ಇತ್ತೀಚಿನ ಸುದ್ದಿರಾಜ್ಯಸುದ್ದಿ
ಬಳ್ಳಾರಿಯ ಥರ್ಮಲ್ ಪವರ್ ಪ್ಲಾಂಟ್ನಲ್ಲಿ ಬೆಂಕಿ ಅವಘಡ!ಒಬ್ಬ ಕಾರ್ಮಿಕ ಸಾವು..
ಬಳ್ಳಾರಿಯ ಥರ್ಮಲ್ ಪವರ್ ಪ್ಲಾಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಒಬ್ಬ ಕಾರ್ಮಿಕ ಸಾವು, ಇಬ್ಬರ ಸ್ಥಿತಿ ಗಂಭೀರವಾಗಿದೆ.ಆಕ್ಸಿಜನ್ ಫಿಲ್ ಮಾಡುವ ವೇಳೆ ಸ್ಫೋಟಗೊಂಡಿದ್ದು, ಕುಡುತಿನಿಯ BTPSನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆಕ್ಸಿಜನ್ ಫಿಲ್ಲಿಂಗ್ ವೇಳೆ ಸ್ಫೋಟವಾಗಿ ಮೂವರಿಗೆ ಗಾಯಗಳಾಗಿದ್ದು, ಗಾಯಗೊಂಡ ಮೂವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಓರ್ವನ ಸಾವನಪ್ಪಿದ್ದಾನೆ. ಘಟನಾ ಸ್ಥಳಕ್ಕೆ BTPS ಅಧಿಕಾರಿಗಳ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುಡುತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.