ಇತ್ತೀಚಿನ ಸುದ್ದಿದೇಶ

ಒಂದು ಕುಟುಂಬ, ಒಂದು ಟಿಕೆಟ್; ಭರ್ಜರಿ ಕಾರ್ಯತಂತ್ರ ಹೆಣೆದ ಕಾಂಗ್ರೆಸ್

‘ಒಂದು ಕುಟುಂಬ ಒಂದು ಟಿಕೆಟ್’ ಬಗ್ಗೆ ಭಾನುವಾರ ನಡೆಯಲಿರುವ ಮೆಗಾ ಕೂಟದಲ್ಲಿ ಮತ್ತು ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ. ಕಾಂಗ್ರೆಸ್ ಯಾವಾಗಲೂ ಕುಟುಂಬ ರಾಜಕಾರಣ ಮಾಡುತ್ತದೆ ಎಂಬ ಬಿಜೆಪಿಯ ಆರೋಪಗಳಿಗೆ ಇದು ತಕ್ಕ ಉತ್ತರವಾಗಲಿದೆ, ಇದರಿಂದ ಬಿಜೆಪಿಯ ದಾಳಿಯನ್ನು ಹಿಮ್ಮೆಟ್ಟಿಸುವ ಭರವಸೆ ನಾಯಕರಲ್ಲಿ ಮೂಡಲಿದೆ ಎನ್ನಲಾಗಿದೆ.


ಪಕ್ಷವು ಸಾಮೂಹಿಕ ನಿರ್ಧಾರ ಕೈಗೊಳ್ಳಲು ಸಂಸದೀಯ ಮಂಡಳಿಯ ಪುನರುಜ್ಜೀವನಕ್ಕೆ ಪಕ್ಷ ಒತ್ತು ನೀಡುತ್ತದೆ ಎಂದು ನಾಯಕರೊಬ್ಬರು ಹೇಳಿದ್ದಾರೆ. ಜೊತೆಗೆ 2024ರ ಚುನಾವಣೆಗೆ ತಯಾರಿ ನಡೆಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತು ದ್ವೇಷದ ರಾಜಕೀಯವನ್ನು ಎದುರಿಸಲು ಎಲ್ಲಾ ವಿರೋಧ ಪಕ್ಷಗಳ ಹೊಂದಾಣಿಕೆಗೆ ಸಹ ಕರೆಯನ್ನು ಸಭೆಯಲ್ಲಿ ನೀಡಲಿದ್ದಾರೆ.


ನಿರುದ್ಯೋಗ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸಲು ಶ್ರಮ
ಕಾಂಗ್ರೆಸ್ ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸಲು ಶ್ರಮಿಸುತ್ತದೆ ಮತ್ತು ಕಳೆದ ಕೆಲವು ಚುನಾವಣೆಗಳಲ್ಲಿ ಗಮನಿಸಿದಂತೆ ವಿಭಜಕ ಮತ್ತು ಕೋಮುವಾದಿ ಪ್ರಚಾರಗಳನ್ನು ತೆಗೆದುಕೊಳ್ಳಲು ಬಿಡುವುದಿಲ್ಲ, ಬದಲಾಗಿ ಅವುಗಳ ನಿಯಂತ್ರಣಕ್ಕೆ ಗಮನ ಹರಿಸಲು ನಿರ್ಧರಿಸಿದೆ.

ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ತರಬೇತಿ ನೀಡುವ ಸಲುವಾಗಿ ಸಂಸ್ಥೆಯೊಂದಿಗೆ ಪ್ರಧಾನ ಕಾರ್ಯದರ್ಶಿ ನೇತೃತ್ವದ ಚುನಾವಣಾ ಪ್ರಚಾರಗಳನ್ನು ನಿರ್ವಹಿಸಲು ಮತ್ತು ಸಂಯೋಜಿಸಲು ಪ್ರತ್ಯೇಕ ಚುನಾವಣಾ ಘಟಕ ಸ್ಥಾಪನೆಗೆ ಚಿಂತಿಸಲಾಗಿದೆ. ಸಭೆಯು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಚ್ಚಿನ ಯುವ ನಾಯಕರನ್ನು ಸೆಳೆಯುವ ಬಗ್ಗೆ ಚರ್ಚಿಸುತ್ತದೆ ಮತ್ತು ಅವರಿಗೆ ಕನಿಷ್ಠ ಅರ್ಧದಷ್ಟು ಆಂತರಿಕ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.


ಚಿಂತನ-ಮಂಥನ ಅಧಿವೇಶನದಲ್ಲಿ ಚರ್ಚೆ
ಪಕ್ಷದ ನಾಯಕರ ಪ್ರಕಾರ, ಈ ಪ್ರಸ್ತಾಪಗಳನ್ನು ಮುಕ್ತವಾಗಿ ಬಿಡಲಾಗಿದೆ ಮತ್ತು ಉದಯಪುರದಲ್ಲಿ ನಡೆಯುವ ಚಿಂತನ-ಮಂಥನ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಈ ಎಲ್ಲಾ ಪ್ರಸ್ತಾವನೆಗಳ ಕುರಿತು ಸೋನಿಯಾ ಗಾಂಧಿ ಗುಂಪು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.


ಉದಯಪುರದಲ್ಲಿ ನಡೆಯಲಿರುವ ಚಿಂತನ ಶಿಬಿರವನ್ನು ನಿಭಾಯಿಸುವ ತಂಡವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವುದು ಸೋನಿಯಾ ಗಾಂಧಿ ತೆಗೆದುಕೊಂಡಿರುವ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ 400 ಪ್ರತಿನಿಧಿಗಳ ಪೈಕಿ 23ರ ಭಿನ್ನಮತೀಯ ಗುಂಪಿನ ಕೆಲ ಸದಸ್ಯರನ್ನು ಸೇರಿಸುವ ಕುರಿತು ಚಿಂತನೆ ನಡೆದಿದೆ. ‘ಚಿಂತನ ಶಿಬಿರ’ ಗುಂಪು ಚರ್ಚೆಗಳನ್ನು ಮತ್ತು 400ಕ್ಕೂ ಹೆಚ್ಚು ನಾಯಕರ ಭಾಗವಹಿಸುವಿಕೆಯನ್ನು ಎದುರು ನೊಡುತ್ತಿದೆ. ಇಲ್ಲಿ ವಿವಿಧ ಕಾರ್ಯತಂತ್ರದ ಪತ್ರಿಕೆಗಳು ಮತ್ತು ಸಲಹೆಗಳನ್ನು ಚರ್ಚಿಸಲಾಗುತ್ತದೆ.


ನಕಾರಾತ್ಮಕ ಪರಿಣಾಮ ಬೀರಿದ ಕುಟುಂಬ-ಒಂದು-ಟಿಕೆಟ್ ನಿಯಮ
ಸಭೆಯಲ್ಲಿ ಕೆಲವು ಹಳೇ ಪ್ರಸ್ತಾವನೆಗಳನ್ನೇ ಚರ್ಚಿಸಲಾಗುತ್ತಿದೆ. 2008 ರಲ್ಲಿ ಕರ್ನಾಟಕದಲ್ಲಿ ಒಂದು ಕುಟುಂಬ-ಒಂದು-ಟಿಕೆಟ್ ನಿಯಮವನ್ನು ಪರಿಚಯಿಸಲಾಯಿತು ಮತ್ತು ಇದು ಭಾರಿ ನಕಾರಾತ್ಮಕ ಪರಿಣಾಮ ಬೀರಿತು ಎಂದು ಕಾಂಗ್ರೆಸ್ ನವರೇ ಹೇಳಿದ್ದಾರೆ.

ಇನ್ನೂ ಈ ನಿಯಮದನುಸಾರ 2024ರಲ್ಲಿ ಪ್ರಿಯಾಂಕಾ ಗಾಂಧಿಯವರ ಚುನಾವಣಾ ಪ್ರಚಾರಕ್ಕೆ ಏನಾಗುತ್ತದೆ? ಸೋನಿಯಾ ಗಾಂಧಿ ಆಯ್ಕೆಯಿಂದ ಹೊರಗುಳಿಯುತ್ತಾರಾ? ಅಥವಾ ಗಾಂಧಿ ಕುಟುಂಬಕ್ಕೆ ಅಪವಾದ ಬರಬಹುದೇ? ಎಂಬ ಎಲ್ಲಾ ಪ್ರಶ್ನೆಗಳು ಸದ್ಯ ಹುಟ್ಟಿಕೊಂಡಿವೆ.

Related Articles

Leave a Reply

Your email address will not be published. Required fields are marked *

Back to top button