ಮಲೆನಾಡಿನಲ್ಲಿ ರೇಷ್ಮೆ ಬೆಳೆದು ಸೈ ಎನಿಸಿಕೊಂಡ ಕೃಷಿಕ ಶ್ರೀಧರ್.!
ಇವರ ಹೆಸರು ಶ್ರೀಧರ್.. ಮೂಲತಃ ಮಲೆನಾಡ ಜಿಲ್ಲೆ ಶಿವಮೊಗ್ಗದವರು.. ಬಿ.ಎ. ಪದವಿ ಮುಗಿಸಿ, ಹತ್ತಾರು ಕಡೆ ಕೆಲಸ ಮಾಡಿದರು.. ಆದ್ರೆ ಬದುಕು ಕಟ್ಟಿಕೊಳ್ಳೋಕೆ ಸಾಧ್ಯವಾಗಲಿಲ್ಲ.. ಕೊನೆಗೆ ಅವರನ್ನ ಸೆಳೆದಿದ್ದು ಕೃಷಿ.. 3 ಎಕರೆ ಪಿತ್ರಾರ್ಜಿತ ಒಣ ಭೂಮಿ ಇತ್ತು.. ಅದರಲ್ಲೇ ಏನಾದ್ರೂ ಸಾಧಿಸಬೇಕು ಎನ್ನುವ ಛಲ ಅವರಲ್ಲಿ ಹುಟ್ಟಿತ್ತು.. ಹೀಗಾಗಿ ಕೃಷಿ ಮಾಡುವ ನಿರ್ಧಾರ ಮಾಡ್ತಾರೆ.. ಮೊದಲ 2 ವರ್ಷ ನಷ್ಟ ಅನುಭವಿಸಬೇಕಾಗುತ್ತೆ.. ಆದರೂ ಛಲ ಬಿಡದೇ ಭೂಮಿ ತಾಯಿಯನ್ನ ನಂಬಿ, ಸಾವಯವ ಕೃಷಿ ಆರಂಭಿಸುತ್ತಾರೆ.. ಸಾವಯವ ಕೃಷಿಯ ಜೊತೆಗೆ, ಕೇವಲ 3 ಎಕರೆ ಜಾಗದಲ್ಲೇ ಸಮಗ್ರ ಕೃಷಿಯನ್ನ ಅಳವಡಿಸಿಕೊಳ್ತಾರೆ.. ಮಲೆನಾಡಿನಲ್ಲಿ ರೇಷ್ಮೆ ಬೆಳೆಯಲು ಸಾಧ್ಯವಿಲ್ಲ ಎನ್ನುವವರ ನಡುವೆ, ರೇಷ್ಮೆ ಬೆಳೆದು ಹೆಚ್ಚಿನ ಇಳುವರಿ ತೆಗೆದು, ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆಯುತ್ತಾರೆ.. ಸಾವಯವ ಸಂತೆ ಎನ್ನುವ ತಮ್ಮದೇ ಸ್ವಂತ ಮಾರುಕಟ್ಟೆಯನ್ನ ಆರಂಭಿಸಿ ತಾವು ಬೆಳೆಯುವ ಬೆಳೆಯನ್ನ ಗ್ರಾಹಕರಿಗೆ ನೇರವಾಗಿ ತಲುಪಿಸುತ್ತಿದ್ದಾರೆ.. ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಪದ್ಧತಿಗೆ ಅಂತ್ಯ ಹಾಡಿ ಸಾವಯವ ಕೃಷಿಯ ಕ್ರಾಂತಿ ಮಾಡಬೇಕು ಅನ್ನೋದೇ ಇವರ ಗುರಿ.. ಆ ಕ್ರಾಂತಿಕಾರಿ ಕೃಷಿಕ ಕೆ.ಸಿ. ಶ್ರೀಧರ್