ಇತ್ತೀಚಿನ ಸುದ್ದಿಕ್ರೈಂರಾಜ್ಯಸುದ್ದಿ

ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಎಸಿಬಿ ದಾಳಿ!

ಬೆಂಗಳೂರು: ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಎಸಿಬಿ ದಾಳಿ  ಮಾಡಿದೆ. ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಬೆಂಗಳೂರಿನಲ್ಲಿ ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ. ಚಾಮರಾಜಪೇಟೆಯ ಬಿ.ಎನ್.ರಘು, R.T.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್​ನ ಲಕ್ಷ್ಮಣ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ.

ಬಿಡಿಎನ 9 ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ಮಾಡಿದೆ. ಸತತವಾಗಿ ಬಿಡಿಎ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದ ಎಸಿಬಿ ಇದೀಗ ಮಧ್ಯವರ್ತಿಗಳ ಮೇಲೆ ದಾಳಿ ಮಾಡಿದೆ. ಅಧಿಕಾರಿಗಳ ಮನೆಯಲ್ಲಿ, ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ದಾಳಿ ಮಾಡಲಾಗಿದ್ದು, ದಾಳಿಗೆ ಮುಖ್ಯ ಕಾರಣ ಕೆಂಪೇಗೌಡ ಲೇಔಟ್​ನಲ್ಲಿ ಬದಲಿನಿವೇಶನ ಹಂಚಿಕೆ ಎಂದು ತಿಳಿದುಬಂದಿದೆ. ರೈತರ ಹೆಸರಲ್ಲಿ ಅಧಿಕಾರಿಗಳ ಜೊತೆಗೂಡಿ ಬದಲಿನಿವೇಶನ ಪಡೆದಿರುವ ಆರೋಪ ಕೇಳಿಬಂದಿದೆ. ರೈತರಿಗೆ ಬದಲಿ ನಿವೇಶನ ನೀಡುವ ಹೆಸರಲ್ಲಿ ಮಧ್ಯವರ್ತಿಗಳಿಂದ ಭ್ರಷ್ಟಾಚಾರ ಎಸಗಲಾಗಿದೆ. ಗೋಮಾಳ ಭೂಮಿಯನ್ನ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿ, ಗೋಮಾಳ ಜಾಗಕ್ಕೆ ಮಧ್ಯವರ್ತಿಗಳು ಪರಿಹಾರ ಪಡೆದಿದ್ದಾರೆ.

ಬೆಂಗಳೂರಿನ ಉಳ್ಳಾಲ RTO ಕಚೇರಿ ಬಳಿಯಿರುವ ಬಿಡಿಎ ಮಧ್ಯವರ್ತಿ ಚಿಕ್ಕಹನುಮಯ್ಯನ ಎರಡು ಅಂತಸ್ತಿನ ಮನೆ ಮೇಲೆ ಬೆಳಗಿನಜಾವ 5 ಗಂಟೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಸೇರಿ 7 ಸಿಬ್ಬಂದಿಯಿಂದ ಶೋಧಕಾರ್ಯ ನಡೆದಿದ್ದು, ಅಧಿಕಾರಿಗಳಿಂದ ಮನೆ ಮುಂದೆ ನಿಲ್ಲಿಸಿರುವ ಕಾರುಗಳ ಪರಿಶೀಲನೆ ಮಾಡಲಾಗಿದೆ. ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ಪೆಟ್ರೋಲ್ ಬಂಕ್ ಕೂಡ ಹೊಂದಿರುವ ಚಿಕ್ಕಹನುಮಯ್ಯ, ಸಾಕಷ್ಟು ವರ್ಷಗಳಿಂದ ರಿಯಲ್ ಎಸ್ಟೇಟ್ ಮಾಡುತ್ತಿದ್ದ. ಆರ್​.ಟಿ ನಗರದ ಸೆಕೆಂಡ್ ಬ್ಲಾಕ್​ನಲ್ಲಿರುವ ಬಿಡಿಎ ಬ್ರೋಕರ್ ಮೋಹನ್​ ಐಶಾರಾಮಿ ಮನೆ ಮೇಲೆ ಕೂಡ 9 ಜನ ಅಧಿಕಾರಗಳಿಂದ ದಾಳಿ ಮಾಡಲಾಗಿದೆ. ಡಿವೈಎಸ್ ಪಿ ಪ್ರಕಾಶ್ ರೆಡ್ಡಿ, ಇನ್ಸ್ಪೆಕ್ಟರ್ ಮಂಜುನಾಥ್ ಸೇರಿ ಒಟ್ಟು 9 ಜನ್ರ ಅಧಿಕಾರ ತಂಡದಿಂದ ಪ್ರತಿಯೊಂದು ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಮಧ್ಯವರ್ತಿ ತೇಜು ಅಲಿಯಾಸ್ ತೇಜಸ್ ಮನೆ ಮೇಲೆ ದಾಳಿ ಮಾಡಲಾಗಿದೆ.
ಆರ್ ಆರ್ ನಗರದಲ್ಲಿ ತೇಜು ಭವ್ಯ ಬಂಗಲೆ ಹೊಂದಿದ್ದು, ಮನೆಯೊಳಗೆ ಸ್ವಿಮ್ಮಿಂಗ್ ಫುಲ್ ಹೊಂದಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಮನೆ ಪಕ್ಕದಲ್ಲೇ ತೇಜು ಮನೆಯಿದೆ.

ಬ್ರೋಕರ್ ಮುನಿರತ್ನ ಅಲಿಯಾಸ್ ರತ್ನವೇಲುಗೆ ಎಸಿಬಿ ಶಾಕ್ ನೀಡಿದ್ದು, ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಮುನಿರತ್ನನ ಐಷಾರಾಮಿ ಮನೆ ಕಂಡು ಅಧಿಕಾರಿಗಳು ಶಾಕ್​ ಆಗಿದ್ದು, ಮನೆಯಲ್ಲಿ ಈಜುಕೊಳ, ಜಿಮ್ ಕೂಡ ಇದೆ. ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್​ನ 19 ಸನ್ ಗ್ಲಾಸಸ್ ಹಾಗೂ 22 ಗಡಿಯಾರಗಳು ಪತ್ತೆಯಾಗಿವೆ.

Related Articles

Leave a Reply

Your email address will not be published. Required fields are marked *

Back to top button