ಮೇಕೆದಾಟು 2ನೇ ಹಂತದ ಪಾದಯಾತ್ರೆಗೆ ಮುಹೂರ್ತ ಫಿಕ್ಸ್; ಸಂಸದ ಡಿ.ಕೆ.ಸುರೇಶ್ ಘೋಷಣೆ
ರಾಮನಗರ; ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಮೇಕೆದಾಟು ಪಾದಯಾತ್ರೆಯನ್ನು ತಡೆದಿದೆ. ಆದರೆ ಎಷ್ಟು ದಿನ ತಡೆಯುತ್ತಾರೆ? ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಫೆಬ್ರವರಿ 20ರಿಂದ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭಿಸುತ್ತೇವೆ.
ಈ ಬಾರಿ ಪಾದಯಾತ್ರೆಗೆ ಯಾವುದೇ ಅಡ್ಡಿ ಆತಂಕವಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಂಸದರು, ಕೆಲವರು ಸುಳ್ಳನ್ನು ಅವರ ಮನೆ ದೇವರು ಮಾಡಿಕೊಂಡಿದ್ದಾರೆ. ಒಂದು ವರ್ಷದಿಂದ ಜಿಲ್ಲೆ ಅಭಿವೃದ್ಧಿ ಕಾಣುತ್ತಿದೆಯಂತೆ. ಯಾರು ಈ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ಸ್ವತಃ ಆತ್ಮವಿಮರ್ಷೆ ಮಾಡಿಕೊಳ್ಳಲಿ. ತೆಂಗಿನಕಲ್ಲು, ಮಾಕಳಿ, ದೊಡ್ಡಮಣ್ಣಗುಡ್ಡೆ, ಉಳ್ತಾರ್ ದೊಡ್ಡಿ ಅರಣ್ಯ ಪ್ರದೇಶದ ಬಗ್ಗೆ ಈಗ ಹೇಳುತ್ತಿದ್ದಾರೆ. 15 ವರ್ಷಗಳ ನಂತರವಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಿದರಲ್ಲ ಎಂದು ಸಂತೋಷವಾಗುತ್ತಿದೆ ಎಂದು ವ್ಯಂಗ್ಯವಾಡಿದರು.