ಇತ್ತೀಚಿನ ಸುದ್ದಿದೇಶರಾಜ್ಯಸುದ್ದಿ

ಪಡಿತರ ಚೀಟಿದಾರರಿಗೆ ಸಿಗುತ್ತೆ ಉಚಿತ ಎಲ್ಪಿಜಿ ಸಿಲಿಂಡರ್!

ಉಚಿತ ಗ್ಯಾಸ್ ಸಿಲಿಂಡರ್:  ಪ್ರಸ್ತುತ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಮಧ್ಯೆ ಜನಸಾಮಾನ್ಯರಿಗೆ ಶುಭ ಸುದ್ದಿಯೊಂದು ದೊರೆತಿದೆ. ನೀವು ರೇಷನ್ ಕಾರ್ಡ್ ಹೊಂದಿದ್ದರೆ ಈಗ ಒಂದು ವರ್ಷದಲ್ಲಿ 3 ಗ್ಯಾಸ್ ಸಿಲಿಂಡರ್‌ಗಳನ್ನು  ಉಚಿತವಾಗಿ ಪಡೆಯುವ ಅವಕಾಶವಿದೆ. ವಾಸ್ತವವಾಗಿ, ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬಡವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಪಡಿತರ ಚೀಟಿದಾರರಿಗೆ ಮೊದಲು ಉಚಿತ ಪಡಿತರ ವ್ಯವಸ್ಥೆ ಮಾಡಿದ್ದ ಸರ್ಕಾರ ಈಗ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲು ಯೋಚಿಸುತ್ತಿದೆ. ಸರ್ಕಾರದ ಈ ನಿರ್ಧಾರವು ಬಹಳಷ್ಟು ಮಂದಿಗೆ ಪರಿಹಾರವನ್ನು ನೀಡಲಿದೆ. ಸರ್ಕಾರದ ಈ ಮಹತ್ವದ ಯೋಜನೆಯ ಲಾಭ ಪಡೆಯುವುದು ಹೇಗೆ ಎಂದು ತಿಳಿಯಿರಿ.

ಪಡಿತರ ಚೀಟಿದಾರರಿಗೆ ಉಚಿತ ಗ್ಯಾಸ್ ಸಿಲಿಂಡರ್:
ಮೊದಲೇ ಹೇಳಿದಂತೆ ಸರ್ಕಾರದ ವತಿಯಿಂದ ಪಡಿತರ ಚೀಟಿದಾರರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಿಗಲಿದೆ. ನೀವು ಸಹ ಅಂತ್ಯೋದಯ ಕಾರ್ಡ್ ಫಲಾನುಭವಿಯಾಗಿದ್ದರೆ, ಸರ್ಕಾರದಿಂದ ಉಚಿತ ಗ್ಯಾಸ್ ಸಿಲಿಂಡರ್ ಲಭ್ಯವಾಗಲಿದೆ. ಈ ಕುರಿತಂತೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪಡಿತರ ಚೀಟಿದಾರರಿಗೆ ವಾರ್ಷಿಕವಾಗಿ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಇದರಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುವುದಾದರೂ ಸಾಮಾನ್ಯ ಜನರಿಗೆ ಇದರ ಲಾಭ ಸಿಗಲಿದೆ ಎಂದು ಈ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಪ್ರಕಟಣೆಯ ಜೊತೆಗೆ, ಅದರಲ್ಲಿ ಕೆಲವು ನಿಯಮಗಳು ಮತ್ತು ಷರತ್ತುಗಳಿವೆ, ಅದನ್ನು ಅನುಸರಿಸುವುದು ಅವಶ್ಯಕ. ಅದರ ನಂತರವೇ ಫಲಾನುಭವಿಗಳು ಉಚಿತವಾಗಿ ಸಿಲಿಂಡರ್‌ಗಳನ್ನು  ಪಡೆಯಲು ಸಾಧ್ಯವಾಗುತ್ತದೆ.

ಯಾರಿಗೆ ಸಿಗುತ್ತೆ ಉಚಿತ ಸಿಲಿಂಡರ್ ಭಾಗ್ಯ?
ಸರ್ಕಾರದ ಉಚಿತ ಮೂರು ಗ್ಯಾಸ್ ಸಿಲಿಂಡರ್‌ಗಳ ಪ್ರಯೋಜನಕ್ಕಾಗಿ, ಕೆಲವು ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿದೆ.
ಫಲಾನುಭವಿಯು ಉತ್ತರಾಖಂಡದ ನಿವಾಸಿಯಾಗಿರುವುದು ಕಡ್ಡಾಯವಾಗಿದೆ.
ಇದಕ್ಕಾಗಿ ಅಂತ್ಯೋದಯ ಪಡಿತರ ಚೀಟಿದಾರರು ಗ್ಯಾಸ್ ಸಂಪರ್ಕ ಕಾರ್ಡ್‌ಗೆ ಲಿಂಕ್ ಮಾಡುವುದು ಅವಶ್ಯಕ.

ಈ ತಿಂಗಳು ಈ ಕೆಲಸವನ್ನು ಮಾಡಿ:
ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ನಿಮ್ಮ ಅಂತ್ಯೋದಯ ಕಾರ್ಡ್ ಅನ್ನು ಈ ತಿಂಗಳು ಅಂದರೆ ಜುಲೈನಲ್ಲಿ ಲಿಂಕ್ ಮಾಡಿ. ಇವೆರಡನ್ನೂ ಲಿಂಕ್ ಮಾಡದಿದ್ದರೆ ಸರ್ಕಾರದ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯಿಂದ ವಂಚಿತರಾಗುತ್ತೀರಿ. ಅಗತ್ಯವಿರುವವರಿಗೆ ಉಚಿತ ಸಿಲಿಂಡರ್ ನೀಡಲು ಸರ್ಕಾರ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇದರಡಿ ಜಿಲ್ಲಾವಾರು ಅಂತ್ಯೋದಯ ಗ್ರಾಹಕರ ಪಟ್ಟಿಯನ್ನು ಸ್ಥಳೀಯ ಗ್ಯಾಸ್ ಏಜೆನ್ಸಿಗಳಿಗೂ ಕಳುಹಿಸಲಾಗಿದ್ದು, ಅಂತ್ಯೋದಯ ಕಾರ್ಡ್ ದಾರರ ಪಡಿತರ ಚೀಟಿದಾರರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ತಿಳಿಸಲಾಗಿದೆ. ಉತ್ತರಾಖಂಡ ಸರ್ಕಾರದ ಈ ನಿರ್ಧಾರದ ನಂತರ, ರಾಜ್ಯದ ಸುಮಾರು 2 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿರುವವರು ದೊಡ್ಡ ಲಾಭವನ್ನು ಪಡೆಯುತ್ತಾರೆ. ಉತ್ತರಾಖಂಡದಲ್ಲಿ ಜಾರಿಯಾಗಿರುವ ಈ ಯೋಜನೆಯು ಮುಂದಿನ ದಿನಗಳಲ್ಲಿ ದೇಶದ ಇತರ ರಾಜ್ಯಗಳಲ್ಲೂ ಜಾರಿಗೆ ಬರುವ ನಿರೀಕ್ಷೆ ಇದೆ.

Related Articles

Leave a Reply

Your email address will not be published. Required fields are marked *

Back to top button