shikshanaಇತ್ತೀಚಿನ ಸುದ್ದಿರಾಜ್ಯಸುದ್ದಿ

“ಶಿಕ್ಷಣ ತಜ್ಞರು ಇರಬೇಕಾದ ಜಾಗದಲ್ಲಿ ಕೊಳಕು ಮಂಡಲ ಹಾವಿನಂತಹ ಕೊಳಕು ವಿಷಕಾರಿ ವ್ಯಕ್ತಿ”ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಶುದ್ಧ ಬೀದಿ ಪೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯವೆಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಿಕ್ಷಣ ತಜ್ಞರು ಇರಬೇಕಾದ ಜಾಗದಲ್ಲಿ ಕೊಳಕು ಮಂಡಲ ಹಾವಿನಂತಹ ಕೊಳಕು ವಿಷಕಾರಿ ವ್ಯಕ್ತಿಯನ್ನು ಕೂರಿಸಿದ್ದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದೆ.

‘ಶಿಕ್ಷಣ ಸಚಿವರೇ ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ. ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿಯ ರೀತಿ ಅದೂ ನಿಮ್ಮ ಪ್ರೊಪೆಗಂಡಾ ಯುನಿವರ್ಸಿಟಿಯೇ? ಸ್ಪಷ್ಟಪಡಿಸಿ! ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯ್ಯಲ್ಲಿದೆ ಎಂದು ಒಪ್ಪಿಕೊಳ್ಳಿ’ ಎಂದು ಸಚಿವ ಬಿ.ಸಿ.ನಾಗೇಶ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ರಾಷ್ಟ್ರಕವಿ ಕುವೆಂಪು ಈ ನಾಡಿಗೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾದವರು. ಲೇಖಕರ ಪರಿಚಯದಲ್ಲಿ ಸಂಘ ಸಿದ್ದಾಂತ ಪ್ರತಿಪಾದಕರನ್ನು ವಿಜೃಂಭಿಸಿ, ರಾಷ್ಟ್ರಕವಿಯನ್ನು ಕೇವಲವಾಗಿ ಬಿಂಬಿಸಿದ ಬಿಜೆಪಿ ತನ್ನ ಆಂತರ್ಯದಲ್ಲಿನ ಕುವೆಂಪು ದ್ವೇಷವನ್ನು ಅನಾವರಣಗೊಳಿಸಿದೆ. RSSನ ಮುಖವಾಣಿ ಪತ್ರಿಕೆಗಳಂತವನ್ನು ಪಠ್ಯಪುಸ್ತಕವೆಂದು ಒಪ್ಪಲಾಗದು’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಸುಳ್ಳು ತಜ್ಞ, ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬನ ಬರಹವನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ ಸರ್ಕಾರಕ್ಕೆ ಕನಿಷ್ಠ ಮರ್ಯಾದೆಯೂ ಇಲ್ಲದಾಗಿದೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರಿಂದ “ದೇಶದ್ರೋಹಿ” ಬಿರುದು ಪಡೆದಿದ್ದ ಆತ. ದೇಶದ್ರೋಹಿಯೊಬ್ಬನ ಬರಹವನ್ನು ಪಠ್ಯದಲ್ಲಿ ಅಳವಡಿಸುವುದೂ ದೇಶದ್ರೋಹವಲ್ಲವೇ? ಇದಕ್ಕೆ ಬಿಜೆಪಿ ಸರ್ಕಾರ ಉತ್ತರಿಸುವುದೇ?’ ಎಂದು ಪ್ರಶ್ನಿಸಿದೆ.

Related Articles

Leave a Reply

Your email address will not be published. Required fields are marked *

Back to top button