ಸುದ್ದಿ

ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ: ಕೊನೆಗೂ ಆರೋಪಿ ಜೈಲುಪಾಲು

ಬೆಂಗಳೂರು: ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ವಂಚಿಸುತ್ತಿದ್ದ ಅರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ ಈರಣ್ಣ ಅಲಿಯಾಸ್​​ ರಾಜಣ್ಣ ಬಂಧಿತ ಆರೋಪಿ.

ಕೇವಲ ಉತ್ತರ ಕರ್ನಾಟಕದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈರಣ್ಣ ನಾನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಅಂತ ಪರಿಚಯಮಾಡಿಕೊಳ್ತಿದ್ದ. ಬಳಿಕ ಎಂ.ಎಸ್ ಬಿಲ್ಡಿಂಗ್ ಬಳಿಯಲ್ಲಿರೋ ಪಾರ್ಕ್​ಗೆ ಕರೆದೊಯ್ದು ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಆಸೆ ತೋರಿಸುತ್ತಿದ್ದ. ಅಭ್ಯರ್ಥಿಗಳಿಗೆ ಫೇಕ್​ ಮಾರ್ಕ್ಸ್​ಕಾರ್ಡ್​ ಮಾಡಿ ಕೊಟ್ಟು ವಿಲೇಜ್ ಅಕೌಂಟೆಂಟ್ ಹುದ್ದೆಗೆ ಅರ್ಜಿಗೆ ಹಾಕಿಸುತ್ತಿದ್ದ ಎನ್ನಲಾಗಿದೆ.

ಈ ಎಲ್ಲಾ ವಿಚಾರಗಳ ಮಧ್ಯೆ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ರೂಪಾಯಿ ಸುಲಿಗೆ ಮಾಡಿ ಬಳಿಕ ಕೆಲಸ ಕೊಡಿಸದೆ ವಂಚಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button