ಇತ್ತೀಚಿನ ಸುದ್ದಿವಿದೇಶಸುದ್ದಿ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆ ಪ್ರಕ್ಷುಬ್ಧ!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀತಿಯಿಂದಾಗಿ ಇಡೀ ಜಾಗತಿಕ ಮಾರುಕಟ್ಟೆ ತಲ್ಲಣಗೊಂಡಿದೆ. ಉಕ್ರೇನ್ ಉತ್ಪನ್ನಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಬೆಲೆಗಳು ಹೆಚ್ಚಾಗುತ್ತಿವೆ. ಎಲ್ಲಾ ಕಂಪನಿಗಳ ಶೇರು ಮೌಲ್ಯ ಕುಸಿಯುತ್ತಿದ್ದು, ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಇತ್ತ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಪರಿಸ್ಥಿತಿಯು ದೇಶದ ಶ್ರೀಮಂತರಿಗೆ ಬಲೆಯಾಗಿ ಮಾರ್ಪಟ್ಟಿದೆ. ಈ ಉದ್ವಿಗ್ನತೆಯಿಂದಾಗಿ ರಷ್ಯಾದ ಬಿಲಿಯನೇರ್ ‌ಗಳು ಭಾರೀ ನಷ್ಟವನ್ನು ಎದುರಿಸುತ್ತಿದ್ದಾರೆ. ಬಿಡುಗಡೆಯಾದ ಕೆಲ ವರದಿಗಳ ಪ್ರಕಾರ, ಉಕ್ರೇನ್‌ ನೊಂದಿಗಿನ ವಿವಾದದಿಂದಾಗಿ 2022 ರ ಆರಂಭದಿಂದ ಅವರ ಸಂಪತ್ತು $ 32 ಬಿಲಿಯನ್ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಮಾರುಕಟ್ಟೆ ಪ್ರಕ್ಷುಬ್ಧ

ವರದಿಯ ಪ್ರಕಾರ, ನಷ್ಟವನ್ನು ಅನುಭವಿಸಿದ ಹೆಚ್ಚಿನ ರಷ್ಯಾದ ಬಿಲಿಯನೇರ್ ಗಳು ರಷ್ಯಾದಲ್ಲಿ ಸರಕುಗಳ ಸಂಸ್ಥೆಗಳಲ್ಲಿ ಮಾಲೀಕತ್ವದ ಪಾಲನ್ನು ಹೊಂದಿದ್ದಾರೆ. ಆದರೆ ಈ ವಿವಾದದಿಂದಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಿವೆ. ಈ ಎಲ್ಲಾ ಕಂಪನಿಗಳ ಷೇರುಗಳು ತೀವ್ರವಾಗಿ ಕುಸಿದಿವೆ.

ಪುಟಿನ್ ಅವರು ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ನಗರಗಳನ್ನು ಸ್ವತಂತ್ರ ಪ್ರದೇಶವೆಂದು ಘೋಷಿಸಿದ ನಂತರ ಸೋಮವಾರ ಮತ್ತು ಮಂಗಳವಾರ ಮಾರುಕಟ್ಟೆಗಳು ದಿಗ್ಭ್ರಮೆಗೊಂಡವು ಮತ್ತು ಯುಎಸ್ ಸೇರಿದಂತೆ ದೇಶಗಳು ವಿಧಿಸಿದ ನಿರ್ಬಂಧಗಳಿಂದ ಹೂಡಿಕೆದಾರರಿಗೆ ತೀವ್ರ ಹೊಡೆತ ಬಿದ್ದಿತು.

ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮ

ಪಾಶ್ಚಿಮಾತ್ಯ ದೇಶಗಳು ಮಂಗಳವಾರ ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಿವೆ ಎಂಬುದು ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ ಅನ್ನು ರದ್ದುಗೊಳಿಸುವುದು, ಸರ್ಕಾರಿ ಬಾಂಡ್‌ ಗಳಲ್ಲಿನ ವ್ಯಾಪಾರವನ್ನು ನಿಲ್ಲಿಸುವುದು, ಸ್ವತ್ತುಗಳನ್ನು ಫ್ರೀಜ್ ಮಾಡುವುದು ಮತ್ತು ಶ್ರೀಮಂತರ ಮೇಲೆ ಪ್ರಯಾಣ ನಿಷೇಧವನ್ನು ಹೇರುವುದು ಸೇರಿವೆ.

ವರದಿಯ ಪ್ರಕಾರ, ಈ ನಷ್ಟವನ್ನು ಅನುಭವಿಸಿದ ರಷ್ಯಾದ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಗೆನ್ನಡಿ ಟಿಮ್ಚೆಂಕೊ ಅವರ ನಿವ್ವಳ ಮೌಲ್ಯವು ಈ ವರ್ಷ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಸೋಮವಾರ ಬ್ರಿಟನ್ ಅವರ ಮೇಲೆ ನಿಷೇಧ ಹೇರಿದೆ.

23 ಅಗ್ರ ಬಿಲಿಯನೇರ್ ‌ಗಳಿಗೆ ದೊಡ್ಡ ನಷ್ಟ

ಬಿಲಿಯನೇರ್‌ಗಳ ಸಂಪತ್ತಿನ ಪಟ್ಟಿಯ ಪ್ರಕಾರ, ರಷ್ಯಾದ 23 ಅಗ್ರ ಬಿಲಿಯನೇರ್‌ಗಳು ಪ್ರಸ್ತುತ $ 343 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಇದು ವರ್ಷದ ಕೊನೆಯಲ್ಲಿ $ 375 ಶತಕೋಟಿಯಿಂದ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಬ್ರಿಟನ್ ಬಿಡುಗಡೆ ಮಾಡಿದ ನಿರ್ಬಂಧಗಳ ಪಟ್ಟಿಯಲ್ಲಿ 65 ವರ್ಷದ ಬೋರಿಸ್ ರೊಟೆನ್‌ ಬರ್ಗ್ ಮತ್ತು ಅವರ 48 ವರ್ಷದ ಸೋದರಳಿಯ ಇಗೊರ್ ಇದ್ದಾರೆ. ಅವರ ಕುಟುಂಬಗಳು ಗ್ಯಾಸ್-ಪೈಪ್‌ ಲೈನ್ ನಿರ್ಮಾಣ ಸಂಸ್ಥೆ ಸ್ಟೋರಿ ಗಜ್ಮೊಂಟಾಜ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಸಂಪತ್ತನ್ನು ಗಳಿಸಿದ್ದವು. ಇಗೊರ್ ಅವರ ತಂದೆ ರಷ್ಯಾದ ಅಧ್ಯಕ್ಷ ಪುಟಿನ್ ಅವರ ಮಾಜಿ ಜೂಡೋ ಸ್ಪಾರಿಂಗ್ ಪಾಲುದಾರರಲ್ಲಿ ಒಬ್ಬರಾಗಿದ್ದಾರೆ.

ಏಪ್ರಿಲ್ ನಲ್ಲಿ LPG ಬೆಲೆ ದುಪ್ಪಟ್ಟು

ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಜಾಗತೀಕ ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಏಪ್ರಿಲ್ ನಲ್ಲಿ ಅಡುಗೆ ಅನಿಲ ದರ ಏರಿಗೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಾಗತಿಕ ಅನಿಲ ಬಿಕ್ಕಟ್ಟಿನಿಂದಾಗಿ ಆಹಾರ ಪದಾರ್ಥಗಳ ಬೆಲೆ ಸಹ ಏಪ್ರಿಲ್‌ ನಿಂದ ಹೆಚ್ಚು ದುಬಾರಿಯಾಗಬಹುದು ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button