ಕ್ರೈಂದೇಶ

ಪತ್ನಿ ಮೇಲಿನ ಅತ್ಯಾಚಾರಕ್ಕೆ ಪ್ರತೀಕಾರ: ಇಂಟರ್​ನೆಟ್ ನೋಡಿ ಬಾಂಬ್​ ತಯಾರಿಸಿ ಹತ್ಯೆ…

ಭೋಪಾಲ್​:  ತನ್ನ ಹೆಂಡತಿ ಮೇಲೆ  ಅತ್ಯಾಚಾರ ಎಸಗಿದ ಕಿರಾತಕರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಅವರನ್ನು ಬಾಂಬ್​ ಸ್ಪೋಟಿಸಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ 32 ವರ್ಷದ ಆರೋಪಿ ವ್ಯಕ್ತಿಯನ್ನು ಸ್ಪೋಟಕ ಬಳಸಿ ಹತ್ಯೆ ಮಾಡಿದ್ದಾನೆ. ತನ್ನ ಹೆಂಡತಿ ಮೇಲೆ ನಡೆದ ಅತ್ಯಾಚಾರ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಹತ್ಯೆ ಸಂಚು ನಡೆಸಿರುವುದಾಗಿ ಆತ ತಿಳಿಸಿದ್ದಾನೆ ಎಂಬ ಮಾಹಿತಿ ಪೊಲೀಸರು ನೀಡಿದ್ದಾರೆ.

ಜನವರಿ 4 ರಂದು ಗ್ರಾಮದ ಲಾಲ್ ಸಿಂಗ್ ಅವರು ಸಾವನ್ನಪ್ಪಿದ್ದರು. ತಮ್ಮ ಕೃಷಿ ಭೂಮಿಯಲ್ಲಿನ ಕೊಳವೆ ಬಾವಿಯ ಬಳಿ ಸಂಭವಿಸಿದ ಸ್ಫೋಟದಲ್ಲಿ ಅವರು ಸಾವನ್ನಪ್ಪಿದರು. ಜೆಲಾಟಿನ್ ರಾಡ್ ಮತ್ತು ಡಿಟೋನೇಟರ್‌ನಿಂದ ಸ್ಫೋಟ ಸಂಭವಿಸಿದೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ.

ಈ ಘಟನೆಗೂ ಮುನ್ನ ಕೂಡ ಮಾಜಿ ಸರಪಂಚ್ ಭನ್ವರ್ ಲಾಲ್ ಅವರ ಕೊಳವೆ ಬಾವಿ ಬಳಿ ಇದೇ ರೀತಿ ಸ್ಪೋಟ ಸಂಭವಿಸಿತ್ತು. ಆದರೆ, ಈ ವೇಳೆ ಅವರು ಸಣ್ಣ ಪುಟ್ಟ ಗಾಯದಿಂದ ಪರಾಗಿದ್ದರು. ಆದರೆ, ಇದೀಗ ಸಾವನ್ನಪ್ಪಿದ್ದು, ಇದು ಉದ್ದೇಶ ಪೂರ್ವಕವಾಗಿ ನಡೆದ ದಾಳಿ ಎಂಬುದು ತಿಳಿದು ತನಿಖೆ ನಡೆಸಲಾಯಿತು ಎಂದು ರತ್ಲಂ ಪೊಲೀಸ್ ಅಧೀಕ್ಷಕ ಗೌರವ್ ತಿವಾರಿ ಹೇಳಿದರು.

ಈ ಘಟನೆಯ ನಂತರ ಗ್ರಾಮದಿಂದ ಕಾಣೆಯಾದ ಕುಟುಂಬವನ್ನು ಪೊಲೀಸರು ಪತ್ತೆ ಮಾಡಿದರು. ಈ ವೇಳೆ ಸ್ಪೋಟ ನಡೆಸಿದ ಆರೋಪಿ ಕುಟುಂಬ ಊರು ತೊರೆದಿದ್ದು, ತಿಳಿದು ವಿಚಾರಣೆ ನಡೆಸಲಾಯಿತು. ಈ ವೇಳೆ ವಿಚಾರಣೆ ಸಮಯದಲ್ಲಿ ಆರೋಪಿ ಸ್ಪೋಟಿಸಿದ ಅಪರಾಧವನ್ನು ಒಪ್ಪಿಕೊಂಡನು. ಜೊತೆಗೆ ಇದೇ ವೇಳೆ ತನ್ನ ಹೆಂಡತಿಯ ಸಾಮೂಹಿಕ ಅತ್ಯಾಚಾರದ ಪ್ರತೀಕಾರವನ್ನು ತೆಗೆದುಕೊಳ್ಳುವುದಕ್ಕೆ ಈ ಕೃತ್ಯ ಎಸಗಲಾಗಿದೆ ಎಂಬುದನ್ನು ಬಾಯ್ಬಿಟ್ಟಿದ್ದ.

ಲಾಲ್ ಸಿಂಗ್, ಭವರ್‌ಲಾಲ್ ಮತ್ತು ದಿನೇಶ್ ಅವರು ತಮ್ಮ ಮನೆಗೆ ನುಗ್ಗಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದರು. ಅವರನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಅವರು ಅವನನ್ನು ಥಳಿಸಿದರು. ನಂತರ, ಜೊತೆಗೆ ಈ ವಿಷಯ ತಿಳಿಸಿದಂತೆ ಬೆದರಿಕೆ ಹಾಕಿದರು. ಇದರಿಂದ ಪೊಲೀಸರಿಗೆ ವಿಷಯವನ್ನು ತಿಳಿಸಲಿಲ್ಲ ಆದರೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಇಂಟರ್​ನೆಟ್ ನೋಡಿ ಬಾಂಬ್​ ತಯಾರಿಸುವುದನ್ನು ಕಲಿತೆ. ಮೊದಲು ಭನ್ವರ್‌ಲಾಲ್ ಅವರ ಕೊಳವೆ ಬಾವಿಗೆ ಬಾಂಬ್ ಅಳವಡಿಸಲಾಯಿತು. ಆದರೆ, ಸ್ಫೋಟದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಬದುಕುಳಿದರು. ಬಳಿಕ ಲಾಲ್ ಸಿಂಗ್ ಮೇಲೆ ಹೆಚ್ಚು ಜಿಲೆಟಿನ್ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button