ಇತ್ತೀಚಿನ ಸುದ್ದಿಸುದ್ದಿ

ಮಗಳ ಮೃತದೇಹ 10 ಕಿ.ಮೀ ಹೊತ್ತು ಸಾಗಿದ ತಂದೆ..

ಸುರ್ಗುಜಾ(ಛತ್ತೀಸ್​​​​ಗಢ): ಇತ್ತಿಚೇಗೆ ಸಾಮಾಜಿಕ ಜಾಲತಾಣದಲ್ಲಿ ಮನಕಲುಕುವ ವಿಡಿಯೋವೊಂದು ವೈರಲ್​ ಆಗ್ತಿದೆ. ಇದರಲ್ಲಿ ತಂದೆಯೊಬ್ಬ ತನ್ನ ಮಗಳ ಮೃತ ದೇಹವನ್ನು ಹೊತ್ತು ಸಾಗುತ್ತಿದ್ದರು. ಈ ಘಟನೆಯ ನಿಖರತೆ ತಿಳಿಯಲು ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೊ ತನಿಖೆಗೆ ಆದೇಶಿಸಿದ್ದಾರೆ.

ಏನಿದು ಘಟನೆ: ಅಮದಾಳ ಗ್ರಾಮದವರಾದ ಈಶ್ವರ ದಾಸ್​ ಮಗಳು ಸುರೇಖಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಶುಕ್ರವಾರ ಬೆಳಗ್ಗೆ ಲಖನಪುರ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ, ಬಾಲಕಿಯ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.

ಆಕೆ ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಅಗತ್ಯ ಚಿಕಿತ್ಸೆ ನೀಡಲು ಪ್ರಾರಂಭಿಸಲಾಯಿತು. ಆದರೆ, ಆಕೆಯ ಸ್ಥಿತಿ ತುಂಬಾ ಹದಗೆಟ್ಟಿತು. ಚಿಕಿತ್ಸೆ ಫಲಿಸದೇ ಬೆಳಗ್ಗೆ 7:30 ರ ಸುಮಾರಿಗೆ ಸುರೇಖಾ ಸಾವನ್ನಪ್ಪಿದ್ದಳು. ಶೀಘ್ರದಲ್ಲೇ ಶವ ವಾಹನ ಬರಲಿದೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದೀವಿ. 9:20 ರ ಸುಮಾರಿಗೆ ವಾಹನ ಬಂದಿತು. ಅಷ್ಟೋತ್ತಿಗಾಗಲೇ ಅವರು ತಮ್ಮ ಮೃತ ಮಗಳ ದೇಹದೊಂದಿಗೆ ಹೊರಟು ಹೋಗಿದ್ದರು ಎಂದು ಆರೋಗ್ಯ ಕೇಂದ್ರದ ವೈದ್ಯರಾದ (ಆರ್‌ಎಂಎ) ಡಾ ವಿನೋದ್ ಭಾರ್ಗವ್ ಹೇಳಿದರು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ ತಂದೆಯೊಬ್ಬ ತಮ್ಮ ಮಗಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಆ ತಂದೆ ತನ್ನ ಮಗಳ ಶವ ಹೊತ್ತುಕೊಂಡು ಅಮದಾಳದಲ್ಲಿರುವ ತಮ್ಮ ಮನೆ ತಲುಪಲು ಕಾಲ್ನಡಿಗೆಯಲ್ಲಿ ಸುಮಾರು 10 ಕಿ.ಮೀ ದೂರ ಕ್ರಮಿಸಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರೋಗ್ಯ ಸಚಿವ ಸಿಂಗ್ ಡಿಯೋ ಅವರ ಗಮನಕ್ಕೆ ಬಂದಿದ್ದು, ಈ ಘಟನೆ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಸಚಿವರು ಸೂಚಿಸಿದ್ದಾರೆ. 

Related Articles

Leave a Reply

Your email address will not be published. Required fields are marked *

Back to top button