ಸುದ್ದಿ
ಲೋಕಾಯುಕ್ತ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನ..
ಬೆಂಗಳೂರು: ಮೋಸದಿಂದ ತಂದೆ ಬಳಿ ಸಹಿ ಹಾಕಿಸಿಕೊಂಡು ನಿವೇಶನ ಕಬಳಿಕೆ ಮಾಡಿರುವುದಾಗಿ ಆರೋಪಿಸಿ ನ್ಯಾಯಕ್ಕಾಗಿ ಲೋಕಾಯುಕ್ತ ಕಚೇರಿ ಮುಂದೆಯೇ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮಂಜುನಾಥ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ದೂರು ಕೊಡಲು ಲೋಕಾಯುಕ್ತ ಕಚೇರಿಗೆ ಬರುವ ಮೊದಲೇ ವಿಷ ಸೇವಿಸಿದ್ದ. ದೂರು ನೀಡಿದ ಬಳಿಕ ಕುಸಿದು ಬಿದ್ದ ಆತನನ್ನು ಅಲ್ಲಿನ ಸಿಬ್ಬಂದಿ ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ದೂರು ನೀಡಲು ಬರುವ ಮುನ್ನವೇ ವಿಷ ಸೇವಿಸಿದ್ದ ಎಂಬ ಕಾರಣಕ್ಕೆ ಯುವಕನ ವಿರುದ್ಧವೇ ಆತ್ಮಹತ್ಯೆ ಯತ್ನ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಕೇಶವ ಎಂಬಾತ ತಂದೆ ಬಳಿ ಸಹಿ ಹಾಕಿಸಿಕೊಂಡು ಅಕ್ರಮವಾಗಿ ನಿವೇಶನ ಕಬಳಿಸಿದ್ದಾನೆ. ಕೇಳಿದರೆ ನಿಮ್ಮ ತಂದೆಯೇ ಸೈಟು ಮಾರಿರುವುದಾಗಿ ಹೇಳುತ್ತಿದ್ದಾನೆ ಎಂದು ಆರೋಪಿಸಿ ಮಂಜುನಾಥ್ ರೆಡ್ಡಿ ಲೋಕಾಯುಕ್ತಕ್ಕೆ ದೂರು ನೀಡಲು ಬಂದಿದ್ದ.