ಅರ್ಚನಾ ರೆಡ್ಡಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕೊಲೆಗೆ ಕಾರಣವಾಯ್ತಾ ‘ಆ’ ಒಂದು ಮೆಸೇಜ್..!
ಅರ್ಚನಾ ರೆಡ್ಡಿ ಕೊಲೆ ಪ್ರಕರಣ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಕುಡಿದ ಮತ್ತಿನಲ್ಲಿದ್ದ ಯುವಿಕಾಳೇ ತಾಯಿ ಅರ್ಚನಾಗೆ ಮಾಡಿದ್ದ ಸಂದೇಶವೇ ಇದಕ್ಕೆಲ್ಲಾ ಕಾರಣ ಅನ್ನೋ ಅಂಶ ಬಹಿರಂಗಗೊಂಡಿದೆ.ಕುಡಿದ ಮತ್ತಿನಲ್ಲಿ ತಾಯಿ ಅರ್ಚನಾಗೆ ಮೆಸೇಜ್ ಮಾಡಿದ್ದಳು. ಪಬ್ ವೊಂದರಲ್ಲಿ ತನ್ನ ಬರ್ತ್ ಡೇ ಆಚರಿಸಿಕೊಂಡಿದ್ದ ಯುವಿಕಾ ಗೆಳೆಯ ನವೀನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಈ ಫೋಟೋ ಕಳುಹಿಸಿ ತಾಯಿಗೆ ಒಂದು ಮೆಸೇಜ್ ಕಳುಹಿಸಿದ್ದಳು.
ಕುಡಿದ ಮತ್ತಿನಲ್ಲಿ ತಾಯಿ ಅರ್ಚನಾಗೆ ಮೆಸೇಜ್ ಮಾಡಿದ್ದಳು. ಪಬ್ ವೊಂದರಲ್ಲಿ ತನ್ನ ಬರ್ತ್ ಡೇ ಆಚರಿಸಿಕೊಂಡಿದ್ದ ಯುವಿಕಾ ಗೆಳೆಯ ನವೀನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಈ ಫೋಟೋ ಕಳುಹಿಸಿ ತಾಯಿಗೆ ಒಂದು ಮೆಸೇಜ್ ಕಳುಹಿಸಿದ್ದಳು.
ಇವನು ನನ್ನ ಹುಡುಗ, ಬಿಟ್ಟು ಬಿಡು ಎಂದು ಯುವಿಕಾ ಮೆಸೇಜ್ ಮಾಡಿದ್ದಳು. ಈ ಮೆಸೇಜ್ ನೋಡಿ ಶಾಕ್ ಆದ ಅರ್ಚನಾ ಮಗಳನ್ನು ಮನೆಯಿಂದ ಹೊರ ಹಾಕಲು ನಿರ್ಧಾರ ಮಾಡಿದ್ದಳು. ಮಗಳು ಮೆಸೇಜ್ ಮಾಡಿ ಹೇಳೋವರೆಗೂ ಅರ್ಚನಾಗೆ ಈ ವಿಷಯವೇ ಗೊತ್ತಿರಲಿಲ್ಲ.
ಮೆಸೇಜ್ ಬಳಿಕ ತಾಯಿ ಬಳಿ ಬಂದ ಯುವಿಕಾ ಮನೆಯಿಂದ ಹೊರ ಹಾಕದಂತೆ ಕೇಳಿಕೊಂಡಿದ್ದಳು. ಆದ್ರೆ ಮಗಳಿಗೆ ಕಣ್ಣೀರಿಗೂ ಅರ್ಚನಾ ಕರಗಿರಲಿಲ್ಲ. ಇದೇ ದ್ವೇಷಕ್ಕೆ ತಾಯಿಯನ್ನ ಕೊಲೆ ಮಾಡಲು ಮಗಳು ಸಂಚು ರೂಪಿಸಿದ್ದಳು.
ಯುವಿಕಾಳ ಮನಸ್ಸಿನಲ್ಲಿ ತಾಯಿ ಅರ್ಚನಾರೆಡ್ಡಿ ಬಗ್ಗೆ ದ್ವೇಷ ಮೂಡಿತ್ತು.ನನ್ನ ಬಾಯ್ ಫ್ರೆಂಡ್ ಅನ್ನು ಅಮ್ಮ ಮೋಹಿಸುತ್ತಿದ್ದಾಳೆಂದು ಆಕ್ರೋಶಗೊಂಡಿದ್ದಳು. ತನ್ನ ಸ್ವಾರ್ಥಕ್ಕಾಗಿ ತನ್ನಿಂದ ಬಾಯ್ ಫ್ರೇಂಡ್ನ ದೂರ ಮಾಡಲು ಪ್ರಯತ್ನಿಸುತ್ತಿದ್ದಾಳೆಂದು ಕೋಪಗೊಂಡಿದ್ದ ಯುವಿಕಾ ತಾಯಿ ಅರ್ಚನಾರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದಳು.
ಲವ್ ಮಾಡಿ ಮೊದಲ ಮದುವೆ ಮಾಡಿಕೊಂಡಿದ್ದ ಅರವಿಂದ್ ಜೊತೆ 10 ವರ್ಷ ಸಂಸಾರ ನಡೆಸಿದ್ದ ಅರ್ಚನಾ ರೆಡ್ಡಿಗೆ ಯುವಿಕಾ ರೆಡ್ಡಿ ಮತ್ತು ತ್ರಿವಿದ್ ಎಂಬ ಇಬ್ಬರು ಮಕ್ಕಳು ಇದ್ದರು. ಆದ್ರೆ ಇವರ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ. ಅರವಿಂದ್ ನಿಂದ ಡಿವೊರ್ಸ್ ಜೊತೆಗೆ 15 ಕೋಟಿ ಜೀವನಾಂಶ ಪಡೆದಿದ್ದಳು ಅರ್ಚನಾ.