ಸುದ್ದಿ

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸುಧಾಮೂರ್ತಿ

ಸುಧಾಮೂರ್ತಿ( Sudha Murty)ಹೆಸರು ಕೇಳಿದ ತಕ್ಷಣ ಸಹನೆ, ವಾತ್ಸಲ್ಯ, ನಿಷ್ಕಲ್ಮಶ ನಗುವಿನ ಮಾತೃ ಸ್ವರೂಪಿ ಪ್ರತಿರೂಪವೊಂದು ಮನಸ್ಸಿನಲ್ಲಿ ಮೂಡುತ್ತದೆ. ದೇಶದ ಅದೆಷ್ಟೋ ಮಕ್ಕಳು(Children), ಅಸಹಾಯಕರು, ದೀನರ ಪಾಲಿಗೆ ಆಕೆ ನಿಜಕ್ಕೂ ದೇವತೆ(Goddess). ದುಡ್ಡಿರೋದೇ ಪರೋಪಕಾರಕ್ಕೆ ಎಂದು ನಂಬಿ ಅದರಂತೆ ನಡೆದುಕೊಂಡ ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ (Infosys Foundation) ಮೂಲಕ ಕಳೆದ 25 ವರ್ಷಗಳಲ್ಲಿ ಮಾಡಿದ ಜನಪರ ಕಾರ್ಯಗಳನ್ನು ಪಟ್ಟಿ ಮಾಡೋದು ಅಥವಾ ವರ್ಣಿಸೋದು ಕಷ್ಟದ ಕೆಲಸ. ಇಂದಿಗೂ ಸಹ ಅದೆಷ್ಟು ಜನರ ಪಾಲಿಗೆ ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ನೆರವಾಗಿರುವ ಸುಧಾಮೂರ್ತಿಯವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯಲಿದ್ದಾರೆ

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸ್ಥಾನ ತ್ಯಜಿಸಿದ ಸುಧಾಮೂರ್ತಿ..?

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಯಶಸ್ಸಿನಲ್ಲಿನ ಪ್ರಮುಖ ಪಾತ್ರಧಾರಿ, ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಹುದ್ದೆಯನ್ನುಅಂತಿಮವಾಗಿ ಅದನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಕಳೆದ ಡಿಸೆಂಬರ್ 31ಕ್ಕೆ 25 ವರ್ಷಗಳು ತುಂಬಿವೆ.. ಹೀಗಾಗಿ ಕಳೆದ ವರ್ಷವೇ ಸುಧಾಮೂರ್ತಿ ನಾನು ಡಿಸೆಂಬರ್ 31ಕ್ಕೆ ತಾನು ಇನ್ಫೋಸಿಸ್ ಫೌಂಡೇಶನ್​ನಿಂದ ನಿವೃತ್ತಿ ಪಡೆಯುವುದಾಗಿ ಸುಧಾ ಮೂರ್ತಿ ಕಳೆದ ವರ್ಷವೇ ಘೋಷಿಸಿದ್ದರು. ನಿವೃತ್ತಿ ನಂತರ ತಾನು ಕುಟುಂಬದ ಮೂರ್ತಿ ಫೌಂಡೇಶನ್​ನ ಮುಖ್ಯಸ್ಥರ ಸ್ಥಾನದಲ್ಲಿ ಕುಳಿತು ಇದೇ ಕೆಲಸ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಅದು ಚಿಕ್ಕ ಫೌಂಡೇಶನ್, ಹಾಗಾಗಿ ಇನ್ಫೋಸಿಸ್ ಫೌಂಡೇಶನ್​ನಂತೆ ದೊಡ್ಡ ಮಟ್ಟಿಗಿನ ಕೆಲಸವನ್ನು ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಸಹಾಯ ಮತ್ತು ಕೆಲಸ ನಿರಂತರವಾಗಿ ಮುಂದುವರೆಯುತ್ತಿರುತ್ತದೆ ಎಂದಿದ್ದಾರೆ.

ಸಮಾಜ ಸೇವೆಗೆಂದು ಬದುಕು ಮೀಸಲಿಟ್ಟ ಜೀವ ಸುಧಾಮೂರ್ತಿ

ಇನ್ನು ಸುಧಾ ಮೂರ್ತಿ ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು.

ಸುಧಾ ಮೂರ್ತಿಯವರು ಮೊದಲಿನಿಂದಲೂ ತಮ್ಮ ಅನೇಕ ಸಮಾಜ ಸುಧಾರಣಾ ಸೇವೆಗೆ ಹೆಸರಾದವರು. ಅವರಿಗೆ ಮಹಿಳಾ ಸಬಲೀಕರಣದ ಗುರಿಯಿದೆ. ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರು ಜಾಗೃತಿ ಮೂಡಿಸುತ್ತಿದ್ದಾರೆ. ಸ್ವಚ್ಛ ಭಾರತದ ಅಗತ್ಯತೆಯನ್ನು ಅರ್ಥಮಾಡಿಕೊಂಡಿರುವ ಅವರು, ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುತ್ತಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಎಷ್ಟು ಮಕ್ಕಳ ಪಾಲಿಗೆ ವಿದ್ಯಾದಾನ ಮಾಡುತ್ತ ಅವರ ಜೀವನವನ್ನು ರೂಪಿಸುತ್ತಾ ಬಂದಿದ್ದಾರೆ.

ಲೇಖಕಿಯಾಗಿಯು ಗಮನ ಸೆಳೆದಿರುವ ಸುಧಾಮೂರ್ತಿ

ಸುಧಾಮೂರ್ತಿ ಸಮಾಜಸೇವೆ ಮಾತ್ರವಲ್ಲದೆ ಓರ್ವ ಪ್ರಭುದ್ಧ ಲೇಖಕಿಯಾಗಿ ಗಮನಸೆಳೆದಿದ್ದಾರೆ. ಸುಮಾರು 21ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಸುಧಾಮೂರ್ತಿ ಅವರ ಕೃತಿಗಳು ಭಾರತದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡಿವೆ.ಡಾಲರ್‌ ಸೊಸೆ ,ಕಾವೇರಿಯಿಂದ ಮೆಕಾಂಗಿಗೆ, ಋಣ,ಹಕ್ಕಿಯ ತೆರದಲಿ, ಗುಟ್ಟೊಂದ ಹೇಳುವೆ ,ತುಮುಲ,ಮಹಾಶ್ವೇತೆ ಸೇರಿ ಹತ್ತು ಹಲವಾರು ಕಾದಂಬರಿಗಳನ್ನು ಬರೆದಿರುವ ಸುಧಾಮೂರ್ತಿಯವರ ಕೃತಿಗಳು ಈವರೆಗೂ 15ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿದೆ.

ಇನ್ನು ಸುಧಾಮೂರ್ತಿಯವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಈವರೆಗೂ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕ ಸರಕಾರದ ಅತ್ಯುನ್ನತ ಗೌರವವಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ ಅವರು ಭಾಜನರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ತನ್ನ ನೂರನೇ ಘಟಿಕೋತ್ಸವದಲ್ಲಿ, ಗೌರವ ಡಾಕ್ಟರೇಟ್ ಕೂಡ ಸುಧಾ ಮೂರ್ತಿ ಅವರಿಗೆ ಲಭಿಸಿದೆ

Related Articles

Leave a Reply

Your email address will not be published. Required fields are marked *

Back to top button