ಇತ್ತೀಚಿನ ಸುದ್ದಿದೇಶರಾಜಕೀಯರಾಜ್ಯಸುದ್ದಿ

ವೀರೇಂದ್ರ ಹೆಗ್ಗಡೆ, ಇಳಯರಾಜ, ಪಿ.ಟಿ. ಉಷಾ ರಾಜ್ಯಸಭೆಗೆ ನಾಮನಿರ್ದೇಶನ

ದಿಗ್ಗಜ ಅಥ್ಲಿಟ್ ಪಿ.ಟಿ. ಉಷಾ ಮತ್ತು ಸಂಗೀತ ಮಾಂತ್ರಿಕ ಇಳಯರಾಜ, ಧರ್ಮಸ್ಥಳ ದೇವಸ್ಥಾನದ ಆಡಳಿತಾಧಿಕಾರಿ ವೀರೇಂದ್ರ ಹೆಗ್ಗಡೆ, ಖ್ಯಾತ ಚಿತ್ರಕಥೆಗಾರ ವಿ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

“ಪಿ.ಟಿ. ಉಷಾ ಪ್ರತಿಯೊಬ್ಬ ಭಾರತೀಯರಿಗೂ ಸ್ಪೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಸಾಧನೆಗಳು ಮಾದರಿಯಾಗಿದೆ, ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವೂ ಅಷ್ಟೇ ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಅವರು ತಮ್ಮ ಅಭಿನಂದನಾ ಸಂದೇಶಗಳೊಂದಿಗೆ ಪಿ.ಟಿ. ಉಷಾ ಮತ್ತು ಇಳಯರಾಜ ಅವರೊಂದಿಗಿನ ಚಿತ್ರಗಳನ್ನು ಪ್ರತ್ಯೇಕ ಟ್ವೀಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಇಳಯರಾಜಯವರ ಸೃಜನಶೀಲ ಪ್ರತಿಭೆ ತಲೆಮಾರುಗಳಿಂದ ಜನರನ್ನು ಆಕರ್ಷಿಸಿದೆ. ಅವರ ಗೀತೆಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ಅವರ ಜೀವನ ಪಯಣ ಕೂಡ ಅಷ್ಟೇ ಸ್ಫೂರ್ತಿದಾಯಕವಾಗಿದೆ. ಅವರು ವಿನಮ್ರ ಹಿನ್ನೆಲೆಯಿಂದ ಬೆಳೆದು ತುಂಬಾ ಸಾಧಿಸಿದ್ದಾರೆ. ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಸಂತೋಷವಾಗಿದೆ. ಸಭೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದರ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೂಡ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಾರೆ. ಟ್ರಸ್ಟ್ ಮೂಲಕ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ, ಹಲವು ಶಾಲಾ-ಕಾಲೇಜುಗಳ ಸ್ಥಾಪನೆಗಳ ಮೂಲಕ ಸಮಾಜ ಸುಧಾರಣೆ ಮಾಡುತ್ತಿರುವ ಅವರ ಸೇವೆಯನ್ನು ಗುರುತಿಸಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button