ಇತ್ತೀಚಿನ ಸುದ್ದಿರಾಜ್ಯಸುದ್ದಿ

ಆರತಕ್ಷತೆಯಲ್ಲಿ ಕುಸಿದು ಬಿದ್ದ ಮದುಮಗಳು!

ಕೋಲಾರ: ಮದುವೆಯಾಗಿ ಸುಖ ಜೀವನ ಕಾಣಬೇಕಿದ್ದ ಯುವತಿಯೊಬ್ಬಳ ಜೀವನದಲ್ಲಿ ವಿಧಿ ತನ್ನ ಲೀಲೆ ತೋರಿದೆ. ಆ ಯುವತಿಯ ಸುಂದರ ಬದುಕನ್ನು ಮದುವೆ ರಿಸೆಪ್ಷನ್ ವೇಳೆಯೇ ಚಿವುಟಿಹಾಕಿದೆ. ತನ್ನ ಮದುವೆಯ ಆರತಕ್ಷತೆಯಲ್ಲಿ ಕುಸಿದು ಬಿದ್ದು ಮದುಮಗಳು ಅಸ್ವಸ್ಥಳಾಗಿದ್ದಾಳೆ. ತಕ್ಷಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿ, ಅಲ್ಲಿನ ವೈದ್ಯರು ಆಕೆಯನ್ನು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿರುವ ಮನಕಲಕುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

MSc ಓದಿದ್ದ ಚೈತ್ರಾ ಕೈವಾರದಲ್ಲಿ ಉಪನ್ಯಾಸಕಿ:
ಚೈತ್ರಾ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಡಚೆರವು ಗ್ರಾಮದ ಕೃಷಿಕ ರಾಮಪ್ಪ ಎಂಬುವರ ಮಗಳು. ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿ, ಕೈವಾರದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 6 ರಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ಆರತಕ್ಷತೆ ನಡೆದಿತ್ತು. ಹೊಸಕೋಟೆ ಮೂಲದ ಯುವಕನೊಂದಿಗೆ ಚೈತ್ರಾ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ಮನೆಯಿಂದ ನೇರ ಆಸ್ಪತ್ರೆಗೆ ಹೋಗಿದ್ದ ಚೈತ್ರಾ. ಚಿಕಿತ್ಸೆ ಫಲಿಸದೆ ನಿನ್ನೆ ನಿಮ್ಹಾನ್ಸ್ ವೈದ್ಯರು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿದ್ದಾರೆ. ಬಳಿಕ ಕುಟುಂಬಸ್ಥರು ಚೈತ್ರಾಳ ಅಂಗಾಂಗ ದಾನ ಮಾಡಿದ್ದಾರೆ.

ಚೈತ್ರಾ (26) ಬ್ರೈನ್ ಡೆಡ್ ಆಗಿ ಅಸ್ವಸ್ಥಳಾದ ಮದುಮಗಳು. ಈ ಯುವತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು. ಆಕೆಯ ನಿಧನಾನಂತರ ಚೈತ್ರಾಳ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ  ಎಂದು  ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿ, ಕರುಣಾಜನಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಸಾರಾಂಶ ಹೀಗಿದೆ:
It was a big day for the 26-year Chaitra but destiny had other plans. She collapsed during her wedding reception at Srinivasapur in Kolar district. She was later declared as brain dead at NIMHANS. Despite the heart breaking tragedy, her parents have decided to donate her organs.

Related Articles

Leave a Reply

Your email address will not be published. Required fields are marked *

Back to top button