ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಲು ಈ ಆಯುರ್ವೇದ ಸಲಹೆ ಪಾಲಿಸಿ..
ನಾವು ಸಾಮಾನ್ಯವಾಗಿ ಚರ್ಮದ ಸಮಸ್ಯೆಗಳಿಗೆ ರಾಸಾಯನಿಕ ವಸ್ತುಗಳಿರುವ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ಅದು ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಅದರ ಬದಲಾಗಿ ಆಯುರ್ವೇದ ವಸ್ತುಗಳನ್ನು ಬಳಕೆ ಮಾಡುವುದು ಸೂಕ್ತ.
ಕೊಬ್ಬರಿ ಎಣ್ಣೆ ಚರ್ಮದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನೀವು ಎಣ್ಣೆಯನ್ನು ಬಿಸಿ ಮಾಡಿ ಮುಖಕ್ಕೆ ಮತ್ತು ಪಾದಗಳಿಗೆ ಮಸಾಜ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ ಮತ್ತು ಹಿಮ್ಮಡಿ ಸೀಳಿನ ಸಮಸ್ಯೆಗೆ ಪರಿಹಾರ ಲಭಿಸುತ್ತದೆ.
ವ್ಯಾಯಾಮ ಮಾಡುವುದರಿಂದ ನಮಗೆ ಹಲವಾರು ಪ್ರಯೋಜನಗಳು ಲಭಿಸುತ್ತದೆ ಎಂಬುದು ತಿಳಿದಿದೆ. ಆದರೆ ಇದರಿಂದ ಚರ್ಮದ ಆರೋಗ್ಯ ಸಹ ಸುಧಾರಿಸುತ್ತದೆ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ನಿಯಮಿತ ವ್ಯಾಯಾಮ ನಿಮ್ಮ ಚಲನಶೀಲತೆಯನ್ನ ಹೆಚ್ಚಿಸುತ್ತದೆ. ಈ ಮೂಲಕ ಚರ್ಮದ ಕಾಂತಿ ಕಾಪಾಡುತ್ತದೆ.
ಸ್ನಾನಕ್ಕೆ ಮೊದಲು ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದನ್ನು ಮುಖದಿಂದ ಹಿಡಿದು ಕಾಲಿನ ತನಕ ಸರಿಯಾಗಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಯಾವಾಗಲೂ ಬಿಸಿಬಿಸಿ ಆಹಾರ ಸೇವನೆ ಮಾಡುವುದು ನಿಮ್ಮ ಚರ್ಮಕ್ಕೆ ಲ್ಯೂಬ್ರಿಕೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಚಳಿಗಾಲದಲ್ಲಿ ಇವು ನಿಮ್ಮ ಆರೋಗ್ಯ ಕಾಪಾಡಲು ಸಹ ಸಹಕಾರಿ.
ಚರ್ಮದ ಮೇಲೆ ಅರಿಶಿನ ಬಳಸುವುದು ಎಷ್ಟು ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳನ್ನು ಹೋಗಲಾಡಿಸುವುದರ ಜೊತೆಗೆ ಕಪ್ಪು ಕಲೆಗಳ ನಿವಾರಣೆ ಮಾಡುತ್ತದೆ.
ತ್ರಿಫಲದಲ್ಲಿ ದೇಹವನ್ನು ನಿರ್ವಿಷಗೊಳಿಸುವ ಶಕ್ತಿ ಇದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ತ್ರಿಫಲದಲ್ಲಿ ಇರುವಂತಹ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಕಾಂತಿ ನೀಡುತ್ತದೆ.
ಶುಂಠಿ ಚಹಾ ಸೇವನೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೋರ ಹೋಗುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ.
ಜೇನುತುಪ್ಪದಲ್ಲಿ ಆ್ಯಂಟಿ ಆಕ್ಸಿಡೆಂಟ್ ಇದ್ದು ನಿಮ್ಮ ಚರ್ಮದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಚರ್ಮದ ಮೇಲೆ ಕಂಡುಬರುವ ಕಲೆಗಳನ್ನು ಇದು ಸುಲಭವಾಗಿ ನಿವಾರಣೆ ಮಾಡುತ್ತದೆ.