ಇತ್ತೀಚಿನ ಸುದ್ದಿಕ್ರೈಂದೇಶಸುದ್ದಿ

ಹಾಲಿನ ಲೋಟ ಹಿಡಿದು ಬಂದ ಹೆಂಡ್ತಿ ಹಿಂಗಾ ಮಾಡೋದು?

ರಾಜಸ್ಥಾನ: ಮದುವೆ ಎನ್ನುವುದು ಪ್ರತಿಯೊಬ್ಬರ ಬಾಳಲ್ಲೂ ಸುಂದರ ಅನುಭವ ನೀಡುವಂತದ್ದು. ಮದುವೆ ಅಂದರೆ ಎರಡು ದೇಹಗಳಷ್ಟೇ ಅಲ್ಲ, ಎರಡು ಆತ್ಮಗಳ ಮಿಲನ, ಎರಡು ಕುಟುಂಬಗಳ ಸಮ್ಮಿಲನ ಅಂತ ಹಿರಿಯರು ಹೇಳ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಮದುವೆ ಹೀಗೆ ಆಗಬೇಕು, ಹಾಗೆ ಆಗಬೇಕು, ಅಲ್ಲಿಗೆ ಹನಿಮೂನ್‌ಗೆ ಹೋಗಬೇಕು, ನಮ್ಮ ಪ್ರಥಮ ರಾತ್ರಿ ಇಷ್ಟು ರೋಮ್ಯಾಂಟಿಕ್ ಆಗಿರಬೇಕು ಅಂತ ಸಾವಿರ ಕನಸು ಕಂಡಿರುತ್ತಾರೆ. ಈ ಯುವಕ ಕೂಡ ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದ. ಮದುವೆ ಆಗಿ, ಪ್ರಥಮ ರಾತ್ರಿಯಲ್ಲಿ ಬೆಡ್‌ ರೂಂನಲ್ಲಿ ಕುಳಿತು, ಹೆಂಡತಿಗಾಗಿ ಕಾದು ಕುಳಿತಿದ್ದ. ಆದ್ರೆ ಹಾಲಿನ ಲೋಟ ಹಿಡಿದು ಬಂದ ಹೆಂಡತಿ, ಆತನಿಗೆ ಬಿಗ್ ಶಾಕ್ ಕೊಟ್ಟುಬಿಟ್ಟಳು.

 ರಾಜಸ್ಖಾನದಲ್ಲಿ ಗಂಡನಿಗೆ ಶಾಕ್ ಕೊಟ್ಟ ಹೆಂಡತಿ

ರಾಜಸ್ಥಾನದ ಜೈಪುರ ಯುವಕನಿಗೆ ಮನೆಯವರೇ ಗೊತ್ತು ಮಾಡಿದ್ದ ಹುಡುಗಿಯೊಂದಿಗೆ ಮದುವೆ ಆಗಿತ್ತು. ಮದುವೆ ಸಂಭ್ರಮ, ಸಡಗರವೆಲ್ಲ ಮುಗಿದು, ಪ್ರಥಮ ರಾತ್ರಿಗೆ ಹಿರಿಯರು ಮುಹೂರ್ತವನ್ನೂ ಗೊತ್ತು ಮಾಡಿದ್ದರು. ಮದುವೆ ಆದ ಮದುಮಗ ತನ್ನ ಬೆಡ್‌ ರೂಂನಲ್ಲಿ ಕುಳಿತು ಹೆಂಡತಿಗಾಗಿ ಕಾಯುತ್ತಿದ್ದ. ಕೊನೆಗೆ ಹಾಲಿನ ಲೋಟ ಹಿಡಿದು ಕೋಣೆಗೆ ಬಂದ ಆ ಪತ್ನಿ, ಆತನಿಗೆ ಶಾಕ್ ಕೊಟ್ಟು ಬಿಟ್ಟಳು.

ನೀನು ಅಂದ್ರೆ ನನಗೆ ಇಷ್ಟವಿಲ್ಲ ಎಂದ ಪತ್ನಿ!

ಬೆಡ್‌ ರೂಂಗೆ ಬಂದ ಪತ್ನಿ, ಗಂಡನನ್ನು ಮಾತನಾಡಿಸುವ ಗೋಜಿಗೇ ಹೋಗಲಿಲ್ಲ. ಆತ ಮಾತನಾಡಿಸಿದರೂ ಮುಖ ತಿರುಗಿಸಿ ನಿಂತಳು. ಆತ ಪ್ರೀತಿಯಿಂದ ಆಕೆಯ ಬಳಿ ಹೋದಾಗ, ಆತನನ್ನು ದೂರ ತಳ್ಳಿದ ಆಕೆ, ನೀನು ಅಂದರೆ ನನಗೆ ಒಂಚೂರು ಇಷ್ಟ ಇಲ್ಲ ಎಂದು ಬಿಟ್ಟಳು.

ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೆ ಎಂದ ಪತ್ನಿ

ಪತ್ನಿ ವರ್ತನೆಯಿಂದ ಪತಿಗೆ ಶಾಕ್ ಆಯ್ತು. ಆತ ಆಕೆಯನ್ನು ಕನ್ವಿನ್ಸ್ ಮಾಡಲು ಯತ್ನಿಸಿದ. ಆದರೆ ಆಕೆ ಮತ್ತೊಂದು ಶಾಕ್ ಕೊಟ್ಟಳು. ನಾನು ಬೇರೆ ಯುವಕನನ್ನು ಪ್ರೀತಿಸುತ್ತಾ ಇದ್ದೇನೆ. ಅವನ ಜೊತೆಯೇ ಬಾಳುವುದಕ್ಕೆ ಇಷ್ಟ ಪಡುತ್ತೇನೆ ಎಂದು ಬಿಟ್ಟಳು.

ಪತ್ನಿಯನ್ನು ಒಲಿಸಿಕೊಳ್ಳಲು ಪತಿಯ ಹರಸಾಹಸ

ಫಸ್ಟ್ ನೈಟ್ ಬಗ್ಗೆ ಸಾವಿರ ಕನಸು ಕಂಡಿದ್ದ ಆತನಿಗೆ ಶಾಕ್ ಆಯಿತು. ಆ ದಿನ ಆಘಾತದಲ್ಲೇ ಕಳೆದ. ಮುಂದಿನ ಎರಡು ಮೂರು ದಿನ ಆಕೆಯನ್ನು ಒಲಿಸಿಕೊಳ್ಳಲು ನಾನಾ ವಿಧದಲ್ಲಿ ಪ್ರಯತ್ನಿಸಿದ. ಆದರೆ ಎಲ್ಲವೂ ವ್ಯರ್ಥವಾಯಿತು.

ಪತ್ನಿಯ ಪ್ರಿಯಕರನಿಂದಲೂ ಬೆದರಿಕೆ

ಇಷ್ಟೆಲ್ಲಾ ಆದ ಮೇಲೆ ಪತ್ನಿಯ ಪ್ರಿಯಕರನೂ ಆತನಿಗೆ ಬೆದರಿಕೆ ಹಾಕಿದ್ದಾನಂತೆ. ನೀನು ಆಕೆಯನ್ನು ಮುಟ್ಟಬಾರದು. ಆಕೆಯನ್ನು ಮುಟ್ಟಿದರೆ ನಿನ್ನ ಜೀವ ತೆಗೆಯುತ್ತೀನಿ ಅಂತ ಬೆದರಿಕೆ ಹಾಕಿದ್ದಾನಂತೆ.

ಯುವತಿಯ ಪೋಷಕರ ವಿರುದ್ಧ ಆಕ್ರೋಶ

ಇಷ್ಟೆಲ್ಲಾ ವಿಚಾರ ಹುಡುಗನ ಮನೆಯವರಿಗೆ ತಿಳಿದಿದೆ. ಆಗ ಯುವತಿ ಮನೆಯವರ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ. ಎಲ್ಲಾ ವಿಚಾರ ಗೊತ್ತಿದ್ದೂ, ನಮ್ಮ ಮಗನಿಗೆ ನಿಮ್ಮ ಮಗಳನ್ನು ಮದುವೆ ಮಾಡಿಸಿದ್ದು ತಪ್ಪು ಅಂತ ಗಲಾಟೆ ಮಾಡಿದ್ದಾರೆ.

ಪೊಲೀಸ್ ಠಾಣೆಗೆ ದೂರು

ಇನ್ನು ಮೋಸದ ಮದುವೆ ಹಾಗೂ ಹೆಂಡತಿಯ ಪ್ರಿಯಕರನ ಬೆದರಿಕೆ ವಿರುದ್ದ ಯುವಕನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೈಪುರದ ವಿಶ್ವಕರ್ಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪತ್ನಿ ಜತೆಗೆ ಆಕೆಯ ಪ್ರಿಯಕರ ಹಾಗೂ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button