28ರ ಯುವಕನಿಗೆ 67ರ ಮಹಿಳೆ ಮೇಲೆ ಪ್ರೇಮಾಂಕುರ! ಮದುವೆ ಆಗಲ್ಲ, ಜೊತೆಯಾಗಿ ಇರ್ತೀವಿ..
ವಿದೇಶಗಳಲ್ಲಿ ತಮಗಿಂತ ಹಿರಿಯ ಮಹಿಳೆಯರನ್ನು ಮದುವೆ ಆಗೋದು ಟ್ರೆಂಡ್. ಇತ್ತೀಚಿಗೆ ಈ ವಯಸ್ಸಿನ ಅಂತರ 15 ರಿಂದ 20 ವರ್ಷಕ್ಕೆ ಬಂದು ನಿಂತಿದೆ. ಕೆಲ ದಿನಗಳ ಹಿಂದೆ ಈ ತರಹದ ಸುದ್ದಿಗಳು ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಓದುಗರು ವಿದೇಶದಲ್ಲಿ ಈ ರೀತಿ ಸಂಪ್ರದಾಯಗಳು ಕಾಮನ್ ಅಂತ ಸುಮ್ಮನಾಗಿದ್ದರು. ಇದೀಗ ಅಂತಹವುದೇ ಒಂದು ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 28 ವರ್ಷದ ಯುವಕನಿಗೆ 67 ವರ್ಷದ ಮಹಿಳೆ ಮೇಲೆ ಪ್ರೇಮಾಂಕುರವಾಗಿದ್ದು, ಇಬ್ಬರು ಜೊತೆಯಾಗಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಸಾಮಾನ್ಯವಾಗಿ ದಂಪತಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಲವರು ಅನೇಕ ಬಗೆಯ ವಾದಗಳನ್ನು ಮಂಡಿಸುತ್ತಾರೆ. ಮೂರರಿಂದ ನಾಲ್ಕು ವರ್ಷ ಅಂತರವಿದ್ರೆ ಒಳ್ಳೆಯದು ಅಂತಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಮೊರೆನಾದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾದ 28 ವರ್ಷದ ಬೋಲು ಮತ್ತು 67 ವರ್ಷದ ರಾಮ್ ಕಾಲಿ ನಡುವೆ ಪ್ರೀತಿ ಹುಟ್ಟಿದ್ದು, ಇಬ್ಬರು ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು.
ಇನ್ನೂ ಈ ಜೊತೆಯಾಗಿ ಜೀವನ ನಡೆಸುತ್ತಿರುವ ಬಗ್ಗೆ ನೋಟರಿ ಸಹ ಪಡೆದುಕೊಂಡಿದ್ದಾರೆ. ನೋಟರಿಯಲ್ಲಿ ಮದುವೆ ಆಗುತ್ತಿಲ್ಲ. ಆದ್ರೆ ಜೊತೆಯಾಗಿರುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇಬ್ಬರ ನೋಟರಿ ಬಗ್ಗೆ ವಕೀಲರು ಹೇಳಿದ್ದೇನು?
ಈ ಕುರಿತು ವಕೀಲ ಪ್ರದೀಪ್ ಅವಸ್ಥಿ ಮಾತನಾಡಿದ್ದು, ಇಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದಾರೆ. ತಮ್ಮ ಜೀವಕ್ಕೆ ಇತರರಿಂದ ತೊಂದರೆ ಮತ್ತು ವಿರೋಧ ಮಾಡಬಾರದು ಎಂಬ ಕಾರಣಕ್ಕೆ ನೋಟರಿ ಪಡೆದುಕೊಂಡಿದ್ದಾರೆ. ಆದ್ರೆ ಈ ರೀತಿಯ ನೋಟರಿಗೆ ಕಾನೂನಿನ ಮಾನ್ಯತೆ ಇರಲ್ಲ. ಮದುವೆ ಆಗಲ್ಲ ಅಂತ ಸಹ ಜೋಡಿ ಹೇಳಿಕೊಂಡಿದೆ. ಒಟ್ಟಿನಲ್ಲಿ 28ರ ಯುವಕ 67ರ ಮಹಿಳೆಯ ಜೊತೆ ಜೀವನ ನಡೆಸಲು ಮುಂದಾಗಿರೋದು ವಿಚಿತ್ರ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ದಂಪತಿ ವಯಸ್ಸಿನ ಅಂತರ 53 ವರ್ಷ
ಅಮೆರಿಕ ಮೂಲದ ದಂಪತಿ ವಯಸ್ಸಿನ ಅಂತರ ಬರೋಬ್ಬರಿ 53 ವರ್ಷ. 2015ರಲ್ಲಿ ಮದುವೆಯಾದ 24 ವರ್ಷದ ಗ್ಯಾರಿ ಮತ್ತು 77 ವರ್ಷದ ಅಲ್ಮೆಡಾ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ. ಇಬ್ಬರ ಸಂಬಂಧದ ಬಗ್ಗೆ ಜನರು ಏನೇ ಮಾತಾಡಿಕೊಂಡರೂ ಜೋಡಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ನಮಗೆ ಮದುವೆ ಆಗಿದ್ದಕ್ಕೆ ಯಾವುದೇ ಪಶ್ಚತ್ತಾಪ ಇಲ್ಲ ಎಂದು ಜೋಡಿ ಹೇಳಿಕೊಳ್ಳುತ್ತಾರೆ.
ಹೇಗಿದೆ ಇಬ್ಬರ ವೈವಾಹಿಕ ಜೀವನ?
ದಾಂಪತ್ಯ ಜೀವನ ಹೇಗಿದೆ ಎಂಬುದರ ಬಗ್ಗೆ ಗ್ಯಾರಿ ಮಾತನಾಡಿದ್ದಾರೆ. ನಮ್ಮ ವೈವಾಹಿಕ ಜೀವನ ಅದ್ಭುತವಾಗಿದ್ದು, ನಮ್ಮಿಬ್ಬರ ಕೆಮಿಸ್ಟ್ರಿ ಸಹ ಚೆನ್ನಾಗಿದೆ ಅಂತ ಹೇಳಿದ್ದಾರೆ.
ಆಲ್ಮೇಡಾ ನನ್ನ ಜೀವನ ಸಂಗಾತಿ. ಅವರು ಸಹ ನನ್ನನ್ನು ಮದುವೆಯಾಗಲು ಇಷ್ಟಪಟ್ಟಿದ್ದರು. ನನ್ನನ್ನು ಖುಷಿಯಾಗಿರಿಸಲು ಆಲ್ಮೇಡಾ ಸಹ ಪ್ರಯತ್ನ ಮಾಡುತ್ತಾರೆ. ನಾನು ಸಹ ಇಬ್ಬರ ಖುಷಿಯಾಗಿರಲು ಏನು ಮಾಡಬೇಕು ಆ ಎಲ್ಲ ಕೆಲಸಗಳನ್ನು ಮಾಡುತ್ತೇನೆ ಎಂದು ಗ್ಯಾರಿ ಹೇಳಿಕೊಂಡಿದ್ದಾನೆ.
ಜನ ಏನಾದ್ರೂ ಮಾತಾಡಲಿ
ಇಂದಿಗೂ ಜನರು ಈ ದಂಪತಿಯ ಫೋಟೋಗಳನ್ನು ಟ್ರೋಲ್ ಮಾಡುತ್ತಿದ್ದಾರೆ, ಆದರೆ ಗ್ಯಾರಿ ಮತ್ತು ಆಲ್ಮೇಡಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಸ್ಥಳೀಯರು ಏನು ಬೇಕಾದ್ರೂ ಮಾತಾಡಲಿ ನಮಗೆ ಚಿಂತೆ ಇಲ್ಲ ಅಂತ ಹೇಳಿದ್ದಾರೆ.