ಇತ್ತೀಚಿನ ಸುದ್ದಿದೇಶಸಿನಿಮಾಸುದ್ದಿ

 ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಬಸವರಾಜ ಬೊಮ್ಮಾಯಿ!

ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮ ಮತ್ತು ಅವರನ್ನು ಅಲ್ಲಿಂದ ಪ್ರತ್ಯೇಕತಾವಾದಿಗಳು ಸಾಮೂಹಿಕವಾಗಿ ಹೊರದಬ್ಬಿದ ಕಥಾವಸ್ತು ಹೊಂದಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ ಚಲನಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಗುಜರಾತ್‌ ಸರಕಾರ ತೆರಿಗೆ ವಿನಾಯಿತಿ ನೀಡಿದೆ.

ನಗರದ ಒರಾಯನ್‌ ಮಾಲ್‌ನ ಪಿವಿಆರ್‌ ಸಿನಿಮಾಸ್‌ನಲ್ಲಿಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಈ ಚಿತ್ರ ವೀಕ್ಷಿಸಿದ ಬೊಮ್ಮಾಯಿ, ಈ ಚಿತ್ರ 90ರ ದಶಕದಲ್ಲಿ ಕಾಶ್ಮೀರದ ಹಿಂದೂಗಳು ಅನುಭವಿಸಿದ ನರಕ ಯಾತನೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಚಿವ ಮುನಿರತ್ನ ಕೂಡ ಸಿಎಂ ಜತೆ ಚಿತ್ರ ವೀಕ್ಷಿಸಿದರು. ಅನಂತ್‌ನಾಗ್‌ ಸೇರಿದಂತೆ ಹಲವಾರು ನಟರು, ಹಿರಿಯ ಪೊಲೀಸ್‌ ಅಧಿಕಾರಿಗಳು, ಕಲಾವಿದರು, ನಾನಾ ರಂಗಗಳ ಗಣ್ಯರು ಈ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

1990 ಜನವರಿ 19ರಂದು ಸಾವಿರಾರು ಕಾಶ್ಮೀರಿ ಪಂಡಿತರಿಗೆ ರಾತ್ರೋರಾತ್ರಿ ಮನೆಯನ್ನು ಬಿಟ್ಟು ಹೋಗಬೇಕು ಎಂದು ಒತ್ತಾಯ ಮಾಡಿದ್ದು, ಅಮೆರಿಕದಲ್ಲಿ ಕೂಡ ಸಂಚಲನ ಮೂಡಿಸಿತ್ತು. ಜನ್ಮಭೂಮಿ ಬಿಟ್ಟು ಹೋಗದೆ ಬೇರೆ ದಾರಿಯಿಲ್ಲ ಎಂದು ಆಗ ಕಾಶ್ಮೀರಿ ಪಂಡಿತರು ಕಂಗಾಲಾಗಿದ್ದರು. 1990ರ ಸಮಯದಲ್ಲಿ ಹೃದಯಕಲಕುವ ಸಾಕಷ್ಟು ಘಟನೆಗಳು ಅಲ್ಲಿ ನಡೆದಿತ್ತು. ಕಳೆದ 3 ವರ್ಷಗಳಿಂದ ಫತ್ವಾ (ಮಾನ್ಯತೆ ಪಡೆದ ಪ್ರಾಧಿಕಾರವು ನೀಡಿದ ಇಸ್ಲಾಮಿಕ್ ಕಾನೂನಿನ ಒಂದು ತೀರ್ಪು) ಕಡೆಯಿಂದ ಬೆದರಿಕೆ ಬರುತ್ತಿದ್ದರೂ ಕೂಡ, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ತಂಡ ಹಾಗೂ ಅವರ ಪತ್ನಿ ಪಲ್ಲವಿ ಜೋಶಿ ಅವರು ಈ ಸಿನಿಮಾಕ್ಕಾಗಿ ಸಾಕಷ್ಟು ಸಂಶೋಧನೆ, ಸಮೀಕ್ಷೆ ಮಾಡಿದ್ದಾರೆ.

ವಿದೇಶಗಳಲ್ಲಿಯೂ ಸಿನಿಮಾ ಪ್ರದರ್ಶನ
ಅಮೆರಿಕದ 16 ಸಿಟಿಗಳಲ್ಲಿ ಈ ಚಿತ್ರದ ಪ್ರಿ ರಿಲೀಸ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. 1990ರಲ್ಲಿ ನಿಜಕ್ಕೂ ಏನಾಯ್ತು ಎಂದು ಹೇಳುವ ಪ್ರಯತ್ನವನ್ನು ಈ ಸಿನಿಮಾ ಮಾಡಿದೆಯಂತೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ನಟ ಅನುಪಮ್ ಖೇರ್ ಅವರು “ದಿ ಕಾಶ್ಮೀರಿ ಫೈಲ್ಸ್ ನನಗೆ ಸಿನಿಮಾಕ್ಕಿಂತ ಮಿಗಿಲಾದುದು. ಕಾಶ್ಮೀರದಲ್ಲಿರುವ ಭಯೋತ್ಪಾದಕತೆಗೆ ಸಾಕ್ಷಿಯಾಗಿರುವ ಎಲ್ಲ ಕಾಶ್ಮೀರಿ ಪಂಡಿತರಿಗೆ ಈ ಚಿತ್ರದಲ್ಲಿ ನನ್ನ ಅಭಿನಯವನ್ನು ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ. ಈ ಚಿತ್ರ ನೋಡಿದ ಅನೇಕರು ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದ ತಿಳಿಸಿದ್ದಾರೆ. ಅದರಲ್ಲಿಯೂ ಒಂದು ಮಹಿಳೆ ಚಿತ್ರ ನೋಡಿ ವಿವೇಕ್ ಅಗ್ನಿಹೋತ್ರಿ ಕಾಲಿಗೆ ಬಿದ್ದು, ಕಣ್ಣೀರು ಹಾಕಿದ್ದರು.

Related Articles

Leave a Reply

Your email address will not be published. Required fields are marked *

Back to top button