ದೇಶಸುದ್ದಿ

ಭಾರತ ಸರಕಾರ ಹಾಗೂ ಎಲಾನ್ ಮಸ್ಕ್ ನಡುವೆ ಉದ್ಯಮ!

ಮೋದಿ ಸರಕಾರದೊಂದಿಗೆ (Modi government) ಇನ್ನೂ ಕೆಲವು ಸವಾಲುಗಳನ್ನು ಅಮೆರಿಕ ಎಲೆಕ್ಟ್ರಿಕ್ ವಾಹನ ಪ್ರವರ್ತಕ ಸಂಸ್ಥೆ ಎದುರಿಸುತ್ತಿರುವುದಾಗಿ ಬಿಲಿಯನೇರ್‌ ಸಂಸ್ಥಾಪಕ ಎಲಾನ್ ಮಸ್ಕ್ (Elon Musk) ಹೇಳಿಕೆ ನೀಡಿದ ಬೆನ್ನಲ್ಲೇ ದೇಶದ ಕನಿಷ್ಟ 4 ರಾಜ್ಯಗಳ ರಾಜಕಾರಣಿಗಳು ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಕಾರು ತಯಾರಕ (Car Maker) ಉದ್ಯಮವನ್ನು ಆರಂಭಿಸುವಂತೆ ಟೆಸ್ಲಾಗೆ ಟ್ವಿಟ್ಟರ್‌ನಲ್ಲಿ ಆಹ್ವಾನ ನೀಡಿದ್ದಾರೆ. ವಾರಾಂತ್ಯದಲ್ಲಿ ಟ್ವೀಟ್ (Tweeted) ಮಾಡಿರುವ ಈ ರಾಜಕಾರಣಿಗಳು ಮೂಲಸೌಕರ್ಯದ ಮಾಹಿತಿ ನೀಡುವುದರ ಜೊತೆಗೆ ಸುಸ್ಥಿರತೆ, ಸುವ್ಯವಸ್ಥಿತ ಅನುಮೋದನೆ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ದೇಶದ ಬೇರೆ ಭಾಗಗಳಿಂದ ದಕ್ಷಿಣದಲ್ಲಿ ತೆಲಂಗಾಣ, (Telangana) ಪಶ್ಚಿಮದಲ್ಲಿ ಮಹಾರಾಷ್ಟ್ರ, ಉತ್ತರದಲ್ಲಿ ಪಂಜಾಬ್ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳದ ಭಾಗದಿಂದ ಟೆಸ್ಲಾಗೆ (Tesla) ಮುಕ್ತ ಸ್ವಾಗತವನ್ನು ನೀಡಿವೆ.

ಸವಾಲಾಗಿರುವ ಕೆಲವೊಂದು ಅಂಶಗಳು:

ಭಾರತ ಸರಕಾರ ಹಾಗೂ ಎಲಾನ್ ಮಸ್ಕ್ ನಡುವೆ ಉದ್ಯಮವನ್ನು ಸ್ಥಾಪಿಸುವ ಕುರಿತಾಗಿ ಹಲವಾರು ವರ್ಷಗಳಿಂದ ಮಾತುಕತೆಗಳು ನಡೆಯುತ್ತಿವೆ. ಆದರೆ ಸ್ಥಳೀಯ ಕಾರ್ಖಾನೆಗಳು ಹಾಗೂ ಸ್ಥಳೀಯ ಭಿನ್ನಾಭಿಪ್ರಾಯಗಳು ಬಿಕ್ಕಟ್ಟಿಗೆ ಕಾರಣವಾಗಿವೆ. ಇದರರ್ಥ ಮೂರು ವರ್ಷಗಳ ಕಾಲ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವುದಿಲ್ಲ ಎಂಬ ಖಚಿತವಾದ ಉದ್ದೇಶವನ್ನು ಬಹಿರಂಗಪಡಿಸಿದೆ. ಮೋದಿಯವರ ಸರಕಾರವು ಸ್ಥಳೀಯವಾಗಿ ಮಾರಾಟ ಮಾಡಲು ಮತ್ತು ರಫ್ತು ಮಾಡುವ ಕಾರ್ಖಾನೆಯನ್ನು ಟೆಸ್ಲಾ ಸ್ಥಾಪಿಸಬೇಕೆಂಬ ಇಚ್ಛೆ ಹೊಂದಿರುವಾಗ, ಆಮದು ಸುಂಕವನ್ನು 100% ರಷ್ಟು ಕಡಿತಗೊಳಿಸಬೇಕೆಂದು ಎಲಾನ್ ಒತ್ತಾಯಿಸಿದ್ದಾರೆ. ಇದರಿಂದ ಟೆಸ್ಲಾಗೆ ಮೊದಲು ಮಾರುಕಟ್ಟೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂಬುದು ಹಿಂದಿರುವ ಯೋಜನೆಯಾಗಿದೆ.

ದೇಶದಲ್ಲಿ ಟೆಸ್ಲಾಗೆ ಕಾರ್ಯಾಚರಣೆಯನ್ನು ಆರಂಭಿಸುವಂತೆ ಆಹ್ವಾನಿಸಿದ ಎಲ್ಲಾ ರಾಜ್ಯಗಳು ಮೋದಿಯವರ ಭಾರತೀಯ ಜನತಾ ಪಕ್ಷವನ್ನು ವಿರೋಧಿಸುವ ಪಕ್ಷಗಳ ಆಳ್ವಿಕೆಯಲ್ಲಿವೆ. ಹೀಗಾಗಿಯೇ ಮೋದಿ ಸರಕಾರಕ್ಕೆ ಕೂಡ ಈ ಆಹ್ವಾನ ಸವಾಲನ್ನೊಡ್ಡಿದೆ ಎಂದೇ ಹೇಳಬಹುದು.

ಅಡ್ಡಿಯಾಗಿರುವ ಸಮಸ್ಯೆಗಳು:

ಯಾವುದೇ ಸ್ಥಳೀಯ ಕಂಪನಿಗಳಿಗೆ ಭಾರತದಲ್ಲಿ ಕಾರು ತಯಾರಿಕಾ ಸಂಸ್ಥೆ ಸ್ಥಾಪಿಸುವುದಕ್ಕೆ ಪ್ರಮುಖವಾಗಿರುವ ಸವಾಲುಗಳೆಂದರೆ ಭೂಸ್ವಾಧೀನ ಮತ್ತು ಕಾರ್ಮಿಕ ಹಕ್ಕುಗಳ ಸಮಸ್ಯೆಗಳು ಹಾಗೂ ಅತಿಯಾದ ಅಧಿಕಾರಶಾಹಿ ಅಂಶಗಳಾಗಿವೆ. 2008ರಲ್ಲಿ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಿಂದ ನಡೆಸಲಾದ ಟಾಟಾ ಮೋಟಾರ್ಸ್ ಲಿಮಿಟೆಡ್‌ಗೆ, ಭೂಸ್ವಾಧೀನದ ವಿರುದ್ಧ ರೈತರ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಸೌಲಭ್ಯವನ್ನು ತ್ಯಜಿಸಬೇಕಾದ ಅನಿವಾರ್ಯತೆ ಉಂಟಾಯಿತು. ವಿಶ್ವದ ಅತ್ಯಂತ ಅಗ್ಗದ ಕಾರಾದ ನ್ಯಾನೋವನ್ನು ಅಲ್ಲಿ ನಿರ್ಮಿಸುವ ಪ್ರಯತ್ನವನ್ನು ಈ ಪ್ರತಿಭಟನೆ ವಿಫಲಗೊಳಿಸಿತು.

ಸ್ಥಳೀಯ ಕಾರು ಸಂಸ್ಥೆಯನ್ನು ಪ್ರತಿಭಟಿಸಿ ವಿದೇಶಿ ಸಂಸ್ಥೆಗಳಿಗೆ ಮಾನ್ಯತೆ ನೀಡುತ್ತಿರುವ ಪಶ್ಚಿಮ ಬಂಗಾಳ:

ನಿಮ್ಮ ಉದ್ಯಮವನ್ನು ಇಲ್ಲಿ ಆರಂಭಿಸಿ ಪಶ್ಚಿಮ ಬಂಗಾಳದಲ್ಲಿ ನಾವು ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿದ್ದೇವೆ ಹಾಗೂ ನಮ್ಮ ನಾಯಕಿ @MamataOfficial ಅತ್ಯುತ್ತಮ ವ್ಯವಹಾರ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬುದಾಗಿ ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಗುಲಾಮ್ ರಬ್ಬಾನಿ ಮಸ್ಕ್ ಅವರ ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡಿದ್ದಾರೆ. ಟಾಟಾ ಮೋಟರ್ಸ್, ಪ್ರಾಂತೀಯ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಬಿಟ್ಟುಕೊಡಲು ಇಚ್ಛೆಯಿಲ್ಲದ ರೈತರಿಗೆ ಮರಳಿ ಹಿಂತಿರುಗಿಸಬೇಕೆಂಬ ಅಭಿಯಾನವನ್ನು ವಿರೋಧ ಪಕ್ಷದ ನಾಯಕಿಯಾಗಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುನ್ನಡೆಸಿದ್ದರು ಎಂಬ ಅಂಶವನ್ನು ಇಲ್ಲಿ ಪ್ರಸ್ತಾವಿಸಲೇಬೇಕು.

ಎಲೆಕ್ಟ್ರಿಕ್ ವಾಹನಗಳು ದೇಶದ ಪ್ರತಿಯೊಬ್ಬ ಗ್ರಾಹಕರನ್ನು ತಲುಪುವುದಿಲ್ಲ: ಬ್ಲೂಮ್‌ಬರ್ಗ್

ವಿಶ್ವದ ನಾಲ್ಕನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆ ಮತ್ತು 1.3 ಶತಕೋಟಿಗೂ ಹೆಚ್ಚು ಜನರಿಗೆ ನೆಲೆಯಾಗಿರುವ ಭಾರತವು ಇಲೆಕ್ಟ್ರಿಕ್ ಕಾರು ತಯಾರಕರಿಗೆ ಅತ್ಯಾಕರ್ಷಕ ಯೋಜನೆಯ ಸ್ಥಳ ಎಂದೆನಿಸಿದೆ. ಆದರೆ ಇಲ್ಲಿನ ರಸ್ತೆಗಳು ಅಗ್ಗದ ದರದ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳನ್ನು ತಯಾರಿಸುವ ಸ್ಥಳೀಯು ಯುನಿಟ್‌ಗಳಾದ ಸುಜುಕಿ ಮೋಟಾರ್ ಕಾರ್ಪೊರೇಷನ್ ಮತ್ತು ಹ್ಯುಂಡೈನ ಪ್ರಾಬಲ್ಯದಲ್ಲಿವೆ.

ದೇಶವು 2070ರ ವೇಳೆಗೆ ನಿವ್ವಳ ಇಂಗಾಲವನ್ನು ಶೂನ್ಯಗೊಳಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಆದರೆ ದೇಶದಲ್ಲಿರುವ ಹೆಚ್ಚಿನ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳು ತಲುಪುವುದಿಲ್ಲ ಎಂಬ ಸತ್ಯ ಕೂಡ ಇದೆ. ಏಕೆಂದರೆ ವರ್ಷಕ್ಕೆ ಜನರು ಗಳಿಸುವ ಆದಾಯ 2,000 ಡಾಲರ್‌ಗಿಂತ ಕಡಿಮೆ ಎಂಬುದಾಗಿ ಬ್ಲೂಮ್‌ಬರ್ಗ್ ಉಲ್ಲೇಖಿಸಿದೆ.

Related Articles

Leave a Reply

Your email address will not be published. Required fields are marked *

Back to top button