ದಾಸರಹಳ್ಳಿಯಲ್ಲಿ ಸಿದ್ಧಗಂಗಾ ಶ್ರೀ ಪುಣ್ಯ ಸ್ಮರಣೆ
ಪೀಣ್ಯದಾಸರಹಳ್ಳಿ : ನಾಡು ಕಂಡ ಶೇಷ್ಠ ಸಾಧಕ ಹಾಗೂ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ 4 ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ದಾಸರಹಳ್ಳಿಯಲ್ಲಿ ಮಾಜಿ ಶಾಸಕ ಎಸ್ ಮುನಿರಾಜು ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಬಳಿಕ ಮಾತನಾಡಿದ ಅವರು ನಾಡು ಕಂಡ ಶ್ರೇಷ್ಠ ಸಾಧಕರು, ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ, ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆಸಿದ ಅವರ ಆದರ್ಶ ಸಾಧನೆಗಳು ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ ಎಂದರು.
ನಡೆದಾಡುವ ದೇವರೆಂದು ಖ್ಯಾತಿಗೆ ಪಾತ್ರರಾಗಿದ್ದ ತ್ರಿವಿಧ ದಾಸೋಹಿ ಪದ್ಮ ಭೂಷಣ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಅವರ ಪುಣ್ಯ ತಿಥಿಯ ಸಂದರ್ಭದಲ್ಲಿ ತುಂಬು ಹೃದಯದಿಂದ ನೆನೆಯುತ್ತೇನೆ. ಸಮಾಜದ ಏಳಿಗೆಗಾಗಿ ಅವಿರತ ಶ್ರಮಿಸಿ ಸಾವಿರಾರು ಜನರಿಗೆ ದಾರಿದೀಪವಾಗಿದ್ದ ಅವರು ಈಗಲೂ ನಮ್ಮ ಮನಗಳಲ್ಲಿ ಹಸಿರಾಗಿ ಉಳಿದಿದ್ದಾರೆ.
ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಉಪಯೋಗ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳುವಳಿಕೆ ಕರಪತ್ರಗಳನ್ನು ಮನೆಮನೆಗೆ ತೆರಳಿ ವಿತರಣೆ ಮಾಡಿದರು.
ಸ್ಥಳೀಯ ಮುಖಂಡರಾದ ಭರತ್ ಸೌಂದರ್ಯ, ನಿಸರ್ಗ ಕೆಂಪರಾಜು,ಗುರುಪ್ರಸಾದ್,ಬು ಎಂ ನಾರಾಯಣ್,ಡಿ ಕೆ ಮಹೇಶ್,ಶೆಟ್ಟಿಹಳ್ಳಿ ಸುರೇಶ್,ಎಸ್ ಆರ್ ಮಂಜುನಾಥ್ ಮೊದಲಾದವರು ಮೊದಲಾದವರು ಹಾಜರಿದ್ದರು.