ಪಾಲಿಟೆಕ್ನಿಕ್ಗಳಲ್ಲಿ ಪ್ರತಿ ಕೋರ್ಸ್ನಲ್ಲೂ ಎರಡು ಸೀಟ್ಗಳನ್ನು ಕಾಯ್ದಿರಿಸಬೇಕು ಎಂದ ಎಐಸಿಟಿಇ!
ಎಐಸಿಟಿಇ 2022-23ನೇ ಸಾಲಿನ ಪರಿಷ್ಕೃತ ಅನುಮೋದನಾ ಆದೇಶಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದು ಅದರಲ್ಲಿ ಈ ವಿಚಾರವನ್ನು ತಿಳಿಸಿದೆ. ಕೊವಿಡ್ 19ನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ನಿಧಿ ಯೋಜನೆಯಡಿ ನೆರವು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 2021ರ ಮೇ ತಿಂಗಳಲ್ಲಿ ಘೋಷಿಸಿದ್ದರು. ಅದರಂತೆ ಎಐಸಿಟಿಇ ಕೂಡ ಸಹಾಯ ಹಸ್ತ ಚಾಚಿದೆ. ಹೀಗೆ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆಗಳಲ್ಲಿ, ಪ್ರತಿ ಕೋರ್ಸ್ನಲ್ಲೂ ಎರಡು ಸೀಟು ಕಾಯ್ದಿರಿಸುವುದರಿಂದ ಉಳಿದ ಅರ್ಜಿದಾರ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಕೊವಿಡ್ 19ನಿಂದ ಅನಾಥರಾದ ಮಕ್ಕಳ ಸಂಖ್ಯೆ 4302 (ಮಾರ್ಚ್ 16ರವರೆಗೆ) ಎಂದು ಪಿಎಂ ಕೇರ್ಸ್ ನಿಧಿಯಡಿ ದಾಖಲಾದ ಅಂಕಿಸಂಖ್ಯೆಗಳಿಂದ ಸ್ಪಷ್ಟವಾಗಿದೆ. ಈ ಎಲ್ಲ ಮಕ್ಕಳೂ ಖಂಡಿತ ತಾಂತ್ರಿಕ ಶಿಕ್ಷಣವನ್ನೇ ಆಯ್ಕೆ ಮಾಡಿಕೊಳ್ಳಲಾರರು. ಹಾಗಿದ್ದಾಗ್ಯೂ ನಾವು ಎಲ್ಲ ಪಾಲಿಟೆಕ್ನಿಕ್ಗಳಲ್ಲಿ ಪ್ರತಿಕೋರ್ಸ್ಗಳಲ್ಲಿ ಎರಡು ಸೀಟ್ ಕಾಯ್ದಿರಿಸುತ್ತೇವೆ ಎಂದು ಎಐಸಿಟಿಇ ಹೇಳಿದೆ. ಪಿಎಂ ಕೇರ್ಸ್ ಯೋಜನೆಯ ಸರ್ಟಿಫಿಕೆಟ್ ಹೊಂದಿರುವ ಮಕ್ಕಳು ಈ ವಿಶೇಷ ಕೋಟಾದಡಿ ಪಾಲಿಟೆಕ್ನಿಕ್ ಶಿಕ್ಷಣಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಎಂದೂ ಹೇಳಿದೆ.
ಈ ಯೋಜನೆ 18 ವರ್ಷ ಒಳಗಿನವರಿಗೆ ಮಾತ್ರ ಅನ್ವಯ. ಕೊವಿಡ್ 19 ಸಾಂಕ್ರಾಮಿಕದಿಂದ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಅಥವಾ ಅವರನ್ನು ಸಾಕುತ್ತಿದ್ದ ಯಾರಾದರೂ ಸರಿ ಅವರನ್ನು ಕಳೆದುಕೊಂಡು ಅನಾಥರಾದ ಮಕ್ಕಳು ಯೋಜನೆಯಡಿ ಫಲಾನುಭವಿಗಳು ಆಗಿರುತ್ತಾರೆ. ಇದೀಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾಯ್ದಿರಿಸಲಾದ ಸೀಟ್ಗಳು ಮುಂದೆ ವಿದ್ಯಾರ್ಥಿಗಳು ದೊಡ್ಡವರಾಗಿ, ಅವರಿಗೆ ಕೋರ್ಸ್ಗೆ ಸೇರುವಷ್ಟು ವಯಸ್ಸಾಗುವವರೆಗೂ ಮಾನ್ಯವಾಗಿಯೇ ಇರುತ್ತದೆ ಎಂದೂ ಹೇಳಲಾಗಿದೆ. ದೇಶದಲ್ಲಿ ಸುಮಾರು 3591 ಅನುಮೋದಿತ ಪಾಲಿಟೆಕ್ನಿಕ್ಗಳು ಇವೆ