತಿಲಾಲ್ ಹೆಸರಾಗಿದೆ. ದೈನಂದಿನ ಆಭರಣಗಳ ಅಗತ್ಯಗಳನ್ನು ಪೂರೈಸುಲೂ ಗ್ಲೋ ಸಜ್ಜಾಗಿದೆ. ಈ ಸರಣಿಯ ಆಭರಗಳಿಗೆ ಪ್ರಕೃತಿ ಮತ್ತು ಸಾಂಪ್ರದವೇ ಸ್ಫೂರ್ತಿ. ಆಭರಣಗಳನ್ನು ತಮ್ಮ ವ್ಯಕ್ತಿತ್ವದ ಅಂಗದಂತೆ ನೋಡುವ ಮಹಿಳೆಯರಿಗೆ ವಿಭಿನ್ನ ಮತ್ತು ವಿಶೇಷವಾದ, ಅಷ್ಟೇ ಅಲ್ಲದೆ ಕೈಗೆಟುಕುವ ದರದಲ್ಲಿ ಕೀರ್ತಿಲಾಲ್ ಗ್ಲೋ ಆಭರಣ ಶ್ರೇಣಿಯನ್ನು ರಚಿಸಿರುವುದು ವಿಶೇಷವಾಗಿದೆ.