`ಟೈಟಾನಿಕ್’ ಸಿನಿಮಾ ನೆನಪಿಸಿದ ರಾಧೆ-ಶ್ಯಾಮ್ ಟ್ರೈಲರ್!
ತೆಲುಗಿನ ಜನಪ್ರಿಯ ನಟ ಪ್ರಭಾಸ್(Prabhas) ಮತ್ತು ನಟಿ ಪೂಜಾ ಹೆಗ್ಡೆ(Pooja Hegde) ನಟಿಸಿರುವ ‘ರಾಧೆ ಶ್ಯಾಮ್’(Radhe Shyam) ಚಿತ್ರದ ‘ನಗುಮೊಮು ಥಾರಲೆ’ ಹಾಡು ಕೆಲವು ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದು ಜನಪ್ರಿಯವಾಗಿರುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಪ್ರಭಾಸ್ ಅಭಿಮಾನಿಗಳು ತುಂಬಾನೇ ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ ಎಂದರೆ ಅದು ‘ರಾಧೆ ಶ್ಯಾಮ್’ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಈಗ ಈ ಚಿತ್ರತಂಡವು ‘ರಾಧೆ ಶ್ಯಾಮ್’ ಚಿತ್ರದ ಟ್ರೈಲರ್(Trailer) ಅನ್ನು ಬಿಡುಗಡೆ ಮಾಡಿದ್ದಾರೆ. ಮುಂಬರುವ ಚಿತ್ರವು ವೈಜ್ಞಾನಿಕ ಮತ್ತು ರೊಮ್ಯಾಂಟಿಕ್(Romantic) ಕಥಾ ಹಂದರ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ನಟ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ನಟಿಸಿರುವ ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.ಈ ಚಿತ್ರವನ್ನು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಇದು ಪ್ರಭಾಸ್ ಅವರ ಹೋಮ್ ಬ್ಯಾನರ್(Prabhas Home Banner) ಗೋಪಿಕೃಷ್ಣ ಮೂವೀಸ್, ಯುವಿ ಕ್ರಿಯೇಷನ್ಸ್ ಮತ್ತು ಟಿ-ಸೀರೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.
1970ರಲ್ಲಿ ನಡೆದ ಪ್ರೇಮಕಥೆ ರಾಧೆ-ಶ್ಯಾಮ್!
ಈ ಚಿತ್ರವು 1970ರ ದಶಕದ ಕೊನೆಯಲ್ಲಿ ಯುರೋಪಿನಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಇದರಲ್ಲಿ ಪ್ರಭಾಸ್ ಒಬ್ಬ ಕೈ ರೇಖೆಗಳನ್ನು ನೋಡಿ ಭವಿಷ್ಯ ಹೇಳುವ ಜ್ಯೋತಿಷಿ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರದ ಸಂಗೀತವನ್ನು ಜಸ್ಟಿನ್ ಪ್ರಭಾಕರನ್ ಸಂಯೋಜಿಸಿದ್ದರೆ, ಅದರ ಛಾಯಾಗ್ರಹಣವನ್ನು ಮನೋಜ್ ಪರಮಹಂಸ ನೋಡಿಕೊಂಡಿದ್ದಾರೆ. ಕೋಟಗಿರಿ ವೆಂಕಟೇಶರಾವ್ ಈ ಚಿತ್ರವನ್ನು ಎಡಿಟ್ ಮಾಡಿದ್ದಾರೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಇತರ ಕೆಲವು ವಿದೇಶಿ ಭಾಷೆಗಳಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ 2022ರ ಜನವರಿ 14 ರಂದು ಬಿಡುಗಡೆಯಾಗಲಿದೆ.
ಭವಿಷ್ಯ ಹೇಳುವ ಪಾತ್ರದಲ್ಲಿ ಪ್ರಭಾಸ್!
ಚಿತ್ರದಲ್ಲಿ ನಿಗೂಢವಾದ ಭವಿಷ್ಯ ಹೇಳುವ ಒಬ್ಬ ನಾಯಕ ಮತ್ತು ಪ್ರೇಮಿ ವಿಕ್ರಮ್ ಆದಿತ್ಯನಾಗಿ ನಟ ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ಈ ಟ್ರೈಲರ್‌ನಲ್ಲಿ ನೋಡಬಹುದು. ಈಗ ಹೊಸದಾಗಿ ಬಿಡುಗಡೆ ಮಾಡಿದ ಟ್ರೈಲರ್ ಈ ವಿಶಿಷ್ಟ ಪ್ರೇಮ ಕಥೆಯ ಕಥಾ ಹಂದರವನ್ನು ತಿಳಿಸುತ್ತವೆ. ಟ್ರೈಲರ್‌ನಲ್ಲಿ ಕಥೆ ಹೇಗೆ ಶುರುವಾಗುತ್ತದೆ ಎಂಬುದನ್ನು ನೋಡಬಹುದಾಗಿದೆ.ಈ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ಇರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಈ ಟ್ರೈಲರ್ ಅದ್ಭುತ ಭಾವನೆಗಳ ಮಿಶ್ರಣವಾಗಿದ್ದು, ಇದರಲ್ಲಿ ಪ್ರೀತಿ ಪ್ರೇಮವಿದೆ, ಒಂದು ದುರಂತವಿದೆ, ಉತ್ತಮ ಸಂಗೀತವಿದೆ, ಟ್ರೈಲರ್‌ನ ಕೊನೆಯಲ್ಲಿ ಹಡಗು ಮುಳುಗಿಸುವ ದೃಶ್ಯಗಳು ನಮಗೆ ‘ಟೈಟಾನಿಕ್’ ಅನ್ನು ನೆನಪಿಸುತ್ತದೆ.
ಬಾಹುಬಲಿ ಸಿನಿಮಾ ಆದ ಮೇಲೆ ಪ್ರಭಾಸ್ ರೇಂಜ್ ಚೇಂಜ್ ಆಗಿದೆ, ಅವರ ಇಮೇಜ್ ಫಿಕ್ಸ್ ಆಗಿದೆ. ಆದರೆ, ಪ್ರಭಾಸ್ ಆ ಇಮೇಜ್ ಬದಲಿಸಿಕೊಳ್ಳಲು ಟ್ರೈ ಮಾಡುತ್ತಿದ್ದಾರೆಂತೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್, ಸಾಂಗ್ಗಳಲ್ಲಿ ಪ್ರಭಾಸ್ ಅವರು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ನಲ್ಲೂ ಅದೇ ಮುಂದುವರಿದಿದೆ. ಈ ಸಿನಿಮಾ ಮೂಲಕ ಹೆಣ್ಣು ಮಕ್ಕಳ ಮನಸ್ಸು ಕದಿಯುವಲ್ಲಿ ಪ್ರಭಾಸ್ ಯಶಸ್ವಿಯಾಗುತ್ತಾರೆ ಅನ್ನುವದರಲ್ಲಿ ಯಾವುದೇ ಅನುಮಾನವಿಲ್ಲ.