ಕ್ರೈಂ
ಕೆನ್ನೆಗೆ ಬಾರಿಸಿದ್ದ ಅತ್ತಿಗೆಯನ್ನೇ ರೇಪ್ ಮಾಡಿ ಕೊಲೆಗೈದು ಮತ್ತೆ ರೇಪ್!
ಬಿಹಾರದ (Bihar)ಮುಜಾಫರ್‌ಪುರ ಜಿಲ್ಲೆಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ(sister-in-law) ಅತ್ತಿಗೆಯನ್ನು (Murder) ಕೊಲೆಗೈದಿದ್ದಾನೆ. ಆಕೆ ಸಾಯುವುದಕ್ಕೂ ಮುನ್ನ ಮತ್ತು ಸತ್ತ ನಂತರ ಆಕೆ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ.
ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಮುಜಾಫರ್‌ಪುರ (ಪೂರ್ವ) ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.
ಅತ್ಯಾಚಾರ ಎಸಗಿದ ನಂತರ ಸಂತ್ರಸ್ತೆಯನ್ನು (Victim) ಗ್ರೈಂಡರ್ ಗೆ ಬಳಸುತ್ತಿದ್ದ ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ. ಆಕೆ ಸತ್ತ ಮೇಲೆಯೂ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ.
ಕ್ರೂರಿಯ ದಾಳಿ ಕಾರಣಕ್ಕೆ ಸಂತ್ರಸ್ತೆಯ ಮುಖ ಮತ್ತು ತಲೆ ಜಜ್ಜಿಹೋಗಿದ್ದು ಆಕೆಯ ದಂತಪಂಕ್ತಿ ಛಿದ್ರಛಿದ್ರವಾಗಿದೆ. ಮನೆಯಲ್ಲಿನ ಜಾನುವಾರುಗಳನ್ನು ನೋಡಿಕೊಂಡು ಸಂತ್ರಸ್ತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು.