ದೆಹಲಿಯಲ್ಲಿ ಚಳಿಯೋ ಚಳಿ: ಮಂಜು ಮುಸುಗಿದ ವಾತಾವರಣ..
.ಇಂದು ತಾಪಮಾನ ಕುಸಿತ ಕಂಡ ಪರಿಣಾಮ ಮಂಜು ಮುಸುಕಿದ ವಾತಾವರಣ ದೆಹಲಿ ಜನರನ್ನು ಕಾಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ 4.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದೊಂದಿಗೆ ಇಂದು ರಾಷ್ಟ್ರ ರಾಜಧಾನಿ ಅತ್ಯಂತ ಚಳಿಯನ್ನು ದಾಖಲಿಸಿದೆ. ಉತ್ತರ ಭಾರತದಾದ್ಯಂತ ಶೀತಗಾಳಿಯು ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, ಈ ಪ್ರದೇಶದ ಹಲವಾರು ಭಾಗಗಳಲ್ಲಿ ತಾಪಮಾನವು ಹಿಮಭರಿತ ಗಾಳಿಯಿಂದಾಗಿ ಕುಸಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ನಾಲ್ಕು ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಜೊತೆಗೆ ನೋಯ್ಡಾದಲ್ಲಿ ಕನಿಷ್ಠ ತಾಪಮಾನವು 8.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದ್ದು ಇದು ಈ ತಿಂಗಳ ಅತ್ಯಂತ ಚಳಿಯ ದಿನವಾಗಿದೆ. ನಗರದಲ್ಲಿ ಗರಿಷ್ಠ ತಾಪಮಾನವು 18 ಡಿಗ್ರಿಯಲ್ಲಿ ದಾಖಲಾಗಿದೆ. ಇದು ಸಾಮಾನ್ಯ ಮಟ್ಟಕ್ಕಿಂತ ಐದು ಪಟ್ಟು ಕಡಿಮೆಯಾಗಿದೆ. IMD ಪ್ರಕಾರ, ಒಂದು ನಗರವು 10 ಡಿಗ್ರಿಗಿಂತ ಕಡಿಮೆ ತಾಪಮಾನವನ್ನು ದಾಖಲಿಸಿದಾಗ ಮತ್ತು ಗರಿಷ್ಠ ತಾಪಮಾನವು 4.5 ಆಗಿರುತ್ತದೆ. ನಂತರ ಅದನ್ನು ‘ಶೀತ ಅಲೆ’ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ವಾಯುವ್ಯ ಭಾರತವು ಮುಂದಿನ ವಾರದಲ್ಲಿ ಶೀತ ಅಲೆಯಂತಹ ಪರಿಸ್ಥಿತಿಗಳಿಗೆ ಸಾಕ್ಷಿಯಾಗಲಿದೆ.
ಮುಂದಿನ ದಿನಗಳಲ್ಲಿ ದೆಹಲಿಯು ತಂಪಾದ ಹವಾಮಾನವನ್ನು ವೀಕ್ಷಿಸುವುದನ್ನು ಮುಂದುವರೆಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ, “ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಹಿಮಪಾತವು ಬಯಲು ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಹೇಳಿದೆ. “ವಾಯುವ್ಯ ಭಾರತದಲ್ಲಿ ದಿನದ ತಾಪಮಾನವು ಗಮನಾರ್ಹವಾಗಿ ಸಾಮಾನ್ಯ ದಿನಗಳಿಗಿಂತ ಕಡಿಮೆಯಾಗಿದೆ. ಈ ದಿನದ ತಾಪಮಾನವು ಡಿಸೆಂಬರ್ 21 ರವರೆಗೆ ಸಾಮಾನ್ಯ ದಿನಕ್ಕಿಂತ ಕಡಿಮೆ ಇರುತ್ತದೆ” ಎಂದು IMD ನಿನ್ನೆ ತಿಳಿಸಿದೆ.
ಉತ್ತರಾಖಂಡದಲ್ಲಿ ಕಡಿಮೆ ತಾಪಮಾನ ದಾಖಲು
ಮತ್ತೊಂದೆಡೆ, ಹವಾಮಾನ ಇಲಾಖೆಯು ಡಿಸೆಂಬರ್ 21 ರವರೆಗೆ ಉತ್ತರಾಖಂಡದ ಹಲವಾರು ಪ್ರದೇಶಗಳಲ್ಲಿ ಶೀತ ಅಲೆಗಳ ಬಗ್ಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. IMD ಪ್ರಕಾರ, ಶುಕ್ರವಾರದಂದು ರಾಣಿಚೌರಿಯಲ್ಲಿ (-2.7 ° C) ಕಡಿಮೆ ತಾಪಮಾನ ದಾಖಲಾಗಿದೆ. ಮುಕ್ತೇಶ್ವರ್ (0.2°C), ಮಸ್ಸೂರಿ (0.9°C), ಪಿಥೋರಗಢ್ (0.9°C), ಮತ್ತು ನ್ಯೂ ತೆಹ್ರಿ (1.4°C) ದಾಖಲಾಗಿದೆ.
ರಾಜಸ್ಥಾನದಲ್ಲಿ ತೀವ್ರ ಶೀತ ಗಾಳಿ
ಮುಂದಿನ ದಿನಗಳಲ್ಲಿ ರಾಜಸ್ಥಾನದ ಹಲವಾರು ಪ್ರದೇಶಗಳಲ್ಲಿ ತೀವ್ರ ಶೀತ ಗಾಳಿ ಇರಲಿದೆ ಎಂದು ಹವಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಫತೇಪುರ್ ಮತ್ತು ಚುರುಗಳಲ್ಲಿ ಕನಿಷ್ಠ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾದ ಕಾರಣ ಶೀತ ಗಾಳಿಯು ರಾಜಸ್ಥಾನವನ್ನು ಆವರಿಸಿದೆ. ಸಿಕಾರ್‌ನ ಫತೇಪುರ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 3.3 ಡಿಗ್ರಿ ಸೆಲ್ಸಿಯಸ್ ಮತ್ತು ನೆರೆಯ ಚುರುನಲ್ಲಿ ಮೈನಸ್ 1.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ (ಮೆಟಿ) ತಿಳಿಸಿದೆ.
ದೆಹಲಿ ವಾಯುಮಾಲಿನ್ಯ
ದೆಹಲಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (AQI) ಸುಧಾರಿಸಿದೆ ಆದರೆ ಇನ್ನೂ ‘ಕಳಪೆ’ ವಿಭಾಗದಲ್ಲಿ ಉಳಿದಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಇಂಡಿಯಾದ ಪ್ರಕಾರ, ದೆಹಲಿಯಲ್ಲಿ ಒಟ್ಟಾರೆ AQI ಪ್ರಸ್ತುತ 290 ರಷ್ಟಿದೆ, ಡಿಸೆಂಬರ್ 18 ರ ಶನಿವಾರದಂದು 319 ದಾಖಲಾಗಿದೆ. ಮತ್ತೊಂದೆಡೆ, ರಾಜಸ್ಥಾನದಂತಹ ರಾಜ್ಯಗಳು ಚುರುನಲ್ಲಿ -2.6 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದರೆ, ಹರಿಯಾಣದ ನರ್ನಾಲ್ ಮತ್ತು ಹಿಸ್ಸಾರ್‌ನಲ್ಲಿ ಪಾದರಸವು ಋತುವಿನ ಕನಿಷ್ಠ 1.2 ಡಿಗ್ರಿ ಸೆಲ್ಸಿಯಸ್ ಮತ್ತು 2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.