BMTC ಬಸ್ ಟಿಕೆಟ್ ಹರಿಯುವ ಇಲ್ಲವೇ ಎಸೆಯುವ ಮುನ್ನ ಸ್ವಲ್ಪ ಯೋಚಿಸಿ..?
ಹೆಚ್ಚಿನ ಬಿಎಂಟಿಸಿ ಪ್ರಯಾಣಿಕರು(BMTC passengers) ತಮ್ಮ ನಿಲ್ದಾಣ ಬಂದ ಕೂಡಲೇ ಬಸ್ ಟಿಕೆಟ್ (Bus ticket) ಅನ್ನು ಹರಿದು ಹಾಕುತ್ತಾರೆ ಇಲ್ಲದಿದ್ದರೆ ಎಸೆಯುತ್ತಾರೆ.(Throw away) ಆದರೆ ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿ ಅಂಜಲಿ ಎಸ್. ಬಸ್ ಟಿಕೆಟ್ ಹರಿಯದೆಯೇ, ಎಸೆಯದೆಯೇ ತಮ್ಮ ಬಳಿ ಇರಿಸಿದ್ದರಿಂದ ಆದ ಪ್ರಯೋಜನವನ್ನು(Advantage) ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಸುದ್ದಿ ಓದಿದ ನಂತರ ನೀವು ಯಾವುದೇ ಬಿಎಂಟಿಸಿ ಟಿಕೆಟ್ ಹರಿಯುವ ಇಲ್ಲವೇ ಎಸೆಯುವ ಮುನ್ನ ಸ್ವಲ್ಪ ಯೋಚಿಸುತ್ತೀರಿ(Thinking a little bit ) ಎಂಬುದಂತೂ ನಿಜ.
ಬಸ್ ಟಿಕೆಟ್‌ನಿಂದ ಆದ ಪ್ರಯೋಜನ:
ಅಂಜಲಿಯವರು ಏರ್‌ಪೋರ್ಟ್‌ನಿಂದ ವಾಯು ವಜ್ರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಇವರು ಪ್ರಯಾಣ ಸಮಯದಲ್ಲಿ ಗಿಡಗಳ ಬಾಕ್ಸ್ ಅನ್ನು ಬಸ್‌ನಲ್ಲಿಯೇ ಮರೆತಿದ್ದರು. ಮಾರತ್‌ಹಳ್ಳಿ ಸ್ಟಾಪ್‌ನಲ್ಲಿ ಇಳಿದ ನಂತರ ಇವರಿಗೆ ಗಿಡಗಳ ಬಾಕ್ಸ್ ನೆನಪಾಗಿದೆ. ಅಂಜಲಿ ತಮ್ಮ ಬಳಿ ಬಸ್ ಟಿಕೆಟ್ ಇರಿಸಿಕೊಂಡಿದ್ದರು ಹಾಗೂ ಅದರಲ್ಲಿ ಡಿಪೋ ನಂಬರ್ ಇತ್ತು. ಡಿಪೋ ನಿರ್ವಾಹಕರಾದ ವಿಲ್ಸನ್‌ರನ್ನು ಅಂಜಲಿಯವರು ಸಂಪರ್ಕಿಸಿದರು ಹಾಗೂ ತಮ್ಮ ಟಿಕೆಟ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದರು. ಮರುದಿನವೇ ಅವರಿಗೆ ಬಾಕ್ಸ್ ದೊರೆಯಿತು ಎಂದು ತಿಳಿಸಿದ್ದಾರೆ.
ಬಸ್‌ನಲ್ಲಿ ಯಾರಾದರೂ ಪ್ರಯಾಣಿಕರು ಏನನ್ನಾದರೂ ಮರೆತಲ್ಲಿ ಹಾಗೂ ಅವರು ಟಿಕೆಟ್ ಹೊಂದಿದ್ದರೆ ವಾಹನವನ್ನು ಟ್ರ್ಯಾಕ್ ಮಾಡಲು ಮತ್ತು ಅವರು ಮರೆತ ವಸ್ತು ಹುಡುಕಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ ಎಂಬುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ ಕರ್ತವ್ಯ ನಿಷ್ಠತೆ:
ಮರೆತುಹೋದ ವಸ್ತುವನ್ನು ಪ್ರಯಾಣಿಕರು ಮರಳಿ ಪಡೆಯುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಏಕೆಂದರೆ ಇಂತಹುದ್ದೇ ಹಲವಾರು ಘಟನೆಗಳಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರಣ್ಯಪುರ ನಿವಾಸಿ ಮಧುಸೂಧನ್ ಪತ್ನಿ ನವೆಂಬರ್ 22ರಂದು ಎಸ್ಟೀಮ್ ಮಾಲ್ ಬಸ್‌ಸ್ಟಾಪ್‌ನಲ್ಲಿ ತಮ್ಮ ಬ್ಯಾಗ್ ಮರೆತಿದ್ದರು. ಬಿಎಂಟಿಸಿಯು ಬ್ಯಾಗ್‌ನಲ್ಲಿದ್ದ ಆಭರಣ ಹಾಗೂ 6.3 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದ್ದನ್ನು ನೆನಪಿಸಿಕೊಂಡರು. ಬಿಎಂಟಿಸಿ ಟ್ರಾಫಿಕ್ ಕಂಟ್ರೋಲರ್ ಪ್ರಕಾಶ್ ಹಾಗೂ ಶಮಿಸಾಬ್‌ರಿಗೆ ನಾವು ಕೃತಜ್ಞರು ಎಂದು ಮಧುಸೂಧನ್ ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ:
ಬಿಎಂಟಿಸಿ ಸಿಬ್ಬಂದಿಕರು ಕೆಲವೊಬ್ಬರು ಪ್ರಯಾಣಿಕರಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ. ಕಳೆದ ತಿಂಗಳು ವಾಯು ವಜ್ರ ಬಸ್‌ನಲ್ಲಿ ಪ್ರಯಾಣಿಸಿದ್ದ ಯೋಗದಾ ಜೋಶಿ, ಲಿಂಕ್ಡ್ ಇನ್‌ನಲ್ಲಿ ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಧನ್ಯವಾದ ಸಮರ್ಪಿಸಿದ್ದು ಸುರಕ್ಷಿತವಾಗಿ ತಮ್ಮನ್ನು ಬಸ್ ನಿಲ್ದಾಣಕ್ಕೆ ತಲುಪಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಸಮಯದಲ್ಲಿ ಯೋಗದಾ ಆ ದಿನದ ತಮ್ಮ ಬಸ್ ಪ್ರಯಾಣದ ನೆನಪನ್ನು ಹಂಚಿಕೊಂಡಿದ್ದು ನಿರ್ವಾಹಕ ಹಾಗೂ ಚಾಲಕನಲ್ಲದೆ ಐದು ಇತರ ಪುರುಷರು ಸಹ ಪ್ರಯಾಣಿಕರೊಂದಿಗೆ ಯೋಗದಾ ಪ್ರಯಾಣಿಸುತ್ತಿದ್ದರು. ಬಸ್‌ನಲ್ಲಿ ಆಕೆ ಮಾತ್ರವೇ ಮಹಿಳಾ ಪ್ರಯಾಣಿಕರಾಗಿದ್ದರು. ಕ್ಯಾಬ್ ಪ್ರಯಾಣ ಸುರಕ್ಷಿತವಲ್ಲವೆಂದು ಕಂಡುಕೊಂಡ ಯೋಗದಾ ತಡರಾತ್ರಿ ಸಮಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಹೇಗೆಂಬ ಗೊಂದಲದಲ್ಲಿಯೇ ಬಸ್ ಹತ್ತಿದ್ದರು. ಆದರೆ ಸಂಪೂರ್ಣ ಪ್ರಯಾಣದಲ್ಲಿ ತಾವು ಸುರಕ್ಷಿತಳಾಗಿದ್ದೆ ಎಂದು ಯೋಗದಾ ಸ್ಮರಿಸಿದ್ದಾರೆ.
ನಿರ್ವಾಹಕರಿಗೆ ಸನ್ಮಾನ
ಕೊನೆಯದಾಗಿ ಅವರು ಇಳಿಯುವ ನಿಲ್ದಾಣ ಬಂದಾಗ ನಿರ್ವಾಹಕ ಹಾಗೂ ಚಾಲಕನ ಸೇವಾ ಮನೋಭಾವವನ್ನು ಹಾಗೂ ಒಂಟಿ ಮಹಿಳೆಗೆ ಅವರು ನೀಡಿದ ರಕ್ಷಣೆಯನ್ನು ಹೃದಯಾಂತರಾಳದಿಂದ ಸ್ಮರಿಸಿದ್ದಾರೆ. ಯೋಗದಾ ಅವರ ತಂದೆ ಬರುವವರೆಗೆ ಇವರಿಬ್ಬರು ಕಾದಿದ್ದು ನಂತರವಷ್ಟೇ ಬಸ್ ಅನ್ನು ಅಲ್ಲಿಂದ ಚಲಾಯಿಸಿದರು ಎಂದು ತಿಳಿಸಿದ್ದಾರೆ.
ತಂದೆಯವರು ಬಂದೊಡನೆ ಬಸ್ ಅಲ್ಲಿಂದ ಮುಂದುವರಿಯಿತು ಎಂದು ಯೋಗದಾ ತಿಳಿಸಿದ್ದಾರೆ. ಬಿಎಂಟಿಸಿ ಹಾಗೂ ಬೆಂಗಳೂರು ನಗರಕ್ಕೆ ನನ್ನನ್ನು ಸುರಕ್ಷಿತವಾಗಿ ತಲುಪಿಸಿದ್ದಕ್ಕೆ ನಾನು ಕೃತಜ್ಞಳು ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ದೊರೆತೊಡನೆಯೇ ಬಸ್ ನಿರ್ವಾಹಕರಾದ (ಕಂಡೆಕ್ಟರ್) ಪಾರ್ಥ ಸಾರಥಿ ಹಾಗೂ ಬಸ್ ಚಾಲಕರಾದ ರಾಮಚಂದ್ರ ಅವರನ್ನು ಬಿಎಂಟಿಸಿ ಸನ್ಮಾನಿಸಿದೆ.