ಇತ್ತೀಚಿನ ಸುದ್ದಿರಾಜಕೀಯಸುದ್ದಿ

ಬಸವರಾಜ ಬೊಮ್ಮಾಯಿ ಬದಲಾವಣೆ ಪಕ್ಕ..!

ಬದಲಾದ  ರಾಜಕೀಯ ಸನ್ನಿವೇಶದಲ್ಲಿ ರಾಜ್ಯಕ್ಕೆ ನೂತನ ಸಿಎಂ ದೊರೆಯುವುದು ಬಹುತೇಕ  ಪಕ್ಕಾ ಎನ್ನಲಾಗುತ್ತಿದೆ. ಈ ಬದಲಾವಣೆ ಈ ವಾರದಲ್ಲೇ ನಡೆಯಲಿದ್ದು ಬಸವರಾಜ ಬೊಮ್ಮಾಯಿ ಬದಲಾವಣೆ ಬಹುತೇಕ ಎನ್ನಲಾಗುತ್ತಿದೆ. ಅವರ ಬದಲಿಗೆ ಯಾರು ಎನ್ನುವ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಒಂದಷ್ಟು ಆಯ್ಕೆ ಮುಂದಿಟ್ಟುಕೊಂಡಿದ್ದು ದೆಹಲಿ ಮೂಲಗಳ ಪ್ರಕಾರ  ಮೊದಲ ಪ್ರಾಶಸ್ತ್ಯ ಮಾಜಿ ಸಿಎಂ  ಜಗದೀಶ್ ಶೆಟ್ಟರ್ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆಗೆ ತಿಂಗಳುಗಳ ಗಣನೆ  ಜತೆಗೆ ಬಿಬಿಎಂಪಿ ಚುನಾವಣೆಗೆ ದಿನಗಣನೆ ಶುರುವಾಗಿರುವುದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ದಾರ ತೆಗೆದುಕೊಳ್ಳೊಕ್ಕೆ ಮುಂದಾಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ಎಂದ್ರೆ ಅದು ಕರ್ನಾಟಕ.ಸಧ್ಯಕ್ಕೆ ಬಿಜೆಪಿ ಅಧಿಕಾರದಲ್ಲಿದ್ದರೂ ಮುಂದಿನ ಚುನಾವಣೆ ವೇಳೆಗೆ ಅದು ಕೈ ತಪ್ಪವ ಆತಂಕವಿದೆ ಎನ್ನುವುದು ವರಿಷ್ಟರಿಗೆ ಆಂತರಿಕ ಸರ್ವೆಗಳಿಂದ್ಲೇ ಗೊತ್ತಾಗಿದೆ.

ಆಡಳಿತ ನೀಡುವಲ್ಲಿ ವಿಫಲ: ಆಡಳಿತ ನೀಡುವಲ್ಲಿ ಬಸವರಾಜ ಬೊ ಮ್ಮಾಯಿ ಕಂಪ್ಲೀಟ್ ವಿಫಲವಾಗಿರುವ ಬಗ್ಗೆ ವರದಿ ತರಿಸಿಕೊಂಡ ಬಳಿಕವೇ ಹೈಕಮಾಂಡ್ ಕರ್ನಾ ಟಕಕ್ಕೆ ಶಾ ಅವರನ್ನು ಕಳುಹಿಸಿಕೊಟ್ಟಿದ್ದು. ಬೆಂಗಳೂರಿಗೆ ಬಂದವರೇ ಸಿದ್ದರಾಮೋತ್ಸವ ಹೆಸರಿ ನಲ್ಲಿ ನಡೆದ “ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಶಕ್ತಿ ಪ್ರದರ್ಶನ”ಕ್ಕೆ ಹೈಕಮಾಂಡೇ ಶಾಕ್ ಆಯಿ ತೆ್ನ್ನುವ ಮಾಹಿತಿಯಿದೆ. ಕಾಂಗ್ರೆಸ್ ದಿನಕಳೆದಂತೆಲ್ಲಾ ಹೆಚ್ಚೆಚ್ಚು ಬಲವಾಗುತ್ತಿರು ವುದು,  ಅದು ಕೂಡ ಬಿಜೆಪಿಯ ಭದ್ರ ಕೋಟೆಯಂತಿರುವ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಡುತ್ತಿರುವುದು ಬಿಜೆಪಿಗೆ ತಲೆ ನೋವಾಗಿದೆ.ಸ್ವಲ್ಪ ಯಾಮಾರಿದ್ರೂ ಮತ್ತೆ ಅಧಿಕಾರಕ್ಕೆ ಬರುವ ಅವಕಾಶವನ್ನು ಕೈಯಾರೆ ಕಳೆದುಕೊಳ್ತೇವೆ ಎನ್ನುವ ಆತಂಕ ಹೈಕಮಾಂಡ್ ಗೆ ಕಾಡಲಾರಂಭಿಸಿದೆ.

ಬಸವರಾಜ ಬೊಮ್ಮಾಯಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ್ರೆ ಪಕ್ಷಕ್ಕೆ ಹೀನಾಯ ಸೋಲು ಕಟ್ಟಿಟ್ಟಬುತ್ತಿ.ಅದರಲ್ಲೂ ಪಕ್ಷದ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕವನ್ನೇ ಕಳೆದುಕೊಳ್ಳುತ್ತೇವೆ ಹಾಗಾಗಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದ  ಲಿಂಗಾಯಿತ ಸಮುದಾಯದ ನಾಯಕನನ್ನು ಪ್ರತಿಷ್ಟಾಪಿಸುವುದು ಸೂಕ್ತ ಎನ್ನುವ ನಿರ್ದಾರಕ್ಕೆ ಬಂದಿದ್ದು ಬೆಂಗಳೂರಿನಲ್ಲಿ ಕುಳಿತುಕೊಂಡೇ ಅಮಿತ್ ಶಾ ಫೈನಲ್ ಮಾಡಿದ್ದಾರೆ. ಮೊದಲ ಹೆಸರು ಜಗದೀಶ್ ಶೆಟ್ಟರ್ ನಂತರದ್ದು ಕುಮಾರಿ ಶೋಭಾ ಕರಂದ್ಲಾಜೆ ನಂತರದ್ದು ಬಸನಗೌಡ ಪಾಟೀಲ್ ಯತ್ನಾಳ್.

Related Articles

Leave a Reply

Your email address will not be published. Required fields are marked *

Back to top button