ಅಕೌಂಟ್ ಓಪನ್ ಮಾಡ್ತಾರಾ ಬೆಂಗಳೂರು ಬಾಯ್ಸ್?
ಬೆಂಗಳೂರಿಗರಿಗೆ ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್‌ಸಿಬಿ ತಂಡ ಕಪ್(Cup) ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಕಪ್ ಒಂದನ್ನು ಬಿಟ್ಟು ಆರ್‌ಸಿಬಿ ಬೆಂಗಳೂರಿಗರ ಕಿಡ್ನಿ, ಹೃದಯ, ಮನಸ್ಸು ಗೆದ್ದಿದೆ. ಮೊದಲ ಪಂದ್ಯವನ್ನು ಆರ್‌ಸಿಬಿ ಪ್ರತಿ ಬಾರಿಯಂತೆ ದೇವರಿಗೆ ಅರ್ಪಿಸಿದೆ. ಘಟಾನುಘಟಿ ಆಟಗಾರರು ಈಗ ಆರ್‌ಸಿಬಿ ಪರ ಆಡುತ್ತಿಲ್ಲ. ಅವರನ್ನು ಹೊರತುಪಡಿಸಿ ಅಖಾಡಕ್ಕೆ ಇಳಿದಿದ್ದ ಫಾಫ್ ಡು ಪ್ಲೆಸಿಸ್ ಪಡೆ ಒಳ್ಳೆಯ ಸ್ಕೋರ್ ಕಲೆಹಾಕಿದ್ದರೂ, ಮೊದಲನೇ ಪಂದ್ಯದಲ್ಲಿ ಮುಗ್ಗರಿಸಿದೆ. ಐಪಿಎಲ್ 15ನೇ ಆವೃತ್ತಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಎರಡನೇ ಮುಖಾಮುಖಿಯಾಗಿದೆ.
ಚೆನ್ನೈ ವಿರುದ್ಧ ಗೆದ್ದ ಜೋಶ್ನಲ್ಲಿ ಕೆಕೆಆರ್!
ಕೊಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇತ್ತ ಆರ್‌ಸಿಬಿ ಬೃಹತ್ ಮೊತ್ತವನ್ನು ಗಳಿಸಿದ ಹೊರತಾಗಿಯೂ ತಮ್ಮ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿ ಆಘಾತ್ಕಕೆ ಒಳಗಾಯಿತು. ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಕೆಕೆಆರ್ ಮೊದಲ ಪಂದ್ಯ ಗೆದ್ದ ಜೋಶ್ನಲ್ಲೇ ಕಣಕ್ಕಿಳಿಯಲಿದೆ. ಇತ್ತ ಗೆದ್ದು ಸೋತ ಆರ್‌ಸಿಬಿ ತಂಡ ಗೆಲುವಿನ ಅಕೌಂಟ್ ಓಪನ್ ಮಾಡ್ತಾರಾ? ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿಗೆ ಕಠಿಣ ಸವಾಲು!
ಕೆಕೆಆರ್ ತಂಡ ಸಾಕಷ್ಟು ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದು, ಆರ್‌ಸಿಬಿಗೆ ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಯಾವ ರೀತಿಯ ಪ್ರದರ್ಶನ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ 11
ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ 11
ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಡಿವೈ ಪಾಟೀಲ್ ಗ್ರೌಂಡ್ ಪಿಚ್ ರಿಪೋರ್ಟ್!
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಎರಡೂ ತಂಡಗಳು ಕೂಡ 200ರ ಗಡಿ ದಾಟಿದೆ. ಆರ್‌ಸಿಬಿ ಬೃಹತ್ ಮೊತ್ತ ಗಳಿಸಿದನ್ನು ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿ ಬೆನ್ನಟ್ಟಲು ಯಶಸ್ವಿಯಾಗಿತ್ತು. ಹಿಗಾಗಿ ಮತ್ತೊಂದು ಹೈಸ್ಕೋರ್ ಪಂದ್ಯ ನಡೆದರೆ ಅಚ್ಚರಿಯಿಲ್ಲ. ಪಿಚ್ ಹಸಿರಿನಿಂದ ಕೂಡಿದ್ದ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಕಡಿಮೆಯಿದೆ. ಆದರೆ ವೇಗಿಗಳಿಗೆ ಈ ಪಿಚ್ ಲಾಭದಾಯಕವಾಗಿರಲಿದೆ. ಹೀಗಾಗಿ ಎರಡೂ ತಂಡಗಳಲ್ಲಿ ನಾಳೆ ವೇಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.