ಅಸಾಮಾನ್ಯ ಸ್ಕ್ರೀನ್ಪರದೆಯ ವೀಕ್ಷಣೆಯಿಂದಾಗಿ ಮಕ್ಕಳ ಮೇಲೆ ಆಗುವ ಮಾನಸಿಕ ಆರೋಗ್ಯದ ಪರಿಣಾಮಗಳು..
ತಂತ್ರಜ್ಞಾನದ ಅತಿಹೆಚ್ಚು ಬಳಕೆಯಿಂದ ಆಗುವ ಅನುಕೂಲಗಳ ಜೊತೆಗೆ ಅನಾನುಕೂಲಗಳು ಬೆಸೆದುಕೊಂಡಿವೆ. ಇಂದು ಮಕ್ಕಳು ಸಾಕಷ್ಟು ಸಮಯ ವಿಶೇಷವಾಗಿ ಅವಿರತವಾಗಿ ಪರದೆಯ ವೀಕ್ಷಣೆಯಲ್ಲಿಯೇ ಸಾಕಷ್ಟು ಸಮಯ ಕಳೆಯುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇವಲ ಮಕ್ಕಳ ನಡವಳಿಕೆಯ ಕಾಳಜಿಗಳು ಮಾತ್ರವಲ್ಲದೆ, ಮಕ್ಕಳ ಭಾವನಾತ್ಮಕ ಹಿನ್ನಡೆಗಳ ಮನಸ್ಥಿತಿ ಮತ್ತು ಅವರ ಒಟ್ಟಾರೆ ಯೋಗಕ್ಷೇಮದ ಮೇಲೆ ಈ ಅಸಮಾನ್ಯ ( ಸ್ಕ್ರೀನ್) ಪರದೆಯ ಅವಲಂಬನೆ ಕಲಿಕಾ ಜೀವನದ ಮೇಲೆ ಗಾಢವಾಗಿ ಪರಿಣಾಮ ಬೀರುತ್ತಿವೆ.
ಫೋನ್ ಗಳನ್ನು ಏತಕ್ಕಾಗಿ ಪರಿಚಯಿಸಲಾಯಿತು?
ಏಕತಾನತೆಯ ವೇಳಾಪಟ್ಟಿಯ ನಡುವೆ ವಿರಾಮವನ್ನು ತರಲು, ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಜನವ್ಯವಸ್ಥೆಯನ್ನು ಕ್ರಾಂತಿಕಾರಿಕ ಸಂಪರ್ಕಕ್ಕಾಗಿ ಕರೆತರುವ ಆಲೋಚನೆಯೊಂದಿಗೆ ಫೋನ್ ಗಳನ್ನು ಪರಿಚಯಿಸಲಾಯಿತು, ಇದು ಅದರ ಮೂಲ ಉದ್ದೇಶ. ಆದರೆ ಈಗ ಬದಲಾದ ಸಮಯದಲ್ಲಿ ಪ್ರಪಂಚವು ಸಂಪೂರ್ಣವಾಗಿ ವರ್ಚುವಲ್ ಆಗಿರುವುದರಿಂದ, ಈಗ ಸಹಜತೆಯ ಛಾಯೆಯನ್ನು ಸಾಧಿಸುವುದು ಕಷ್ಟಕರವಾಗಿದೆ. ಮಕ್ಕಳಂತು ಈ ಆಧುನಿಕ ಮೊಬೈಲ್, ಲ್ಯಾಪ್ ಟಾಪ್ ಗಳ ಗೀಳಿಗೆ ಬಲಿಯಾಗುತ್ತಿದ್ದಾರೆ.
ಪರದೆಯ ವೀಕ್ಷಣೆ ಸುದೀರ್ಘ ಗಂಟೆಗಳ ಕಾಲ ಆದಾಗ ಅದರಿಂದಾಗುವ ಪರಿಣಾಮವೆಂದರೆ ಅಸಾಮಾನ್ಯ ಮನಸ್ಥಿತಿ, ಇತರರೊಂದಿಗೆ ಬೆರೆಯುವ ಅಸಮರ್ಥತೆ, ಏಕಾಗ್ರತೆ ಮತ್ತು ಆಯಾಸಕ್ಕೆ ಸಂಬಂಧಿಸಿದೆ.
ದೀರ್ಘಾವಧಿಯವರೆಗೆ ಪರದೆ ವೀಕ್ಷಣೆಗಳು ದೂರ/ಅರೆ ಪ್ರಜ್ಞೆಯನ್ನು ಪ್ರೇರೇಪಿಸುತ್ತದೆ ಎಂದು ಸಂಶೋಧನೆಯು ಸೂಚಿಸುತ್ತದೆ, ಏಕೆಂದರೆ ಇದು ಯಾವುದೇ ಭಾವನಾತ್ಮಕ ಅಭಿವ್ಯಕ್ತಿಯಿಲ್ಲದ ಕನಿಷ್ಠ ಕ್ರಿಯೆಗೆ ದಾರಿ ಮಾಡಿಕೊಡುತ್ತದೆ, ಕೆಲವರಲ್ಲಿ ಅದು ವೈಯಕ್ತಿಕವಾಗಿಯೂ ಬೇರೆ ರೀತಿಯಲ್ಲಿಯೂ ಇರಬಹುದು. ಈ ಫೋನ್ಮತ್ತು ಇತರ ಪರದೆ ಗಳ ವೀಕ್ಷಣೆಯಿಂದಾಗಿ ಮುಖಾಮುಖಿ ಸಂಭಾಷಣೆ ಗಣನೀಯವಾಗಿ ಕಡಿಮೆಯಾಗಿದೆ, ಇದು ವ್ಯಕ್ತಿಗಳಲ್ಲಿ ಪ್ರತ್ಯೇಕತೆಯ ಭಾವನೆಯನ್ನು ಉಂಟುಮಾಡುತ್ತಿದೆ, ಪರಸ್ಪರ ಮಾನವರ ನಡುವೆ ಸಂಪರ್ಕತೆ ಕಳೆದುಕೊಳ್ಳುತ್ತಿದೆ ಮತ್ತು ಎಲ್ಲಾ ಕಡೆಗಳಲ್ಲು ಮೌಖಿಕ ಸನ್ನೆಗಳ ಮೂಲಕ ಕಾಳಜಿ ವ್ಯಕ್ತಪಡಿಸುವ ಅಭ್ಯಾಸವಾಗಿಬಿಟ್ಟಿದೆ. ಅವರರವರದೇ ಲೋಕಗಳಲ್ಲಿ ಮುಕ್ಕಳುಗಳು ಮುಳುಗಿದ್ದಾರೆ.
ಸಮಯ ವ್ಯರ್ಥ
ಯಾವುದೇ ದೈಹಿಕ ಚಲನೆ ಇಲ್ಲದೇ ಮತ್ತು ನಿರ್ಬಂಧಗಳ ಅನುಪಸ್ಥಿತಿಯಲ್ಲಿ, ಯಾವುದೇ ರೀತಿಯ ಆಯ್ಕೆಯ ಅಭಾವವನ್ನೂ ಹೊಂದಿದೆ. ಪರದೆ ವೀಕ್ಷಣೆಯು ತರಗತಿಗಳ ನಡುವೆ ಒಂದು ಕ್ಷಣಿಕ ವಿರಾಮವನ್ನು ಸಹ ತಿಂದು ಹಾಕಿದೆ.ಎಲ್ಲಿಯಾದರೂ ಯಾವುದೇ ಸ್ಥಳವಾಗಲೀ ಉಳಿಯುವ ಅಥವಾ ಹೊರಹೋಗುವಿಕೆಯನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಈ ಪರದೆಗಳ ವೀಕ್ಷಣೆ ಬಲಿ ತೆಗೆದುಕೊಂಡಿದೆ. ತಂದೆ-ತಾಯಿ, ಕುಟುಂಬಸ್ಥರು, ಸ್ನೇಹಿತರೊಂದಿಗಿನ ಕಳೆಯುವ ಸಮಯ, ದೈನಂದಿನ ಸಹಜ ಜೀವನವನ್ನು ಸಹ ಲೌಕಿಕ ದಿನಚರಿಯಂತೆ ಅವಿರತವಾಗಿ ಕಟ್ಟ ಅಭ್ಯಾಸದಂತೆ ಈ ಪರದೆ ವೀಕ್ಷಣೆ ಕಾರ್ಯನಿರ್ವಹಿಸುತ್ತಿದೆ, ಇದು ಮಕ್ಕಳಿಗೆ ಶೈಕ್ಷಣಿಕ ಒತ್ತಡಗಳನ್ನು ನಿವಾರಿಸುವ –ಪುನಶ್ಚೇತನಗೊಳಿಸ ಬಹುದಾದರೂ, ಮಕ್ಕಳನ್ನು ತಾಜಾತನದಿಂದ ಇರಲು ಬಿಡುವುದಿಲ್ಲ.
ಮಕ್ಕಳನ್ನು ಚುರುಕಾದ ಚಟುವಟಿಕೆಗಳಲ್ಲಿಡಲು ಬಿಡುವುದಿಲ್ಲ
ಅಸಮಾನ್ಯ ಪರದೆಯ ಅವಿರತಾ ವೀಕ್ಷಣಾ ಸಮಯವು ಮಕ್ಕಳು ದೈಹಿಕ/ಮಾನಸಿಕ ಇತರ ಚಟುವಟಿಕೆಗಳಲ್ಲಿ ತೊಡಗಿರುವ ಸಮಯವನ್ನು ಕಡಿಮೆ ಮಾಡಲು ಮತ್ತು ಸದಾ ಚುರುಕಿನ ಅಥವಾ ಸಾಮಾನ್ಯ ಚಲನೆಯನ್ನು ಕಡಿಮೆ ಮಾಡಲು ಕಾರಣವಾಗಿದೆ. ಅತಿಯಾದ ಪರದೆಯ ವೀಕ್ಷಣಾ ಸಮಯವು ಮಕ್ಕಳ ಸೃಜನಶೀಲತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳು ಮತ್ತು ಕಡಿಮೆ ಗಮನದ ಅವಧಿಯನ್ನು ಮಕ್ಕಳ ಮನಸ್ಸಿನಲ್ಲಿ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಮಕ್ಕಳು ತಮ್ಮ ಸಾಮಾನ್ಯ ಚಟುವಟಿಕೆಗಳಲ್ಲಿ ಅನಾಸಕ್ತಿಯನ್ನು ಪ್ರದರ್ಶಿಸಬಹುದು, ಶಾಲೆಯಲ್ಲಿ ಅವರ ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಆಲಸ್ಯವು ಅವರ ದೈನಂದಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಅವರ ತರಗತಿಗಳ ಶೈಲಿಯು ವಾಸ್ತವಿಕವಾಗಿ ಬದಲಾಗಿರುವುದರಿಂದ ವಿನೋದ-ವಿರಾಮಗಳು ಮತ್ತು ಕೆಲಸದ ಸಮಯದ ನಡುವೆ ಯಾವುದೇ ಸ್ಪಷ್ಟವಾದ ಬದಲಾವಣೆಯಿಲ್ಲದ ಕಾರಣ ಅವರು ಪ್ರೇರಣೆಯ ಕೊರತೆಯನ್ನು ಅನುಭವಿಸಬಹುದು.
ಪರದೆ ವೀಕ್ಷಣೆ ಹಾನಿಕಾರಕವಾಗಿದೆ
ಪರದೆಗಳಿಂದ ಹೊರಸೂಸುವ ನೀಲಿ ಬೆಳಕಿಗೆ (ವಿಕಿರಣ) ಒಡ್ಡಿಕೊಳ್ಳುವುದರಿಂದ ಎಳೆಯ ಅಥವಾ ಶಾಲಾ ಮಕ್ಕಳ ಕಣ್ಣುಗಳಿಗೆ ಹಾನಿಕಾರಕವಾಗಿದೆ, ಆದರೆ ಈ ವೀಕ್ಷಣೆಗಳಿಂದ ಮಕ್ಕಳ ಉತ್ಪಾದಕತೆ ಮತ್ತು ಅದರ ಕಾರ್ಯನಿರ್ವಹಣೆಗೆ ನೇರವಾಗಿ ಸಂಬಂಧಿಸಿರುವ, ನಿದ್ರೆಯ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಇದು ಪರಿಣಾಮ ಬೀರುತ್ತದೆ. ಮಕ್ಕಳು ಕೆರಳುವಂತೆ, ಕಡಿಮೆ ಕುತೂಹಲಿಗಳಂತೆ, ಸ್ವಯಂ ನಿಯಂತ್ರಣದ ಕೊರತೆ ಮತ್ತು ಹೆಚ್ಚು ಹಠಾತ್ ಪ್ರವೃತ್ತಿಯನ್ನು ಪ್ರದರ್ಶಿಸುವ ಅವಕಾಶವಿದೆ. ವಿದ್ಯಾರ್ಥಿಗಳ ಪರಸ್ಪರ ಪಠ್ಯ ವಿಷಯಗಳ ವಿನಿಮಯದ ಮೇಲೆ ನಡೆಯುವ ಸಂಭಾಷಣೆಗಳೊಂದಿಗೆ ಸಾಮಾಜಿಕ ಸಂವಹನವು ಸೀಮಿತವಾಗುವುದರಿಂದ, ಮಕ್ಕಳು ವೈಯಕ್ತಿಕವಾಗಿ ಸಂಭಾಷಣೆಯನ್ನು ಪ್ರಾರಂಭಿಸುವುದು ಕಷ್ಟವಾಗಬಹುದು, ಇವುಗಳಿಂದ ಸುಲಭವಾಗಿ ವಿಚಲಿತರಾಗಬಹುದು.
ವ್ಯಸನಕಾರಿ ವೀಕ್ಷಣೆಯೂ ಆಗಬಹುದು
ಪರದೆಯ ವೀಕ್ಷಣಾ ಸಮಯವು ವ್ಯಸನಕಾರಿ ಆಗಿ ಮಾನಸಿಕ ನ್ಯೂರೋಲಾಜಿಕಲ್ ಪರಿಣಾಮಗಳನ್ನು ಹೊಂದಿರಬಹುದು, ಇದು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ನಿಭಾಯಿಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಫೋನ್, ಟಿವಿ, ಲ್ಯಾಪ್ ಟಾಪ್ ಇತರ ಪರದೆ ವೀಕ್ಷಣೆಯ ಅವಲಂಬನೆಯು ಮೇಲೆ ಹೇಳಿದಂತೆ ಇತರ ಪ್ರವೃತ್ತಿಗಳಿಗೆ ದಾರಿ ಮಾಡಿಕೊಡುವ, ಹಂಬಲಿಸುವ ನಡವಳಿಕೆಯನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಡಿಜಿಟಲ್ ಮಾಧ್ಯಮಗಳು ಮಕ್ಕಳ ವ್ಯಸನಕಾರಿ ನಡವಳಿಕೆಯು ಅರಿವಿನ ಬೆಳವಣಿಗೆ ಮತ್ತು ಭಾವನಾತ್ಮಕ ನಡುವಳಿಕೆಗಳ ನಿಯಂತ್ರಣದೊಂದಿಗೆ ಸಂಬಂಧ ಹೊಂದಿದೆ ಎಂದು ಕಂಡುಬಂದಿದೆ.
ಪರಿಹಾರ
ಪರದೆಯ ವೀಕ್ಷಣೆ ಅಥವಾ ಬಳಕೆಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ಕೆಲವು ವಿಧಾನಗಳು ಅವಶ್ಯಕವಾಗಿದೆ. ಯಾವುದೇ ಪರದೆಯಿಲ್ಲದೆ ದಿನವಿಡೀ ಕೆಲವು ಪರಿಣಾಮಕಾರಿ ವಿರಾಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದರೇ, ಮಕ್ಕಳಿಗೆ ಚಿತ್ರಕಲೆ ಅಥವಾ ಇತರ ಸಾಂಸ್ಕೃತಿಕ ಕಲೆಯನ್ನು ವಾಸ್ತವಿಕವಾಗಿ ಬಳಸಲು ಮಕ್ಕಳನ್ನು ಆಕರ್ಷಿಸಲು, ಕುತೂಹಲಗೊಳಿಸಲು ಹಲವು ಚಟುವಟಕೆಯ ಆಪ್ ಗಳಿವೆ ಆದರೆ ಈ ವಿರಾಮ ಗಳು ಯಾವುದೇ ಪರದೆಗಳ-ಸ್ಕ್ರೀನ್‌ಗಳ ಹಸ್ತಕ್ಷೇಪವಿಲ್ಲದೆ ನಿಜವಾದ ಪೆನ್, ಪೇಪರ್ ಮತ್ತು ಕಲಾ ಸಾಮಗ್ರಿಗಳನ್ನು ಒಳಗೊಂಡಿರಬೇಕು. ಮಕ್ಕಳು ಭಾವನೆಗಳನ್ನು ಒಪ್ಪಿಕೊಳ್ಳಲು, ಸಾಮಾಜಿಕ ಸಂವಹನ ಮತ್ತು ಶಿಷ್ಟಾಚಾರಗಳನ್ನು ನಡವಳಿಕೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವಂತಹ ಭಾವನೆಗಳು ಹೊರತುಪಡಿಸಿ ಸಂಭಾಷಣೆಗಳಿಗೆ ಸಹಜತೆಯ ಭಾವವನ್ನು ತರುವುದು ಸಹ ಅಗತ್ಯವಾಗಿದೆ.
ನೀವು ಯಾರೊಂದಿಗೆ ಮಾತನಾಡಬೇಕು, ಯಾವಾಗ ಮತ್ತು ಎಷ್ಟು ನೀವು ವಿಷಯವನ್ನು ಸೇವಿಸಲು ಬಯಸುತ್ತೀರಿ ಮತ್ತು ಕೆಲವೊಮ್ಮೆ ಇವೆಲ್ಲದರ ಆಸಕ್ತಿಯನ್ನು ಕಳೆದುಕೊಂಡಾಗ ಮತ್ತು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು ಎಂಬ ವಿಷಯದಲ್ಲಿ ತಂತ್ರಜ್ಞಾನವು ಹೆಚ್ಚು ವಿಮೋಚನೆ ನೀಡುವಂತೆ ತೋರುತ್ತದೆಯಾದರೂ,ಅದರ ವ್ಯಾಪ್ತಿ ಅಂತಹ ಕಡಿಮೆ ಗಮನದಿಂದ ಕಾರ್ಯನಿರ್ವಹಿಸಲು ಮತ್ತಷ್ಟು ಕಷ್ಟವಾಗಬಹುದು. ಹೆಚ್ಚುವರಿಯಾಗಿ, ಮಕ್ಕಳು ನೈಜ ಸಮಯದ ಸಂವಹನಗಳು ಮತ್ತು ಪರಸ್ಪರ ಕ್ರಿಯೆಗಳೊಂದಿಗೆ ಗುರುತಿಸದೇ ಇರಬಹುದು ಮತ್ತು ಏನಾಗುತ್ತದೆ ಎಂದೂ ತಿಳಿಯದೇ ಇರಬಹುದು. ಕೃತಕ ಬುದ್ಧಿಮತ್ತೆಯು ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿರಬಹುದು ಆದರೆ ಮಾನವ ಸ್ಪರ್ಶದ ಕೊರತೆಯಿಂದಾಗಿ ತಂತ್ರಜ್ಞಾನವನ್ನು ಬಳಸುವುದು ಮತ್ತು ಅದರ ಸವಲತ್ತುಗಳ ನಡುವೆ ಸಮತೋಲನ ಸಾಧಿಸಲು ಮಕ್ಕಳು ಶ್ರಮಿಸುವುದರಿಂದ ಪ್ರಯೋಜನ ಪಡೆಯಬಹುದು!
ಅದಲ್ಲದೆ, ಶಿಶುವೈದ್ಯ ಮೈಕೆಲ್ ರಿಚ್ ಸರಿಯಾಗಿ ಗಮನಿಸಿದಂತೆ, “ನಾವು ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳುವಷ್ಟು ಮೃದುವಾಗಿರಬೇಕು ಆದರೆ ಅದನ್ನು ಹೇಗೆ ಸರಿಯಾಗಿ ಬಳಸಬೇಕು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ಆಹಾರವನ್ನು ಬೇಯಿಸಲು ಬೆಂಕಿಯು ಒಂದು ಉತ್ತಮ ಸಂಶೋಧನೆಯಾಗಿತ್ತು, ಆದರೆ ಅದು ನೋಯಿಸಬಹುದು ಮತ್ತು ಕೊಲ್ಲಲೂಬಹುದು ಎಂದು ನಾವು ಕಲಿಯಬೇಕಾಗಿತ್ತು, ”ಎಂದು ಅವರು ಹೇಳುತ್ತಾರೆ!
ಲೇಖಕರು:
ಅಂಬಿಕಾ ಶ್ರೀಕೃಷ್ಣನ್
ಕೌನ್ಸಿಲರ್ ಮತ್ತು ಸೈಕೋಥೆರಪಿಸ್ಟ್ಮೆಡಲ್ ಮೈಂಡ್