ಆರೋಗ್ಯ

ಮಕ್ಕಳಿಗೆ ಲಸಿಕೆ ನೀಡುವುದು ಅಷ್ಟೊಂದು ಸೇಫ್ ಅಲ್ಲ ಎಂದಿದ್ದಾರೆ ಅಮೇರಿಕಾದ ತಜ್ಞರು,

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾವೈರಸ್ ವಿರುದ್ಧದ ಲಸಿಕೆಗಳನ್ನು(Vaccines) ಜನವರಿ 3 ರಿಂದ ನೀಡಲಾಗುತ್ತದೆ ಎಂದು ಘೋಷಿಸಿದ್ದು ಹೆಚ್ಚುವರಿಯಾಗಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು 12 ರಿಂದ 18 ವಯಸ್ಸಿನ ನಡುವಿನ ಮಕ್ಕಳಿಗೆ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದಿಸಿದೆ. ಈ ಸಮಯದಲ್ಲಿ ಅನೇಕ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಇನ್ನು ಕೆಲವರು ಪೋಷಕರು ವ್ಯಾಕ್ಸಿನ್‌ನಿಂದ ಮಕ್ಕಳಿಗೆ ಏನಾದರೂ ತೊಂದರೆಯಾದಲ್ಲಿ ಎಂದು ಆತಂಕಕ್ಕೊಳಗಾಗಿದ್ದಾರೆ. COVID-19 ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಬೇಕೇ ಅಥವಾ ಬೇಡವೇ ಎಂಬ ಚರ್ಚೆಯು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ನಡೆಯುತ್ತಿದೆ. ಇತ್ತೀಚಿನ ಸುದ್ದಿಯ ಪ್ರಕಾರ ಯುಎಸ್ ವೈರಾಲಜಿಸ್ಟ್ (Virologist) ಮತ್ತು ಇಮ್ಯುನಾಲಜಿಸ್ಟ್ ಡಾ. ರಾಬರ್ಟ್ ಮಲೋನ್ (Dr. Robert Malone ) COVID ಲಸಿಕೆಗಳು ಮಕ್ಕಳಿಗೆ ಸುರಕ್ಷಿತವಾಗಿಲ್ಲದಿರಬಹುದು ಎಂಬ (Not Be Safe for Children) ಹೇಳಿಕೆ ನೀಡಿದ್ದಾರೆ. ಇದರಿಂದ ಪೋಷಕರು ಪ್ರತಿಯೊಬ್ಬರೂ ಆತಂಕಕ್ಕೊಳಗಾಗಿದ್ದಾರೆ. ಈ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಲಸಿಕೆ ಸಂದೇಹವಾದಿ:
ಯುಎಸ್ ವೈರಾಲಜಿಸ್ಟ್ ಮತ್ತು ಇಮ್ಯುನಾಲಜಿಸ್ಟ್ ಡಾ. ರಾಬರ್ಟ್ ಮಲೋನ್ ಕೋವಿಡ್-19 ವಿರುದ್ಧ ಮಕ್ಕಳಿಗೆ ಲಸಿಕೆ ನೀಡುವುದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಕೆಲವೊಂದು ಅಂಶಗಳನ್ನು ಹಂಚಿಕೊಂಡಿದ್ದಾರೆ. mRNA ಲಸಿಕೆಗಳ ಅನ್ವೇಷಕ ಎಂಬುದಾಗಿ ಮಲೋನ್ ಈ ಹಿಂದೆ ಹೇಳಿಕೊಂಡಿದ್ದರು ಹಾಗೂ ಇದೇ ರೀತಿಯ ಹಲವಾರು ತಪ್ಪು ಮಾಹಿತಿಗಳ ಕುರಿತು ಸಂದೇಹಗಳನ್ನು ಹುಟ್ಟುಹಾಕಿರುವುದರಿಂದ ಮಲೋನ್‌ರನ್ನು ಲಸಿಕೆ ಸಂದೇಹವಾದಿ ಎಂದು ಕೂಡ ಕರೆಯಲಾಗುತ್ತದೆ.

ಲಸಿಕೆಗಳಿಂದ ಮಕ್ಕಳ ಅಂಗಾಂಗಗಳ ಮೇಲೆ ಶಾಶ್ವತ ಹಾನಿ:
ಅವರು ಲಸಿಕೆಗಳ ವಿರುದ್ಧ ನೀಡಿರುವ ಹೇಳಿಕೆಗಳ ವಿಡಿಯೋ ಸಾಮಾಜಿಕ ವೇದಿಕೆಗಳಲ್ಲಿ ಪ್ರಸಾರವಾಗಿದ್ದು COVID-19 ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವುದು ಸುರಕ್ಷಿತವಲ್ಲ ಎಂದು ಸೂಚಿಸುತ್ತದೆ. ಇವರು ಹೇಳಿರುವಂತೆ ಲಸಿಕೆಗಳು ಮಗುವಿನ ದೇಹದಲ್ಲಿ ವಿಷಕಾರಿ ಸ್ಪೈಕ್ ಪ್ರೊಟೀನ್‌ಗಳನ್ನು ಉತ್ಪಾದಿಸಲು ಒತ್ತಡ ಹಾಕುತ್ತದೆ ಎಂದು ತಿಳಿಸಿದ್ದು, ಈ ಪ್ರೋಟೀನ್‌ಗಳು ಮಕ್ಕಳ ಅಂಗಾಂಗಗಳ ಮೇಲೆ ಶಾಶ್ವತ ಹಾನಿಯನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆಯು ಹಲವಾರು ವಿವಾದಗಳಿಗೆ ಆಸ್ಪದವಾಗಿದ್ದು, ಕೋವಿಡ್-19 ಲಸಿಕೆಗಳ ಪರಿಣಾಮಗಳ ಮೇಲೆ ವಿಶ್ವಾಸವಿರಿಸಿರುವವರು ಹಾಗೂ ಈ ಹೇಳಿಕೆಯನ್ನು ಬೆಂಬಲಿಸುವವರ ನಡುವೆ ಚರ್ಚೆ ಉಂಟುಮಾಡಿದೆ.

ಪರ ವಿರೋಧದ ಚರ್ಚೆ:
ಮಕ್ಕಳಿಗೆ ಲಸಿಕೆಗಳನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿರುವ ಸಮಯದಲ್ಲಿಯೇ ರಾಬರ್ಟ್ ಮಲೋನ್ ಹೇಳಿಕೆಗಳು ಸಂಚಲನವನ್ನುಂಟು ಮಾಡಿದ್ದು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಓಮೈಕ್ರಾನ್ ಹಬ್ಬುತ್ತಿರುವ ನಡುವೆಯೇ ಭಾರತ ಇತ್ತೀಚೆಗೆ 15 ರಿಂದ 18ರ ವಯಸ್ಸಿನ ನಡುವಿನ ಮಕ್ಕಳಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ. ದೇಶದಲ್ಲಿರುವ ಹಲವಾರು ವೈದ್ಯರು ಹಾಗೂ ಪರಿಣಿತರು ಮಕ್ಕಳಿಗೆ ಲಸಿಕೆ ಹಾಕುವುದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಬೇಡಿಕೆಯನ್ನಿಟ್ಟಿದ್ದು ಕೊರೋನಾ ವೈರಸ್ ವಿರುದ್ಧ ಮಕ್ಕಳು ಸದೃಢವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದಾರೆ ಎಂದು ಇನ್ನು ಕೆಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೇಳಿಕೆಗಳು ವೈಜ್ಞಾನಿಕವಾಗಿ ಎಷ್ಟು ಸತ್ಯವಾಗಿವೆ?
ಹಲವಾರು ಸತ್ಯ-ಪರಿಶೀಲಿನಾ ಸಂಸ್ಥೆಗಳು ಹಾಗೂ ತಜ್ಞರು ತಿಳಿಸಿರುವಂತೆ ಈ ಸಂಬಂಧಿತವಾಗಿ ಮಲೋನ್ ಹೇಳಿಕೆಗಳನ್ನು ತಪ್ಪು ಎಂದು ತಿಳಿಸಿದ್ದು ಲಸಿಕೆ ಪರಿಣಾಮಕಾರಿತ್ವ ಅಂತೆಯೇ ಲಸಿಕೆ ತಯಾರಕ ಕಂಪನಿಗಳು ಒದಗಿಸಿದ ಸುರಕ್ಷ ಡೇಟಾಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ. ಮೇ 2021ರಲ್ಲಿ ಹೆಲ್ತ್ ಫೀಡ್‌ಬ್ಯಾಕ್ ಪ್ರಕಟಿಸಿದ ವಿಮರ್ಶೆಯನ್ನು ಆಧರಿಸಿ, ಸ್ಪೈಕ್ ಪ್ರೋಟೀನ್ ಕುರಿತು ತನಿಖೆ ಮಾಡಿದ ಅಧ್ಯಯನದ ಫಲಿತಾಂಶಗಳು ತಪ್ಪು ನಿರೂಪಣೆಯನ್ನು ಹೊಂದಿಲ್ಲ ಎಂದು ಹೇಳುವ ಹೇಳಿಕೆಗಳನ್ನು ಅಮಾನ್ಯಗೊಳಿಸಿದೆ. ಈ ಹಿಂದಿನದು ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ. ಆದರೆ ನಂತರದ್ದು ಜೀವಂತವಾಗಿಲ್ಲ ಅಥವಾ ಸಕ್ರಿಯವಾಗಿಲ್ಲ ಎಂದು ತಿಳಿಸಿದೆ. ಅನೇಕರು ವಾದವನ್ನು ಬೆಂಬಲಿಸುತ್ತಾರೆ ಮತ್ತು ಕೋವಿಡ್ ಲಸಿಕೆಗಳಲ್ಲಿನ ಸ್ಪೈಕ್ ಪ್ರೊಟೀನ್ ‘ವಿಷಕಾರಿ’ ಎಂದು ಡಾ. ಮ್ಯಾಲೋನ್ ಹೇಳಿಕೊಂಡಿರುವುದನ್ನು ಸಮ್ಮತಿಸಿದ್ದಾರೆ.

ಓಮೈಕ್ರಾನ್ ಸ್ಫೋಟದ ನಡುವೆಯೇ ಮಕ್ಕಳು ಎಷ್ಟು ಅಪಾಯದಲ್ಲಿದ್ದಾರೆ?
ಸದ್ಯಕ್ಕೆ ಓಮೈಕ್ರಾನ್ ರೂಪಾಂತರವು ಹೆಚ್ಚು ಸೌಮ್ಯ ರೋಗಲಕ್ಷಣಗಳನ್ನೊಳಗೊಂಡಿದೆ. ಡೆಲ್ಟಾಗೆ ಹೋಲಿಸಿದಾಗ ವಿಶ್ವದಾದ್ಯಂತ ಓಮಿಕ್ರಾನ್ ಮರಣ ವರದಿ ಹೋಲಿಕೆ ಮಾಡಿದಾಗ ಇದು ಸೌಮ್ಯವಾಗಿದೆ ಎಂದೇ ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಮಕ್ಕಳ ವಿಷಯಕ್ಕೆ ಬಂದಾಗ ಇತರ ಯಾವುದೇ ವಯಸ್ಸಿನವರಿಗೆ ಹೋಲಿಸಿದಾಗ ಮಕ್ಕಳು ಕೋವಿಡ್-19 ಅನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿದ್ದಾರೆ ಎಂದು ನಂಬಲಾಗಿದೆ. ಇದುವರೆಗೆ ಯುವಜನರಲ್ಲಿ ಕೂಡ ಅನಾರೋಗ್ಯದ ಪ್ರಕರಣಗಳು ಕಡಿಮೆ ಇದೆ. ಆದರೂ, ಕೋವಿಡ್-19 ಹಾಗೂ ಅದರ ರೂಪಾಂತರಗಳು ಪ್ರಾರಂಭದಿಂದಲೂ ಅನಿರೀಕ್ಷಿತವಾಗಿದ್ದು ಯಾವುದೇ ಸಾಧ್ಯತೆಗಳನ್ನು ನಮಗೆ ತಳ್ಳಿಹಾಕಲು ಸಾಧ್ಯವಿಲ್ಲ.

Related Articles

Leave a Reply

Your email address will not be published. Required fields are marked *

Back to top button