ಇತ್ತೀಚಿನ ಸುದ್ದಿಕ್ರೈಂದೇಶಸುದ್ದಿ

ಹೆಸರಿಗೆ ಸ್ಪಾ.. ಒಳಗೆ ಅದೇ ದಂಧೆ.. ಆನ್‌ಲೈನ್‌ನಲ್ಲೇ ವ್ಯವಹಾರ!

ಗೋವಾದಿಂದ ಬಹುದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹೋಳಿ ಹಬ್ಬದಂದು ಪಣಜಿ ಜಿಲ್ಲೆಯಲ್ಲಿ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಅನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಭೇದಿಸಿದ್ದಾರೆ. ಅಚ್ಚರಿಯೆಂದರೆ, ಈ ದಂಧೆಯನ್ನು ಭೇದಿಸಿದ ಪೊಲೀಸರ ಕೈಗೆ, ಕಿರುತೆರೆ ನಟಿ ಸೇರಿದಂತೆ ಮೂವರು ಮಹಿಳೆಯರು ಸಿಕ್ಕಿ ಬಿದ್ದಿದ್ದಾರೆ. ಈ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

ಮಹಿಳೆಯರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸರು 

ವಾಸ್ತವವಾಗಿ, ಈ ಸಂಪೂರ್ಣ ಪ್ರಕರಣ ಪಣಜಿ ಸಮೀಪದ ಸಂಗೋಲ್ಡಾ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಪೊಲೀಸರು ರೇಡ್ ಮಾಡಿ ಪ್ರಕರಣ ಬೇಧಿಸಿದ್ದಾರೆ. ಇಲ್ಲಿ ಮೂವರು ಮಹಿಳೆಯರು ಸೇರಿದಂತೆ ಯುವಕನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಾಹಿತಿಯ ಪ್ರಕಾರ, ಇಬ್ಬರು ಮಹಿಳೆಯರು ಮುಂಬೈ ಬಳಿಯ ವಿರಾರ್‌ನವರಾಗಿದ್ದರೆ, ಮೂರನೆಯವರು ಹೈದರಾಬಾದ್‌ನವರು.

ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು

ಈ ದಂಧೆಯನ್ನು ಭೇದಿಸಿದ ನಂತರ ಮಾಹಿತಿ ನೀಡಿದ ಪಣಜಿ ಪೊಲೀಸರು, ಹಫೀಜ್ ಸೈಯದ್ ಬಿಲಾಲ್ ಎಂಬ ವ್ಯಕ್ತಿ ಸೆಕ್ಸ್ ರ್ಯಾಕೆಟ್ ದಂಧೆ ನಡೆಸುತ್ತಿರುವ ಬಗ್ಗೆ ಅಪರಾಧ ವಿಭಾಗಕ್ಕೆ ಮಾಹಿತಿ ಲಭಿಸಿತ್ತು. ನಮ್ಮ ತಂಡ ಆತನನ್ನು ಬಲೆಗೆ ಬೀಳಿಸಲು ಯೋಜನೆ ರೂಪಿಸಿತು. ಪ್ರಕರಣದ ಸರಿಯಾದ ಪುರಾವೆ ಸಿಕ್ಕ ತಕ್ಷಣ ತಂಡ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ದಾಳಿ ನಡೆಸಿತ್ತು. ನಂತರ ಮೂವರು ಮಹಿಳೆಯರು ಸೇರಿದಂತೆ ಯುವಕರನ್ನು ಬಂಧಿಸಲಾಯಿತು ಎಂದಿದ್ದಾರೆ.

ಮಾಡೆಲ್ ಮತ್ತು ನಟಿ ಗೋವಾದಲ್ಲಿ ರಾಕೆಟ್ ವ್ಯವಹಾರ ನಡೆಸುತ್ತಿದ್ದಾರೆ

ಗೋವಾದಲ್ಲಿ ಮಾಡೆಲ್‌ಗಳು ಮತ್ತು ಕಿರುತೆರೆ ನಟಿಯರಿಂದ ನಿರಂತರವಾಗಿ ಸೆಕ್ಸ್ ರ್ಯಾಕೆಟ್ ದಂಧೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಬಾರಿ ಕ್ರಮ ಕೈಗೊಂಡರೂ ಜನರು ಹೇಯ ಕೃತ್ಯಗಳಿಂದ ವಿಮುಖರಾಗುತ್ತಿಲ್ಲ. ಇತ್ತೀಚಿನ ಪ್ರಕರಣದಲ್ಲಿ ಹೈದರಾಬಾದ್ ನಿವಾಸಿಯಾಗಿರುವ ಆರೋಪಿ ಸಂಗೋಲ್ಡಾ ಗ್ರಾಮದ ಹೋಟೆಲ್ ಬಳಿ 50 ಸಾವಿರ ರೂಪಾಯಿ ಕೊಟ್ಟು ಡೀಲ್ ಇತ್ಯರ್ಥ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಯು 30 ರಿಂದ 37 ವರ್ಷದೊಳಗಿನ ಮೂವರು ಮಹಿಳೆಯರೊಂದಿಗೆ ಹೋಟೆಲ್‌ಗೆ ಬಂದಿದ್ದಾಗ ಸಿಕ್ಕಿಬಿದ್ದಿದ್ದಾನೆ. ಸದ್ಯ ಈ ವಿಚಾರದಲ್ಲಿ ಪೊಲೀಸರ ಕ್ರಮ ನಡೆಯುತ್ತಿದೆ ಎಂದಿದ್ದಾರೆ.

ಹೆಸರಿಗೆ ಸ್ಪಾ.. ಒಳಗೆ ಅದೇ ದಂಧೆ.. ಆನ್‌ಲೈನ್‌ನಲ್ಲೇ ವ್ಯವಹಾರ!

ಹೊರಗೆ ಸ್ಪಾ ಒಳಗೆ ವೇಶ್ಯಾವಾಟಿಕೆ ಅಡ್ಡೆ.. ಇದು ಹೊಸದೇನೂ ಅಲ್ಲ. ಮಹಾನಗರಗಳಲ್ಲೆಂತೂ ಆಗಾಗ ದಾಳಿ ಆಗುತ್ತಲೇ ಇರುತ್ತದೆ.  ಅಂಥದ್ದೇ ಒಂದು ಪ್ರಕರಣ ಚೆನ್ನೈ ನಿಂದ ವರದಿಯಾಗಿದೆ. ಚೆನ್ನೈ ನಗರದ ವೆಲಾಚೇರಿ ಪ್ರದೇಶದಲ್ಲಿ ಸ್ಪಾ ಸೆಂಟರ್‌ನ ಸೋಗಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಅಪರಾಧದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಕೇಂದ್ರದ ಮೇಲೆ ದಾಳಿ ನಡೆಸಿ ಮೂವರು  ಮಹಿಳೆಯರ ರಕ್ಷಣೆ ಮಾಡಿದ್ದಾರೆ.

ಮಹಿಳೆಯರು ಉದ್ಯೋಗ ಅರಸಿ ಚೆನ್ನೈ ಗೆ ಬಂದಿದ್ದರು.  ಅವರನ್ನು ವಂಚಿಸಿ  ವೇಶ್ಯಾವಾಟಿಕೆ ದಂಧೆಗೆ ದೂಡಲಾಗಿತ್ತು.  ದಂಧೆ ನಡೆಸುತ್ತಿದ್ದ ಇಬ್ಬರು ಕಿಂಗ್ ಪಿನ್ ಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸ್ಪಾ ಮ್ಯಾನೇಜರ್ ಎಂ ಮೊಹಮ್ಮದ್ ಅಸಿಮ್ (30) ಜಿ ನಿತ್ಯನ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಮಹಿಳೆಯರನ್ನು ಸರ್ಕಾರಿ ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

ಮತ್ತೊಂದು ಪ್ರಕರಣ: ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಚೆನ್ನೈ ಪೊಲೀಸರು ತೆನಾಂಪೇಟೆಯ ಪಂಚತಾರಾ ಹೋಟೆಲ್‌ನಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿದ್ದಾರೆ.ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಮಹಿಳೆಯರನ್ನು ಕರೆದುತಂದು ಅವರನ್ನು ದಂಧೆಗೆ ದೂಡಲಾಗುತ್ತಿತ್ತು.  ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರಗಳ ಭರವಸೆ ನೀಡಿ ನಗರಕ್ಕೆ ಕರೆತಂದ ಮಹಿಳೆಯರನ್ನು ರಕ್ಷಿಸಿದರು. ರಕ್ಷಿಸಲ್ಪಟ್ಟ ಮಹಿಳೆಯರು ಮಾಡೆಲಿಂಗ್ ವೃತ್ತಿಯಲ್ಲಿದ್ದರು

Related Articles

Leave a Reply

Your email address will not be published. Required fields are marked *

Back to top button