ಇತ್ತೀಚಿನ ಸುದ್ದಿವಿದೇಶಸುದ್ದಿ

ಐಎಸ್‌ಎಸ್‌ನಲ್ಲಿ ರಷ್ಯಾದ ನಿರ್ಬಂಧದಿಂದ ಭಾರತ, ಚೀನಾ, ಯೂರೋಪ್ ರಾಷ್ಟ್ರಗಳಿಗೆ ಅಪಾಯ!

ಈ ಹಿಂದೆ ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಯುಎಸ್ ಅಧ್ಯಕ್ಷ ಜೋ ಬಿಡನ್ ರಷ್ಯಾದ ವಿರುದ್ಧ ಕೆಲವು ನಿರ್ಬಂಧಗಳನ್ನು ವಿಧಿಸಿದ್ದರು. ಈ ಕೆಲವು ನಿರ್ಬಂಧಗಳು ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮವನ್ನು ದುರ್ಬಲಗೊಳಿಸುತ್ತವೆ. ಉಕ್ರೇನ್ ಮೇಲಿನ ದಾಳಿಯಿಂದಾಗಿ ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. ನಾವು ವಿಧಿಸಿರುವ ನಿರ್ಬಂಧಗಳು ರಷ್ಯಾದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಲಿವೆ ಎಂದು ಬಿಡೆನ್ ಹೇಳಿದ್ದಾರೆ. ನಮ್ಮ ನಿರ್ಬಂಧಗಳಿಂದ ರಷ್ಯಾದ ಏರೋಸ್ಪೇಸ್ ಉದ್ಯಮವು ಬಹಳಷ್ಟು ಹಾನಿಗೊಳಗಾಗಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಈ ನಿರ್ಬಂಧಗಳಲ್ಲಿ, ರಷ್ಯಾದ ಮಿಲಿಟರಿ, ಕಡಲ ಉದ್ಯಮ, ಆರ್ಥಿಕ ಸಂಸ್ಥೆಗಳು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿಕಟ ಜನರನ್ನು ಸಹ ನಿಷೇಧಿಸಲಾಗಿದೆ.

ಸೂಕ್ಷ್ಮ ತಂತ್ರಜ್ಞಾನಗಳನ್ನು ರಷ್ಯಾಕ್ಕೆ ರಫ್ತು ಮಾಡುವುದನ್ನು ನಿರ್ಬಂಧ

ಶ್ವೇತಭವನದ ಮಾಹಿತಿಯ ಪ್ರಕಾರ, ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮದ ಮೇಲೆ ನೇರವಾಗಿ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಆದರೆ ಕೆಲವು ಹೆಚ್ಚು ಸೂಕ್ಷ್ಮ ತಂತ್ರಜ್ಞಾನಗಳನ್ನು ರಷ್ಯಾಕ್ಕೆ ರಫ್ತು ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ತಂತ್ರಗಳನ್ನು ಬಾಹ್ಯಾಕಾಶ ಉದ್ಯಮದಲ್ಲಿ ಬಳಸಲಾಗುತ್ತದೆ. ಅರೆವಾಹಕಗಳು, ದೂರಸಂಪರ್ಕಗಳು, ಎನ್‌ಕ್ರಿಪ್ಶನ್ ಭದ್ರತೆ, ಲೇಸರ್‌ಗಳು, ಸಂವೇದಕಗಳು, ನ್ಯಾವಿಗೇಷನ್, ಏವಿಯಾನಿಕ್ಸ್ ಮತ್ತು ಕಡಲ ತಂತ್ರಜ್ಞಾನಗಳ ರಫ್ತು ನಿರ್ಬಂಧವನ್ನ ರಷ್ಯಾದ ವಿರುದ್ಧ ಅಮೆರಿಕ ವಿಧಿಸಿದೆ.

ಯುಎಸ್ ಮತ್ತು ರಷ್ಯಾ ನಡುವೆ ಒಪ್ಪಂದ

ಈಗ ಅಮೆರಿಕದ ಈ ನಿಷೇಧವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್) ನಡೆಯುತ್ತಿರುವ ಕೆಲಸದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಉದ್ಭವ ಆಗುವಂತೆ ಮಾಡಿದೆ. ಏಕೆಂದರೆ ಬಾಹ್ಯಾಕಾಶ ನಿಲ್ದಾಣ, ಕಕ್ಷೆಯ ಪ್ರಯಾಣ ಮತ್ತು ಗಗನಯಾತ್ರಿಗಳ ತರಬೇತಿಗಾಗಿ ಯುಎಸ್ ಮತ್ತು ರಷ್ಯಾ ನಡುವೆ ಒಪ್ಪಂದವಿದೆ.

ಯುಎಸ್ ವಿಧಿಸಿರುವ ನಿರ್ಬಂಧಗಳಿಗೆ ಸಂಬಂಧಿಸಿದಂತೆ, ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ, ಬಾಹ್ಯಾಕಾಶ ನಿಲ್ದಾಣದಲ್ಲಿ ರಷ್ಯಾದ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಹೇಳಿದೆ.

ನಾಸಾ ಮತ್ತು ರಷ್ಯಾ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಒಟ್ಟಿಗೆ ಮುಂದುವರೆಸಲಿವೆ

NASA ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ Roscosmos, ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಒಟ್ಟಿಗೆ ಮುಂದುವರೆಸಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಬಳಸುವುದನ್ನು ಮುಂದುವರೆಸುತ್ತದೆ. ಗಗನಯಾತ್ರಿಗಳ ತರಬೇತಿ ಮುಂದುವರಿಯುತ್ತದೆ. ಇದರಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಯಾವುದೇ ಸಮಯದಲ್ಲಿ ಗಗನಯಾತ್ರಿಗಳ ಕೊರತೆ ಆಗುವುದಿಲ್ಲ. ಕಕ್ಷೀಯ ಕಾರ್ಯಾಚರಣೆಗಳು ಮತ್ತು ನೆಲದ ನಿಲ್ದಾಣದ ಕಾರ್ಯಾಚರಣೆಗಳಲ್ಲಿ ನಾವು ರಷ್ಯಾದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನಾಸಾ ಹೇಳಿದೆ. ಅದರಲ್ಲಿ ಯಾವುದೇ ನಿರ್ಬಂಧ ಹೇರಿಕೆ ಮಾಡಲಾಗಿಲ್ಲ.

ಐಎಸ್‌ಎಸ್‌ನಲ್ಲಿ ರಷ್ಯಾದ ನಿರ್ಬಂಧದಿಂದ ಭಾರತ, ಚೀನಾ, ಯೂರೋಪ್ ರಾಷ್ಟ್ರಗಳಿಗೆ ಅಪಾಯ

ಸಿಎನ್‌ಎನ್‌ನ ಸುದ್ದಿ ಪ್ರಕಾರ, ರೋಸ್ಕೊಸ್ಮಾಸ್ ನಿರ್ದೇಶಕ ಡಿಮಿಟ್ರಿ ರೋಗೋಜಿನ್ ಅಮೆರಿಕಕ್ಕೆ ಹಲವು ಟ್ವೀಟ್‌ ಮಾಡಿದ್ದಾರೆ. “ನೀವು ಐಎಸ್‌ಎಸ್‌ನಲ್ಲಿ ನಮ್ಮ ಸಹಕಾರ ಮತ್ತು ಸಹಯೋಗವನ್ನು ನಿರ್ಬಂಧ ಮಾಡಿದರೆ, ಬಾಹ್ಯಾಕಾಶ ನಿಲ್ದಾಣವನ್ನು ಅನಿಯಂತ್ರಿತವಾಗಿ ಮತ್ತು ಅಮೆರಿಕ ಅಥವಾ ಯುರೋಪ್‌ನಲ್ಲಿ ಎಲ್ಲಿಯೂ ಬೀಳದಂತೆ ಯಾರು ರಕ್ಷಣೆ ಮಾಡುತ್ತಾರೆ..? 500 ಟನ್ ತೂಕದ ಈ ರಚನೆಯು ಭಾರತ ಅಥವಾ ಚೀನಾದ ಮೇಲೆ ಬೀಳುವ ಸಾಧ್ಯತೆಯೂ ಹೆಚ್ಚಾಗಿ ಇದೆ.

ನೀವು ಅವರನ್ನು ಈ ರೀತಿ ಹೆದರಿಸಲು ಬಯಸುತ್ತೀರಾ..? ISS ರಷ್ಯಾದ ಮೇಲೆ ಹಾರುವುದಿಲ್ಲ. ನೀವು ಐಎಸ್ಎಸ್ ನ್ನು ಬೇರೆಡೆ ಮಾಡಲು ಹೋದರೆ ಅಪಾಯ ರಷ್ಯಾಗೆ ಇರುವುದಿಲ್ಲ. ಬೇರೆ ರಾಷ್ಟ್ರಗಳಿಗೆ ಅಪಾಯವಾಗಲಿದೆ. ಈ ಅಪಾಯದ ಹೊಣೆಯನ್ನು ನೀವು ಹೊರಲು ಸಿದ್ಧರಿದ್ದೀರಾ? ಅಪಾಯ ಸಂಭವಿಸಿದರೆ ಅದರ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿದೆ ಎಂದು ಅಮೆರಿಕದ ನಾಸಾಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ. ಟ್ವೀಟ್ ನಂತರ ನಾಸಾ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button